Vastu Tips: ಅಪ್ಪಿತಪ್ಪಿಯೂ ಮನೆಯ ಕೀಲಿಗಳನ್ನು ಈ ದಿಕ್ಕಿನಲ್ಲಿ ಇಡಬೇಡಿ: ಅದೃಷ್ಟದ ಬಾಗಿಲು ಶಾಶ್ವತವಾಗಿ ಮುಚ್ಚುವುದು ಖಚಿತ!

Vastu Tips for Keys: ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಗಳು ವಿಸ್ತರಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ವಾಸ್ತು ಪ್ರಕಾರ ಕೀಗಳನ್ನು ಎಲ್ಲಿ ಇಡಬೇಕು ಎಂದು ತಿಳಿದುಕೊಳ್ಳೋಣ.

Written by - Bhavishya Shetty | Last Updated : Feb 3, 2023, 08:41 PM IST
    • ಪ್ರತಿ ಮನೆಯಲ್ಲೂ ಕೀಲಿಯನ್ನು ಸುರಕ್ಷಿತವಾಗಿಡಲು ಬಳಸುತ್ತಾರೆ
    • ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಗಳು ವಿಸ್ತರಿಸುತ್ತವೆ
    • ವಾಸ್ತು ಪ್ರಕಾರ ಕೀಗಳನ್ನು ಎಲ್ಲಿ ಇಡಬೇಕು ಎಂದು ತಿಳಿದುಕೊಳ್ಳೋಣ
Vastu Tips: ಅಪ್ಪಿತಪ್ಪಿಯೂ ಮನೆಯ ಕೀಲಿಗಳನ್ನು ಈ ದಿಕ್ಕಿನಲ್ಲಿ ಇಡಬೇಡಿ: ಅದೃಷ್ಟದ ಬಾಗಿಲು ಶಾಶ್ವತವಾಗಿ ಮುಚ್ಚುವುದು ಖಚಿತ! title=
Vastu to keep house key

Vastu Tips for Keys: ಪ್ರತಿ ಮನೆಯಲ್ಲೂ ಕೀಲಿಯನ್ನು ಸುರಕ್ಷಿತವಾಗಿಡಲು ಬಳಸುತ್ತಾರೆ. ಆದರೆ ಕೀಲಿಯನ್ನು ಇಡಲು ಸರಿಯಾದ ಮಾರ್ಗ ಮತ್ತು ಸರಿಯಾದ ಸ್ಥಳವು ಯಾವುದು ಎಂದು ಅನೇಕ ಜನರಿಗೆ ತಿಳಿದಿರುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಬೀರು, ಕಮಾನು, ವಾಹನ ಮತ್ತು ಮನೆಯ ಮುಖ್ಯ ದ್ವಾರದ ಕೀಗಳನ್ನು ಎಲ್ಲಿ ಇಡಬೇಕು ಎಂದು ಹೇಳಲಾಗಿದೆ.

ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಗಳು ವಿಸ್ತರಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ವಾಸ್ತು ಪ್ರಕಾರ ಕೀಗಳನ್ನು ಎಲ್ಲಿ ಇಡಬೇಕು ಎಂದು ತಿಳಿದುಕೊಳ್ಳೋಣ.

ಇದನ್ನೂ ಓದಿ: ಪೊಲೀಸ್ ಅಧಿಕಾರಿಯಾದ MS Dhoni: ಸಮವಸ್ತ್ರದ ಫೋಟೋ ಕಂಡು ಫ್ಯಾನ್ಸ್ ಶಾಕ್!

ವಾಸ್ತು ಪ್ರಕಾರ ಇಲ್ಲಿ ಕೀಲಿಗಳನ್ನು ಇಡಬೇಡಿ:

ಪೂಜೆಯ ಮನೆಯಲ್ಲಿ ಕೀಲಿಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಏಕೆಂದರೆ ಕೀಲಿಗಳು ಅನೇಕ ರೀತಿಯ ಲೋಹಗಳಿಂದ ಮಾಡಲ್ಪಟ್ಟಿದೆ. ಅದರಿಂದ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ. ಅದಕ್ಕಾಗಿಯೇ ಪೂಜಾ ಮನೆಯಲ್ಲಿ ಯಾವುದೇ ರೀತಿಯ ಕೀಲಿಗಳನ್ನು ಇಡಬಾರದು.

ವಾಹನಗಳು ಮತ್ತು ಮನೆಯ ಕೀಗಳನ್ನು ಡ್ರಾಯಿಂಗ್ ರೂಮ್‌ನಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಡ್ರಾಯಿಂಗ್ ರೂಮ್ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಬರುತ್ತಾ ಹೋಗುತ್ತಿರುತ್ತಾನೆ ಮತ್ತು ಹೊರಗಿನ ಪ್ರತಿಯೊಬ್ಬರೂ ಅದರ ಮೇಲೆ ಕಣ್ಣಿಡುತ್ತಾರೆ. ಹಾಗಾಗಿ ಇಲ್ಲಿ ಕೀಗಳನ್ನು ಇಡುವುದು ಸುರಕ್ಷಿತವಲ್ಲ.

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೀಲಿಗಳನ್ನು ಇಡಬಾರದು. ಕುಟುಂಬದ ಸಂಪೂರ್ಣ ಸಂಪರ್ಕವು ಅಡುಗೆಮನೆಗೆ ಅಂದರೆ ಆರೋಗ್ಯಕ್ಕೆ ಸಂಬಂಧಿಸಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಕೀಲಿಗಳನ್ನು ಇಡಲು ಪಶ್ಚಿಮ ದಿಕ್ಕನ್ನು ಸರಿಯಾಗಿ ಪರಿಗಣಿಸಲಾಗುತ್ತದೆ. ಇದರೊಂದಿಗೆ, ಕೀಲಿಗಳಿಗಾಗಿ ಮರದ ಸ್ಟ್ಯಾಂಡ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇನ್ನು ನಿರುಪಯುಕ್ತ ಕೀಗಳನ್ನು ಮನೆಯಲ್ಲಿ ಇಡಬಾರದು. ಯಾವುದೇ ಕೀಗಳು ತುಕ್ಕು ಹಿಡಿದಿದ್ದರೆ ಅಥವಾ ಮುರಿದಿದ್ದರೆ ಅವುಗಳನ್ನು ಬದಲಾಯಿಸಿ.

ಇದನ್ನೂ ಓದಿ: IND vs AUS : ಟೆಸ್ಟ್‌ನಲ್ಲಿ ಈ ಐತಿಹಾಸಿಕ ದಾಖಲೆ ಮುರಿಯುವ ಹೊಸ್ತಿಲಲ್ಲಿ ಆರ್ ಅಶ್ವಿನ್!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News