ಬೆಂಗಳೂರು : ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಮವಾರ (ಡಿ 12) ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ. ದಕ್ಷಿಣ ರಾಜ್ಯದಲ್ಲಿ ಇದು ಮೊದಲ ಬಾರಿಗೆ ಝಿಕಾ ವೈರಸ್ ದೃಢಪಟ್ಟಿದೆ. ಝಿಕಾ ವೈರಸ್ನ ಸುದ್ದಿ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸರ್ಕಾರವು ರೋಗವನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಮಾರ್ಗಸೂಚಿಗಳನ್ನು ಸಹ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಝಿಕಾ ವೈರಸ್ ದೃಢಪಟ್ಟ ನಂತರ ಪ್ರಕರಣದ ಕುರಿತು ನಾವು ಪುಣೆಯಿಂದ ಲ್ಯಾಬ್ ವರದಿಯನ್ನು ಪಡೆದುಕೊಂಡಿದ್ದೇವೆ. ಡಿಸೆಂಬರ್ 5 ರಂದು, ಅದನ್ನು ಸಂಸ್ಕರಿಸಿ ಡಿಸೆಂಬರ್ 8 ರಂದು ವರದಿ ಮಾಡಲಾಗಿದೆ. ಮೂರು ಮಾದರಿಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ ಎರಡು ನೆಗೆಟಿವ್ ಮತ್ತು ಒಂದು ಪಾಸಿಟಿವ್ ಬಂದಿದೆ. ಅದು ಐದು ವರ್ಷದ ಬಾಲಕಿಗೆ, ನಾವು ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: Mandous Cyclone : ಡಿಸೆಂಬರ್ 15ರವರೆಗೂ ರಾಜ್ಯದಲ್ಲಿ ವರುಣಾರ್ಭಟ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ತಿಂಗಳ ಹಿಂದೆ ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಕರ್ನಾಟಕದಲ್ಲಿ ಇದು ಮೊದಲ ದೃಢಪಡಿಸಿದ ಪ್ರಕರಣವಾಗಿದೆ. ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ಪರೀಕ್ಷೆಗೆ ಒಳಪಡಿಸಿದಾಗ ಝಿಕಾ ವೈರಸ್ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ, ಅಂತಹ 10 ಪ್ರತಿಶತ ಮಾದರಿಗಳನ್ನು ಪರೀಕ್ಷೆಗೆಂದು ಪುಣೆಗೆ ಕಳುಹಿಸಲಾಗುತ್ತದೆ, ಅದರಲ್ಲಿ ಇಂದು ಪಾಸಿಟಿವ್ ಕಂಡುಬಂದಿದೆ ಎಂದರು. ಅಲ್ಲದೆ, ಹುಡುಗಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಸಮೀಪದ ಜಿಲ್ಲೆಗಳಲ್ಲಿ ಶಂಕಿತ ಪ್ರಕರಣಗಳ ಬಗ್ಗೆ ಸರ್ಕಾರ ನಿಗಾ ಇರಿಸಿದೆ ಎಂದು ತಿಳಿಸಿದರು.
A 5-year-old girl in Karnataka has tested positive for the Zika virus & has been advised to take precautionary measures. This is first case in state & govt is monitoring the situation carefully. Our dept is well prepared to handle it: State Health Minister K Sudhakar
(File Pic) pic.twitter.com/ZH1n00nYxL
— ANI (@ANI) December 13, 2022
ಜಿಕಾ ವೈರಸ್ ಎಂದರೇನು? : ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝಿಕಾ ವೈರಸ್ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಸೊಳ್ಳೆಗಳು ಡೆಂಗ್ಯೂ, ಚಿಕೂನ್ಗುನ್ಯಾ ಮತ್ತು ನಗರ ಹಳದಿ ಜ್ವರವನ್ನು ಸಹ ಹರಡುತ್ತವೆ. ಜಿಕಾ ವೈರಸ್ ಅನ್ನು ರಕ್ತ ಪರೀಕ್ಷೆ ಅಥವಾ ಇತರ ದೇಹದ ದ್ರವಗಳನ್ನು ಒಳಗೊಂಡ ಪರೀಕ್ಷೆಗಳ ಮೂಲಕ ರೋಗನಿರ್ಣಯ ಮಾಡಲಾಗುತ್ತದೆ. ಝಿಕಾ ವೈರಸ್ಗೆ ಇನ್ನೂ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ.
ಇದನ್ನೂ ಓದಿ: ಮೌಢ್ಯಕ್ಕೆ ಸಡ್ಡು ಹೊಡೆದ ಎರಡನೇ ಸಿಎಂ ಬಸವರಾಜ ಬೊಮ್ಮಾಯಿ!!
ಝಿಕಾ ವೈರಸ್ನ ಲಕ್ಷಣಗಳೇನು? : WHO ಪ್ರಕಾರ, ದದ್ದುಗಳು, ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಅಲ್ಲದೆ, ಝಿಕಾ ವೈರಸ್ ಗುರಿಯಾಗುವ ಹೆಚ್ಚಿನ ಜನರಲ್ಲಿ ರೋಗಲಕ್ಷಣಗಳು ಕಂಡು ಬರುವುದಿಲ್ಲ. ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.