Honda Activa: ಹೊಸ ಅಗ್ಗದ ಹೋಂಡಾ ಆಕ್ಟಿವಾ ಬಿಡುಗಡೆ, ವೈಶಿಷ್ಟ್ಯಗಳು ಮತ್ತು ಬೆಲೆ ತಿಳಿಯಿರಿ

ಹೊಸ ಹೋಂಡಾ ಆಕ್ಟಿವಾ: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಅತ್ಯುತ್ತಮ ಮಾರಾಟವಾದ ಸ್ಕೂಟರ್ ಆಕ್ಟಿವಾ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. H-ಸ್ಮಾರ್ಟ್ ತಂತ್ರಜ್ಞಾನವನ್ನು ಇದರ ಉನ್ನತ ರೂಪಾಂತರದಲ್ಲಿ ನೀಡಲಾಗಿದೆ.

Written by - Puttaraj K Alur | Last Updated : Jan 23, 2023, 06:29 PM IST
  • ಹೊಸ ಆಕ್ಟಿವಾವನ್ನು ಸ್ಟ್ಯಾಂಡರ್ಡ್, ಡಿಲಕ್ಸ್ & ಸ್ಮಾರ್ಟ್ ಎಂಬ 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ
  • ಸ್ಮಾರ್ಟ್ ಅನ್ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಸೇಫ್ ಮತ್ತು ಸ್ಮಾರ್ಟ್ ಫೈಂಡ್ ಎಂಬ 4 ವೈಶಿಷ್ಟ್ಯಗಳಿವೆ
  • ಸ್ಟ್ಯಾಂಡರ್ಡ್ ವೇರಿಯಂಟ್ 74,536 ರೂ., ಡೀಲಕ್ಸ್ ವೇರಿಯಂಟ್ 77,036 ರೂ. ಮತ್ತು ಸ್ಮಾರ್ಟ್ ವೆರಿಯಂಟ್ 80,537 ರೂ.
Honda Activa: ಹೊಸ ಅಗ್ಗದ ಹೋಂಡಾ ಆಕ್ಟಿವಾ ಬಿಡುಗಡೆ, ವೈಶಿಷ್ಟ್ಯಗಳು ಮತ್ತು ಬೆಲೆ ತಿಳಿಯಿರಿ title=
ಅಗ್ಗದ ಹೋಂಡಾ ಆಕ್ಟಿವಾ

ನವದೆಹಲಿ: ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ ತನ್ನ ಅತ್ಯುತ್ತಮ ಮಾರಾಟವಾದ ಸ್ಕೂಟರ್ ಆಕ್ಟಿವಾದ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. H-ಸ್ಮಾರ್ಟ್ ತಂತ್ರಜ್ಞಾನವನ್ನು ಇದರ ಉನ್ನತ ರೂಪಾಂತರದಲ್ಲಿ ನೀಡಲಾಗಿದೆ. ಸ್ಕೂಟರ್ ಹೊಂದಿರುವ ಹೊಸ ಅಪ್‍ಡೇಟ್‍ ಎಂದರೆ ಅದರ ಕೀ ಫೋಬ್. ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ 'ಸ್ಮಾರ್ಟ್ ಕೀ'ಯೊಂದಿಗೆ ಬರುತ್ತದೆ. ನಿರ್ದಿಷ್ಟವಾಗಿ 4 ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ. ಸ್ಮಾರ್ಟ್ ಅನ್ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಸೇಫ್ ಮತ್ತು ಸ್ಮಾರ್ಟ್ ಫೈಂಡ್. ಎಚ್-ಸ್ಮಾರ್ಟ್ ತಂತ್ರಜ್ಞಾನವನ್ನು ಹೊರತುಪಡಿಸಿ ಸ್ಕೂಟರ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

ಹೊಸ ಆಕ್ಟಿವಾವನ್ನು ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಎಂಬ 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 'ಸ್ಮಾರ್ಟ್ ಕೀ' ಆರಂಭಿಕ 2 ರೂಪಾಂತರಗಳಾದ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್‍ನಲ್ಲಿ ಲಭ್ಯವಿಲ್ಲ. ಈ ವೈಶಿಷ್ಟ್ಯವು ಅದರ ಸ್ಮಾರ್ಟ್ ರೂಪಾಂತರಕ್ಕೆ ಮಾತ್ರ ಕಾಯ್ದಿರಿಸಲಾಗಿದೆ. ಈ ರೂಪಾಂತರವು ಅತ್ಯಂತ ದುಬಾರಿಯಾಗಿದೆ. ಇದರ ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ 74,536 ರೂ. ಆದರೆ, ಡೀಲಕ್ಸ್ ವೇರಿಯಂಟ್ ಬೆಲೆ 77,036 ರೂ. ಮತ್ತು ಸ್ಮಾರ್ಟ್ ವೆರಿಯಂಟ್ ಬೆಲೆ 80,537 ರೂ. ಆಗಿದೆ, ಹೊಸ ಹೋಂಡಾ ಆಕ್ಟಿವಾದಲ್ಲಿ 109.51cc ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ನೀಡಲಾಗುತ್ತಿದ್ದು, ಇದು 7.73 bhp ಪವರ್ ಮತ್ತು 8.9 Nm ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಸಿವಿಟಿಯೊಂದಿಗೆ ಬರುತ್ತದೆ.

