ಬೆಂಗಳೂರು: ರಾಜ್ಯದ ಜನರು ಅಧಿಕಾರದಿಂದ ಕಿತ್ತು ಕೆಳಗಿಳಿಸಿದರೂ ಕಾಂಗ್ರೆಸ್ ನಾಯಕರ ಮದ ಇಳಿಯುತ್ತಿಲ್ಲವೆಂದು ಬಿಜೆಪಿ ಟೀಕಿಸಿದೆ. #PrajaDrohaYatre ಹ್ಯಾಶ್ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮಾಡುತ್ತಿರುವುದು ಪ್ರಜಾದ್ರೋಹಿ ಯಾತ್ರೆ ಎಂದು ನಾವು ಸುಮ್ಮನೇ ಹೇಳುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಅದನ್ನು ಸಾಬೀತುಪಡಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ಮನವಿ ಪತ್ರವನ್ನು ವೇದಿಕೆ ಮೇಲೆಯೇ ಹರಿದುಹಾಕುವ ಮೂಲಕ ಕಾಂಗ್ರೆಸ್ನ ಮಹಿಳಾ ವಿರೋಧಿ ನೀತಿ ಪ್ರದರ್ಶಿಸಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ದಾವಣಗೆರೆ ಲೋಕೋಪಯೋಗಿ ಇಲಾಖೆ: ಹೇಳಿದಷ್ಟು ಹಣ ಕೊಡುವಂತೆ ಗುತ್ತಿಗೆದಾರರಿಗೆ ಇಂಜಿನಿಯರ್ಗಳ ಅವಾಜ್!
ಜನಸಾಮಾನ್ಯರ ಅಭಿಪ್ರಾಯಗಳು ಎಂದರೆ @INCKarnataka ನಾಯಕರಿಗೆ ಕಾಲ ಕಸಕ್ಕಿಂತಲೂ ಕಡೆ. ಏಕೆಂದರೆ ಕಾಂಗ್ರೆಸ್ನಲ್ಲಿ ಹುದ್ದೆ ಪಡೆಯಬೇಕು ಎಂದರೆ ಅದಕ್ಕೆ ಸೋನಿಯಾ ಗಾಂಧಿ, @RahulGandhi ಅಭಿಪ್ರಾಯ & ಆಶೀರ್ವಾದ ಇದ್ದರೆ ಸಾಕು ಎಂಬುದು @DKShivakumar ಆದಿಯಾಗಿ @HariprasadBK2 ಸೇರಿದಂತೆ ಎಲ್ಲರಿಗೂ ತಿಳಿದಿದೆ. #PrajaDrohaYatre
3/3— BJP Karnataka (@BJP4Karnataka) February 7, 2023
‘ಅಹಂಕಾರ ಎಂಬುದು ಕಾಂಗ್ರೆಸ್ ನಾಯಕರಿಗೆ ಅದ್ಯಾವ ಪರಿ ಏರಿದೆ ಎಂದರೆ ಕೈಯಲ್ಲಿದ್ದ ಅಧಿಕಾರವನ್ನು ಕಿತ್ತು, ಜನ ಕೆಳಗಿಳಿಸಿದರೂ ಮದ ಇಳಿಯುತ್ತಿಲ್ಲ. ತಿಂಗಳಿಗೆ 2000 ರೂ. ನೀಡುವ ಯೋಜನೆಗೆ ಅರ್ಜಿ ತೆಗೆದುಕೊಳ್ಳುವ ನಾಟಕ ಆಡುತ್ತಿರುವರು ಆ ಅರ್ಜಿಗಳನ್ನು ಏನು ಮಾಡುತ್ತಾರೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
‘ಜನಸಾಮಾನ್ಯರ ಅಭಿಪ್ರಾಯಗಳು ಎಂದರೆ ಕಾಂಗ್ರೆಸ್ ನಾಯಕರಿಗೆ ಕಾಲ ಕಸಕ್ಕಿಂತಲೂ ಕಡೆ. ಏಕೆಂದರೆ ಕಾಂಗ್ರೆಸ್ನಲ್ಲಿ ಹುದ್ದೆ ಪಡೆಯಬೇಕು ಎಂದರೆ ಅದಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಅಭಿಪ್ರಾಯ & ಆಶೀರ್ವಾದ ಇದ್ದರೆ ಸಾಕು ಎಂಬುದು ಡಿ.ಕೆ.ಶಿವಕುಮಾರ್ ಆದಿಯಾಗಿ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಎಲ್ಲರಿಗೂ ತಿಳಿದಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಕನ್ನಡ ಉಳಿಯಬೇಕೆಂದರೇ ಕನ್ನಡ ಶಾಲೆ ಉಳಿಯಬೇಕು....!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.