Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ

Funny Video: ವಿಡಿಯೋದಲ್ಲಿ ಮಗು ಮರವೊಂದಕ್ಕೆ ಕಟ್ಟಲಾಗಿರುವ ಜೋಕಾಲಿಯ ಮೇಲೆ ಕುಳಿತು ಆಟವಾಡುತ್ತಿದೆ. ಬಳಿಕ ಆ ಪುಟಾಣಿಗೆ ಏನು ತೋಚುತ್ತದೆ ಗೊತ್ತಿಲ್ಲ. ಅದು ಜೋಕಾಲಿಯಿಂದ ಕೆಳಕ್ಕಿಳಿದು ಜೋಕಾಲಿಯನ್ನು ತಿರುಗಿಸುತ್ತದೆ. ಬಳಿಕ ಅದು ಪುನಃ ಜೋಕಾಲಿಯ ಮೇಲೆ ಕುಳಿತುಕೊಳ್ಳುತ್ತದೆ. ಮಗುವಿನ ಅಸಲಿ ಜೋಕಾಲಿ ಆಟ ಆಗ ಶುರುವಾಗುತ್ತದೆ...  

Written by - Nitin Tabib | Last Updated : Dec 5, 2022, 09:37 PM IST
  • ಈ ವೀಡಿಯೋ ಒಂದು ಚಿಕ್ಕ ಮಗುವಿನ ವಿಡಿಯೋ ಆಗಿದೆ.
  • ಅದು ಜೋಕಾಲಿಯ ಮೇಲೆ ಕುಳಿತು ಆಟವಾಡುತ್ತಿದೆ.
  • ಈ ಸಂದರ್ಭದಲ್ಲಿ ಮಗುವಿನ ಜೊತೆಗೆ ನಡೆಯುವ ತಮಾಷೆಯನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರರಿಗೆ ತಮ್ಮ ನಗು ತಡೆದುಕೊಳ್ಳಲಿಕ್ಕೆ ಆಗುತ್ತಿಲ್ಲ.
Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ title=
Trending Funny Video

Funny Video: ನೀವು ಸಾಮಾಜಿಕ ಮಾಧ್ಯಮದಲ್ಲಿ ಹಲವು ತಮಾಷೆಯ ವೀಡಿಯೊಗಳನ್ನು ನೋಡಿರಬೇಕು, ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋವನ್ನು ನೋಡಿದ ನಂತರ ನೀವೂ ಕೂಡ ನಿಮ್ಮ ಹೊಟ್ಟೆ ಹಿಡಿದು ನಗುವುದಂತು ಗ್ಯಾರಂಟಿ. ಈ ವೀಡಿಯೋ ಒಂದು ಚಿಕ್ಕ ಮಗುವಿನ ವಿಡಿಯೋ ಆಗಿದೆ. ಅದು ಜೋಕಾಲಿಯ ಮೇಲೆ ಕುಳಿತು ಆಟವಾಡುತ್ತಿದೆ. ಈ ಸಂದರ್ಭದಲ್ಲಿ ಮಗುವಿನ ಜೊತೆಗೆ ನಡೆಯುವ ತಮಾಷೆಯನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರರಿಗೆ ತಮ್ಮ ನಗು ತಡೆದುಕೊಳ್ಳಲಿಕ್ಕೆ ಆಗುತ್ತಿಲ್ಲ.

ಇದನ್ನೂ ಓದಿ-Viral Video: ಮಾರುಕಟ್ಟೆಯಲ್ಲಿ ನಾಯಿ ತರಕಾರಿ ಖರೀದಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

