ಟ್ರಾಫಿಕ್ ನಿಯಮ ಉಲ್ಲಂಘನೆ- ದಂಡ ಪಾವತಿಗೆ 50% ರಿಯಾಯಿತಿ

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ್ದಾರೆ. ಆದರೆ ಹತ್ತು ಹದಿನೈದು ದಂಡ ಪ್ರಕರಣಗಳಿದ್ದರೂ ಕೂಡ ಯಾವುದೇ ರೀತಿಯಲ್ಲಿ  ದಂಡ ಪಾವತಿಸದೇ ಇರುವ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿದೆ. 

Written by - Yashaswini V | Last Updated : Feb 6, 2023, 03:09 PM IST
  • ಇದೇ ಫೆಬ್ರವರಿ 11ರವರೆಗೆ ಮಾತ್ರ ದಂಡ ಪಾವತಿಯಲ್ಲಿ ಡಿಸ್ಕೌಂಟ್ ನೀಡಲಾಗಿದೆ.
  • ಫೆಬ್ರವರಿ 11ರೊಳಗೆ ದಂಡ ಪಾವತಿಸುವವರಿಗೆ 50% ರಿಯಾಯಿತಿ ನೀಡುವ ಮೂಲಕ ಜನರಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.
  • ಇಂತಹ ಬಹುತೇಕ ಪ್ರಕರಣಗಳು ಅವಳಿನಗರದಲ್ಲಿದ್ದು, ಜನರು ಫೆಬ್ರವರಿ 11ರೊಳಗಾಗಿಯೇ ದಂಡವನ್ನು ಪಾವತಿ ಮಾಡುವ ಮೂಲಕ ರಿಯಾಯಿತಿಯ ಸದುಪಯೋಗ ಮಾಡಿಕೊಳ್ಳಬೇಕಿದೆ.
ಟ್ರಾಫಿಕ್ ನಿಯಮ ಉಲ್ಲಂಘನೆ- ದಂಡ ಪಾವತಿಗೆ 50% ರಿಯಾಯಿತಿ title=
Traffic Rules

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಓಡಾಡುವವರಿಗೆ ಬಿಸಿ ಮುಟ್ಟಿಸುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಸಾರ್ವಜನಿಕರ ಅನುಕೂಲಕ್ಕೆ ಹೊಸ ನಿಯಮ ಜಾರಿಗೊಳಿಸಿದೆ. ದಂಡದ ಪಾವತಿಗೆ ಬಹುದೊಡ್ಡ ರಿಯಾಯಿತಿ ನೀಡಿದ್ದು, ಈಗ ಸಾರ್ವಜನಿಕರಿಗೆ ವರವಾಗಿದೆ. ಆದರೆ ಸಾಕಷ್ಟು ದಂಡ ಪ್ರಕರಣಗಳಿರುವ ಸಾರ್ವಜನಿಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

ಹೌದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ್ದಾರೆ. ಆದರೆ ಹತ್ತು ಹದಿನೈದು ದಂಡ ಪ್ರಕರಣಗಳಿದ್ದರೂ ಕೂಡ ಯಾವುದೇ ರೀತಿಯಲ್ಲಿ  ದಂಡ ಪಾವತಿಸದೇ ಇರುವ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿದೆ. ಈಗಾಗಲೇ ಹುಬ್ಬಳ್ಳಿಯ ನಿವಾಸಿ ಮಹಾಂತೇಶ ಎಂಬುವವರು ತಮ್ಮ ಎರಡು ವಾಹನಗಳ ಪೈಕಿ 21 ದಂಡ ಪ್ರಕರಣಕ್ಕೆ 5,000ಕ್ಕೂ ಹೆಚ್ಚು ದಂಡವನ್ನು ಪಾವತಿ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕ ಅಜಾಗರೂಕತೆಯೇ ಇಂತಹದೊಂದು ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಬಹುತೇಕ ಪ್ರಕರಣಗಳು ಹೆಲ್ಮೆಟ್ ಇಲ್ಲದ ಪ್ರಯಾಣಿಸುವುದಕ್ಕೆ ದಂಡ ಬಿದ್ದಿದೆ. ಮನೆಯಲ್ಲಿಯೇ ಇರುವ ಹೆಲ್ಮೆಟ್ ಬಗ್ಗೆ ನಿಷ್ಕಾಳಜಿ ತೋರುವ ಮೂಲಕ ಜನರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
 
ಇದನ್ನೂ ಓದಿ- HPSC ವೈದ್ಯಕೀಯ ಅಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ....

ಇದೇ ಫೆಬ್ರವರಿ 11ರವರೆಗೆ ಮಾತ್ರ ದಂಡ ಪಾವತಿಯಲ್ಲಿ ಡಿಸ್ಕೌಂಟ್ ನೀಡಲಾಗಿದೆ.  ಫೆಬ್ರವರಿ 11ರೊಳಗೆ ದಂಡ ಪಾವತಿಸುವವರಿಗೆ 50% ರಿಯಾಯಿತಿ ನೀಡುವ ಮೂಲಕ ಜನರಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ. ಇಂತಹ ಬಹುತೇಕ ಪ್ರಕರಣಗಳು ಅವಳಿನಗರದಲ್ಲಿದ್ದು, ಜನರು ಫೆಬ್ರವರಿ 11ರೊಳಗಾಗಿಯೇ ದಂಡವನ್ನು ಪಾವತಿ ಮಾಡುವ ಮೂಲಕ ರಿಯಾಯಿತಿಯ ಸದುಪಯೋಗ ಮಾಡಿಕೊಳ್ಳಬೇಕಿದೆ. ಅಲ್ಲದೆ ಬಹುದೊಡ್ಡ ಮೊತ್ತವನ್ನು ದಂಡ ಕಟ್ಟಲು ಸಾರ್ವಜನಿಕರಿಗೆ ಹೊರೆಯಾಗುತ್ತಿದ್ದು, ಮತ್ತಷ್ಟು ಪೂರಕ ನಿರ್ಧಾರವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರೆ.

ಇದನ್ನೂ ಓದಿ- ಎಂಎಸ್ ಧೋನಿ ಶಾಲೆಗೂ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿಶೇಷ ಕೊಡುಗೆಯನ್ನು ಸಾರ್ವಜನಿಕರಿಗೆ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಜನರಿಗೆ ಕಂತಿನ ರೂಪದಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಿದರೇ ಜನರ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿತ್ತು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News