Weight Loss Tips:ಈ ಸಿರಿಧಾನ್ಯದ ಸೇವನೆಯಿಂದ ದೇಹದ ಹೆಚ್ಚುವರಿ ಕೊಬ್ಬು ಸುಡುತ್ತದೆ

Weight Loss Tips: ಒಂದು ವೇಳೆ ನೀವೂ ಕೂಡ ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ, ನೀವು ನಿಮ್ಮ ಆಹಾರದಲ್ಲಿ ಫಿಂಗರ್ ಮಿಲೆಟ್ ಅಥವಾ ರಾಗಿಯಿಂದ ತಯಾರಿಸಲಾಗುವ ರೊಟ್ಟಿ, ದೋಸೆ, ಮುದ್ದೆ  ಇತ್ಯಾದಿಗಳನ್ನು ಇಂದೇ ಶಾಮೀಲುಗೊಳಿಸಿ. ಬನ್ನಿ ರಾಗಿ ಸೇವನೆಯಿಂದಾಗುವ ಲಾಭ-ನಷ್ಟಗಳು ಯಾವುವು ತಿಳಿದುಕೊಳ್ಳೋಣ,  

Written by - Nitin Tabib | Last Updated : Jan 5, 2023, 10:24 PM IST
  • ನೀವೂ ಕೂಡ ಒಂದು ವೇಳೆ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ,
  • ನೀವು ಬೆಳಗ್ಗೆ ರಾಗಿಯನ್ನು ಸೇವಿಸಬೇಕು.
  • ಬೆಳಗಿನ ಉಪಾಹಾರದಲ್ಲಿ ರಾಗಿಯಿಂದ ಮಾಡಿದ ಖಿಚಡಿ, ರಾಗಿಯ ಇಡ್ಲಿ, ರಾಗಿಯ ದೋಸೆಯನ್ನು ನೀವು ಸೇವಿಸಬಹುದು.
Weight Loss Tips:ಈ ಸಿರಿಧಾನ್ಯದ ಸೇವನೆಯಿಂದ ದೇಹದ ಹೆಚ್ಚುವರಿ ಕೊಬ್ಬು ಸುಡುತ್ತದೆ title=
Ragi Benefits

Ragi for Weight Loss - ಅಮೈನೋ ಆಮ್ಲಗಳು, ಫೈಬರ್ ನಿಂದ ಸಮೃದ್ಧವಾದ ಆಹಾರ ಪದಾರ್ಥಗಳಲ್ಲಿ ರಾಗಿ ಕೂಡ ಒಂದು, ಇದು ತೂಕವನ್ನು ಹೆಚ್ಚಾಗಲು ಬಿಡುವುದಿಲ್ಲ. ರಾಗಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ಸಕ್ಕರೆಯ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿನ ರಕ್ತದ ಕೊರತೆಯನ್ನು ಇದು ನೀಗಿಸುತ್ತೆ. ಇದಲ್ಲದೆ, ರಾಗಿಯ ಸೇವನೆಯು ತೂಕ ಇಳಿಕೆಗೆ ಕಾರಣವಾಗುತ್ತದೆ. ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವೂ ಕೂಡ ಫಿಂಗರ್ ಮಿಲೆಟ್ ಅಥವಾ ರಾಗಿಯಿಂದ ತಯಾರಿಸಲಾದ  ದೋಸೆ ಅಥವಾ ರೊಟ್ಟಿಯನ್ನು ಸೇವಿಸಬಹುದು. ತೂಕ ಇಳಿಕೆಯಲ್ಲಿ ರಾಗಿಯ ಪ್ರಯೋಜನಗಳು ಮತ್ತು ಅದನ್ನು ತಿನ್ನುವ ಸರಿಯಾದ ಮಾರ್ಗ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಇದರಲ್ಲಿನ ಫೈಬರ್ ತೂಕ ಇಳಿಕೆಗೆ ಸಹಕಾರಿ
ನಾರಿನಾಂಶದಿಂದ ಸಮೃದ್ಧ ಆಹಾರ ಪದಾರ್ಥಗಳಲ್ಲಿ ರಾಗಿ ಕೂಡ ಒಂದು. ನಾರಿನ ಸೇವನೆಯಿಂದ ಹೊಟ್ಟೆ ತುಂಬಿದ ಭಾವನೆಯು ದೀರ್ಘಕಾಲದವರೆಗೆ ಇರುತ್ತದೆ. ಈ ಕಾರಣದಿಂದಾಗಿ, ನಿಮಗೆ ಬೇಗನೆ ಹಸಿವಾಗುವುದಿಲ್ಲ ಮತ್ತು ಹಿಂದೆ-ಮುಂದೆ ನೋಡದೆ ಏನನ್ನೂ ತಿನ್ನುವುದರಿಂದ ನೀವು ಪಾರಾಗುವಿರಿ.

