ನವದೆಹಲಿ: ದೆಹಲಿಯಲ್ಲಿ ಬುಧವಾರ ಶೀತದೊಂದಿಗೆ ಪ್ರಾರಂಭವಾಯಿತು. ತಾಪಮಾನ 3.6 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದ್ದು, ಇದು ಈ ಚಳಿಗಾಲದಲ್ಲಿ ಅತಿ ಕಡಿಮೆ ತಾಪಮಾನವಾಗಿದೆ.
"ಕನಿಷ್ಠ ತಾಪಮಾನವು ಋತುವಿನ ಸರಾಸರಿ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಇದು ಈ ವರ್ಷ ಅತಿ ಕಡಿಮೆ ತಾಪಮಾನವಾಗಿದೆ" ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ರಾಜಧಾನಿಯಲ್ಲಿ ಚಳಿ ಹೆಚ್ಚಾಗಿದೆ. ಡಿಸೆಂಬರ್ 23 ರಂದು ಕನಿಷ್ಠ ತಾಪಮಾನವು 3.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಡಿಸೆಂಬರ್ 28 ರ ನಂತರ ತಾಪಮಾನವು 3.0 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುವ ನಿರೀಕ್ಷೆಯಿದೆ.
ದೆಹಲಿಯಲ್ಲಿ ಬುಧವಾರ ದಿನವಿಡೀ ಸ್ಪಷ್ಟವಾದ ಆಕಾಶವಿರುತ್ತದೆ ಮತ್ತು ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಹವಾಮಾನ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.