ಹುಬ್ಬಳ್ಳಿ: ಇಂಡಿಗೊ ವಿಮಾನಯಾನ ಸಂಸ್ಥೆಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ಪುಣೆಗೆ ನೇರ ವಿಮಾನ ಸೇವೆಯನ್ನು ಆರಂಭಿಸಿದೆ.
ಹುಬ್ಬಳ್ಳಿಯ ನಿಲ್ದಾಣದಲ್ಲಿ ಸಂಜೆ ವಾಟರ್ ಕ್ಯಾನಾನ್ ಸೆಲ್ಯೂಟ್ ಸಲ್ಲಿಸಿ, ಸೇವೆಗೆ ಚಾಲನೆ ನೀಡಲಾಯಿತು. ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ, ಏರೊಡ್ರೋಮ್ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ- ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
ಮೊದಲ ವಿಮಾನದಲ್ಲಿ ಇಲ್ಲಿಂದ 78 ಪ್ರಯಾಣಿಕರು ಪುಣೆಗೆ ಪ್ರಯಾಣಿಸಿದರು. ಪುಣೆಯಿಂದ 45 ಪ್ರಯಾಣಿಕರು ಹುಬ್ಬಳ್ಳಿಗೆ ಬಂದರು.
ಇದನ್ನೂ ಓದಿ- Karnataka Congress : ಕೈ ಟಿಕೇಟ್ ಹಂಚಿಕೆ ವಿಚಾರ : ಕೊನೆಗೂ ಸ್ಕ್ರೀನಿಂಗ್ ಕಮಿಟಿ ರಚಿಸಿದ ಎಐಸಿಸಿ
78 ಆಸನಗಳಿರುವ ವಿಮಾನ ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಇಲ್ಲಿಂದ ಹೊರಟು, 7.30ಕ್ಕೆ ಪುಣೆ ತಲುಪಲಿದೆ. ಅಲ್ಲಿಂದ ರಾತ್ರಿ 8ಗಂಟೆಗೆ ಹೊರಟು, 9 ಗಂಟೆಗೆ ಹುಬ್ಬಳ್ಳಿಗೆ ಬರಲಿದೆ. 425 ಕಿ.ಮೀ ದೂರದ ಪುಣೆಗೆ ಈವರೆಗೆ ನೇರ ವಿಮಾನ ಇರಲಿಲ್ಲ. ಹಲವು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.