ರಾಗಿಯಲ್ಲಿರುವ ಪ್ರೊಟೀನ್ ಕೂಡ ತೂಕ ಇಳಿಕೆಗೆ ಕಾರಣ
ರಾಗಿಯಲ್ಲಿ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಪ್ರೋಟೀನ್ ಸ್ನಾಯುಗಳ ಆರೋಗ್ಯಕ್ಕೆ ಉತ್ತಮ  ನಿತ್ಯ ರಾಗಿಯನ್ನು ಸೇವಿಸಿದರೆ ದೇಹದಲ್ಲಿ ಕೊಬ್ಬು ಹೆಚ್ಚಾಗುವ ಸಮಸ್ಯೆ ಇರುವುದಿಲ್ಲ. ಆದರೂ ಕೂಡ ತೂಕ ಇಳಿಸಿಕೊಳ್ಳಲು ಬಯಸುವವರು ರಾಗಿಯನ್ನು ಎಷ್ಟು ಸೇವಿಸಬೇಕು ಎಂಬುದನ್ನು ಆಹಾರ ತಜ್ಞರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ
ನೀವು ರಾಗಿಯನ್ನು ಯಾವುದೇ ರೂಪದಲ್ಲಿ ಸೇವಿಸಿದಾಗ, ಅದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವು ಸ್ಥಿರವಾಗಿರುತ್ತದೆ. ಇದು ನಿಮಗೆ ಬೇಗನೆ ಹಸಿವಿನ ಭಾವನೆಯನ್ನು ಉಂಟುಮಾಡುವುದಿಲ್ಲ. ತೂಕ ಹೆಚ್ಚಾಗುವ ಸಮಸ್ಯೆಯಿಂದ ನೀವು ಪಾರಾಗುವಿರಿ

ಇದನ್ನೂ ಓದಿ-Health Tips: ವೈಟ್ ಶುಗರ್ ಬದಲು ಬ್ರೌನ್ ಶುಗರ್ ಬಳಸಿ, ಆರೋಗ್ಯದಲ್ಲಿ ಚಿನ್ನದಂತ ಮೆರಗು ಪಡೆಯಿರಿ

ತೂಕ ಇಳಿಕೆ ಮಾಡಿಕೊಳ್ಳಲು ರಾಗಿಯನ್ನು ಹೇಗೆ ಸೇವಿಸಬೇಕು?
ನೀವೂ ಕೂಡ ಒಂದು ವೇಳೆ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಬೆಳಗ್ಗೆ ರಾಗಿಯನ್ನು ಸೇವಿಸಬೇಕು. ಬೆಳಗಿನ ಉಪಾಹಾರದಲ್ಲಿ ರಾಗಿಯಿಂದ ಮಾಡಿದ ಖಿಚಡಿ, ರಾಗಿಯ ಇಡ್ಲಿ, ರಾಗಿಯ ದೋಸೆಯನ್ನು ಸೇವಿಸುವುದರಿಂದ ಆರೋಗ್ಯದ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ನೀವು ರಾತ್ರಿ ರಾಗಿ ರೊಟ್ಟಿ ತಿನ್ನಬಹುದು. ಸಾಯಂಕಾಲ ಹಸಿವೆಯಾದರೆ, ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಬದಲು, ರಾಗಿ ಕುಕ್ಕೀಸ್ ಇತ್ಯಾದಿಗಳನ್ನು ಸೇವಿಸುವುದರಿಂದ ತೂಕ ಇಳಿಕೆಯಾಗಲು ನೆರವು ಸಿಗುತ್ತದೆ.

ಇದನ್ನೂ ಓದಿ-Heart Health: ನೀವೂ ಬಿಸಿಲಲ್ಲಿ ಸುತ್ತಾಡುವುದಿಲ್ಲವೇ... ಈ ಹೊಸ ಅಧ್ಯಯನ ನಿಮಗೆ ತಿಳಿದಿರಲಿ

ರಾಗಿಯ ಪ್ರಯೋಜನಗಳು
>> ಸಣ್ಣ ಕೆಂಪು ಬಣ್ಣದ ರಾಗಿಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
>> ರಕ್ತಹೀನತೆಯಿಂದ ಬಳಲುತ್ತಿರುವವರು ರಾಗಿಯನ್ನು ಸೇವಿಸುವುದು ಆರೋಗ್ಯಕರ.
>> ರಾಗಿ (ಫಿಂಗರ್ ಮಿಲೆಟ್) ಮೂಳೆಗಳನ್ನು ಬಲಪಡಿಸುತ್ತದೆ.
>> ತೂಕ ಇಳಿಸಿಕೊಳ್ಳಲು ರಾಗಿಯನ್ನು ಬಳಸಿ.
>> ಮಲಬದ್ಧತೆಯ ಸಮಸ್ಯೆ ನಿವಾರಣೆಗೆ ಇದು ಉತ್ತಮ ಆಹಾರ
>>  ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ.
>> ಮೊಡವೆ, ಕಪ್ಪು ವರ್ತುಲ, ನಸುಕಂದು ಮಚ್ಚೆ, ಸುಕ್ಕುಗಳಂತಹ ಚರ್ಮ ಸಂಬಂಧಿ ಸಮಸ್ಯೆ ಇರುವವರು ರಾಗಿಯನ್ನು ಸೇವಿಸಬೇಕು. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರಲ್ಲಿ ಲೈಸಿನ್ ಎಂಬ ಅಂಶವಿದ್ದು, ಇದು ಚರ್ಮವನ್ನು ಬಿಗಿಗೊಳಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News