ಈ ರೀತಿಯ ವೀಡಿಯೊ ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ
ಪುಟಾಣಿ ಮಗು ಜೋಕಾಲಿಯಲ್ಲಿ ಆಟವಾದುವುದರಿಂದ ಈ ವೀಡಿಯೊ ಪ್ರಾರಂಭವಾಗುತ್ತದೆ. ಮರಕ್ಕೆ ಹಾಕಿದ ಹಗ್ಗದ ಜೋಕಾಲಿಯ ಮೇಲೆ ಮಗು ಕುಳಿತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಇದಾದ ಬಳಿಕ ಮಗುವಿಗೆ ಏನು ತೋಚುತ್ತದೆಯೋ ಗೊತ್ತಿಲ್ಲ. ಅದು ಜೋಕಾಲಿಯಿಂದ ಕೆಳಕ್ಕೆ ಇಳಿದು ಜೋಕಾಲಿಯನ್ನು ತಿರುಗಿಸುತ್ತದೆ. ಬಳಿಕ ಅದು ಮತ್ತೆ ಜೋಕಾಲಿಯಲ್ಲಿ ಕುಳಿತು ತನ್ನ ಪಾದಗಳನ್ನು ಮೇಲಕ್ಕೆತ್ತುತ್ತದೆ.  ಆಗ ಮಗುವಿನ ನಿಜವಾದ ಜೋಕಾಲಿ ಆಟ ಆರಂಭವಾಗುತ್ತದೆ. ಜೋಕಾಲಿ ಸುತ್ತಿಕೊಂಡ ಕಾರಣ ಅದು ಜೋರಾಗಿ ತಿರುಗಲು ಆರಂಭಿಸುತ್ತದೆ. ಮಗು ಈ ಸ್ವಿಂಗ್ ನಿಂದ ಹೊರಬರಲು ಪ್ರಯತ್ನಿಸುತ್ತದೆ. ಜೋಕಾಲಿ ತಿರುಗುವುದು ನಿಂತ ಬಳಿಕ ಮಗು ನೆಲಕ್ಕೆ ಇಳಿಯುತ್ತದೆ. ಆಗ ನಿಜವಾದ ತಮಾಷೆ ಶುರುವಾಗುತ್ತದೆ. ಯಾವುದಕ್ಕೂ ಒಂದು ಸಾರಿ ಮೊದಲು ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ...

ಇದನ್ನೂ ಓದಿ-Viral Parliament Fight: ಬಜೆಟ್ ಅಧಿವೇಶನದಲ್ಲಿ ಸಂಸದರ ಗುದ್ದಾಟ... ವಿಡಿಯೋ ನೋಡಿ

ಮಗುವು ತನ್ನ ಪಾದಗಳನ್ನು ಕೆಳಗೆ ಇಟ್ಟ ತಕ್ಷಣ ಕಂಟ್ರೋಲ್ ತಪ್ಪಿ ನೆಲದ ಮೇಲೆ ಬೀಳುತ್ತದೆ. ವಾಸ್ತವದಲ್ಲಿ, ಮಗು ವೃತ್ತಾಕಾರದ ಚಲನೆಯಿಂದ ತಲೆತಿರುಗುವಿಕೆಯನ್ನು ಅನುಭವಿಸುತ್ತಿರುತ್ತದೆ. ಮೊದಲ ಬಾರಿಗೆ ಬಿದ್ದ ನಂತರ ಮಗು ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸುತ್ತದೆ ಮತ್ತು ಮತ್ತೆ ಸ್ವಲ್ಪ ದೂರಕ್ಕೆ ಹೋಗಿ ಬೀಳುತ್ತದೆ. ಇದುವರೆಗೆ ಎಲ್ಲವೂ ಸರಿಯಾಗಿದೆ, ಆದರೆ, ನಂತರ ಮಗು ಮೂರನೇ ಬಾರಿಗೆ ಎದ್ದು ರಸ್ತೆ ಬದಿಯಲ್ಲಿರುವ ಹುಲ್ಲಿನ ಮೇಲೆ ಹೋಗಿ ಬೀಳುವ ದೃಶ್ಯ ತುಂಬಾ ತಮಾಷೆಯಾಗಿದೆ. ಮಗು ಮತ್ತೆ ಮತ್ತೆ ಬೀಳುವುದನ್ನು ತಮಾಷೆಯಾಗಿ ನೋಡುತ್ತಿರುವ ಜನ ಖುಷಿ ಪಡುತ್ತಿದ್ದಾರೆ. ವೀಡಿಯೊವನ್ನು _digital.ayush_210 ಹೆಸರಿನ Instagram ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 'ಅಗ್ಗ ಮತ್ತು' ಎಂಬ ಶೀರ್ಷಿಕೆಯನ್ನೂ ಕೂಡ ನೀಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News