ಇದನ್ನೂ ಓದಿ: Bank hikes interest Rate: ಉಳಿತಾಯ ಖಾತೆಯ ಬಡ್ಡಿದರ ಹೆಚ್ಚಳ: ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದವರಿಗೆ ಹಿಂದೆಂದೂ ಕಂಡಿರದ ಬಂಪರ್ ಲಾಭ!

H-ಸ್ಮಾರ್ಟ್ ತಂತ್ರಜ್ಞಾನ ಮತ್ತು 'ಸ್ಮಾರ್ಟ್ ಕೀ'

ಸ್ಕೂಟರ್‌ನ ಕೀಲಿಯಲ್ಲಿ 2 ಬಟನ್‌ಗಳನ್ನು ನೀಡಲಾಗಿದೆ, ಇದರಲ್ಲಿ ಒಂದು ಬಟನ್ ಸ್ಮಾರ್ಟ್ ಫೈಂಡ್ ವೈಶಿಷ್ಟ್ಯಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ನಿಮ್ಮ ಸ್ಕೂಟರ್ ಕಿಕ್ಕಿರಿದ ಸ್ಥಳದಲ್ಲಿ ಅಥವಾ ದೊಡ್ಡ ಪಾರ್ಕಿಂಗ್ ಜಾಗದಲ್ಲಿ ನಿಲುಗಡೆಯಾಗಿತ್ತು ಅಂದುಕೊಳ್ಳಿ. ಆದರೆ ನೀವು ಅದನ್ನು ಕಂಡುಹಿಡಿಯಲಾಗಲಿಲ್ಲವೆಂದರೆ ನಿಮ್ಮ ಸ್ಕೂಟರ್ ಹುಡುಕಲು ಸ್ಮಾರ್ಟ್ ಫೈಂಡ್ ಬಟನ್ ಬಳಸಬಹುದು. ಈ ವಿಶೇಷ ಗುಂಡಿಯನ್ನು ಒತ್ತಿದ ನಂತರ ಸ್ಕೂಟರ್‌ನ ಬ್ಲಿಂಕರ್‌ಗಳು ಮಿಟುಕಿಸುತ್ತವೆ.

H-ಸ್ಮಾರ್ಟ್ ತಂತ್ರಜ್ಞಾನದಲ್ಲಿ ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಸೇಫ್ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಸ್ಕೂಟರ್‌ನ ಸ್ಮಾರ್ಟ್ ಕೀ 2 ಮೀಟರ್ ವ್ಯಾಪ್ತಿಯಿಂದ ಹೊರಗೆ ಹೋದರೆ ಸ್ಕೂಟರ್ ಲಾಕ್ ಆಗುತ್ತದೆ. ನಂತರ ನೀವು ಸ್ಕೂಟರ್‌ನ ಕೀಲಿಯನ್ನು 2 ಮೀಟರ್ ವ್ಯಾಪ್ತಿಯೊಳಗೆ ತಂದ ತಕ್ಷಣ ಅದು ಅನ್‌ಲಾಕ್ ಆಗುತ್ತದೆ. ಇದು ಕೀಲಿರಹಿತ ಪ್ರವೇಶ ಹೊಂದಿರುವ ಕಾರುಗಳಲ್ಲಿರುವಂತೆಯೇ ವೈಶಿಷ್ಟ್ಯವನ್ನು ಹೊಂದಿದೆ.

ಇದನ್ನೂ ಓದಿ: ಈ ಖಾತೆ ಹೊಂದಿದವರ ಬ್ಯಾಂಕ್ ಖಾತೆಗೆ 10 ಸಾವಿರ ವರ್ಗಾವಣೆಯಾಗುತ್ತಿದೆ! ತಕ್ಷಣ ಅಪ್ಲೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News