/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

Astro Tips: ಭಾನುವಾರ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ..!

ಭಾನುವಾರವನ್ನು ಗ್ರಹಗಳ ರಾಜ ಸೂರ್ಯ ದೇವರ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನಾವು ಅಪ್ಪಿತಪ್ಪಿಯೂ 5 ಕೆಲಸಗಳನ್ನು ಮಾಡಬಾರದು, ಇಲ್ಲದಿದ್ದರೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಮತ್ತು ಬಡತನ ಕಾಡುತ್ತದೆ.

Written by - Puttaraj K Alur | Last Updated : Mar 5, 2023, 07:46 AM IST
  • ಭಾನುವಾರ ಮಾಂಸಾಹಾರ & ಮದ್ಯ ಸೇವಿಸಬಾರದೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ
  • ಭಾನುವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ
  • ಭಾನುವಾರದಂದು ಕಪ್ಪು, ನೀಲಿ ಅಥವಾ ಕಂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು
Astro Tips: ಭಾನುವಾರ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ..!  title=
ಭಾನುವಾರ ಈ ಕೆಲಸ ಮಾಡಬಾರದು

ನವದೆಹಲಿ: ಸನಾತನ ಧರ್ಮದಲ್ಲಿ ಪ್ರತಿ ದಿನವನ್ನು ದೇವ-ದೇವತೆಗಳಿಗೆ ಸಮರ್ಪಿಸಲಾಗಿದೆ. ಭಾನುವಾರವನ್ನು ಗ್ರಹಗಳ ರಾಜ ಸೂರ್ಯ ದೇವರಿಗೆ ಸಮರ್ಪಿತವೆಂದು ಪರಿಗಣಿಸಲಾಗಿದೆ. ಸೂರ್ಯ ದೇವರಿಂದ ಆಶೀರ್ವದಿಸಲ್ಪಟ್ಟ ವ್ಯಕ್ತಿಯು ಯಾವಾಗಲೂ ಆರೋಗ್ಯವಾಗಿರುತ್ತಾನೆ ಮತ್ತು ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಖ್ಯಾತಿ ಪಡೆಯುತ್ತಾನೆಂದು ನಂಬಲಾಗಿದೆ. ಸೂರ್ಯ ದೇವರ ಆಶೀರ್ವಾದದಿಂದ ಆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ. ಭಾನುವಾರದಂದು ಕೆಲವು ಕೆಲಸಗಳನ್ನು ಮಾಡಬಾರದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಒಂದು ವೇಳೆ ಆ ಕೆಲಸ ಮಾಡಿದ್ರೆ ಕುಟುಂಬದಲ್ಲಿ ಬಿಕ್ಕಟ್ಟು ಶುರುವಾಗುತ್ತದೆ ಮತ್ತು ಮನೆಗೆ ಬಡತನ ಕಾಡುತ್ತದಂತೆ.

ಭಾನುವಾರದಂದು ಈ ಕೆಲಸ ಮಾಡಬಾರದು

ಮಾಂಸ ತಿನ್ನಬೇಡಿ: ಭಾನುವಾರದಂದು ಮಾಂಸಾಹಾರ ಮತ್ತು ಮದ್ಯ ಸೇವಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರೊಂದಿಗೆ ಶನಿ ದೇವರಿಗೆ ಸಂಬಂಧಿಸಿದ ಆಹಾರ ತಿನ್ನುವುದನ್ನು ತಪ್ಪಿಸಬೇಕು. ಒಂದು ವೇಳೇ ನೀವು ಹೀಗೆ ಮಾಡಿದ್ರೆ ಸೂರ್ಯ ಮತ್ತು ಶನಿ ಇಬ್ಬರ ಕೋಪವನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Rajyog: 30 ವರ್ಷಗಳ ಬಳಿಕ 3 ರಾಶಿಗಳ ಕುಂಡಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆಕಸ್ಮಿಕ ಧನಲಾಭದ ಜೊತೆಗೆ ಬಡ್ತಿ ಭಾಗ್ಯ!

ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸಬಾರದು: ಭಾನುವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ದಿನ ಉದರಶೂಲೆಯು ಈ ದಿಕ್ಕಿನಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ, ಹೀಗಾಗಿ ಆ ದಿಕ್ಕಿನಲ್ಲಿ ಪ್ರಯಾಣಿಸುವ ವ್ಯಕ್ತಿಗೆ ಕೆಡುಕು ಉಂಟಾಗುತ್ತದೆ. ಒಂದು ವೇಳೆ ನೀವು ಹೋಗಲೇಬೇಕು ಅಂದರೆ ತುಪ್ಪ ಅಥವಾ ಓಟ್ ಮೀಲ್ ತಿಂದು ಹೋಗಬೇಕು.

ಈ ಬಣ್ಣದ ಬಟ್ಟೆ ಧರಿಸಬೇಡಿ: ಭಾನುವಾರದಂದು ಕಪ್ಪು, ನೀಲಿ ಅಥವಾ ಕಂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಎಂದು ನಂಬಲಾಗಿದೆ. ಈ ಬಣ್ಣಗಳ ಬಟ್ಟೆಗಳನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇದರಿಂದ ರೋಗ ಮತ್ತು ಬಡತನವು ಮನೆಯನ್ನು ಪ್ರವೇಶಿಸುತ್ತದೆ.

ಇವುಗಳ ಮಾರಾಟ ಮಾಡಬಾರದು: ಭಾನುವಾರದಂದು ಸೂರ್ಯ ದೇವರಿಗೆ ಸಂಬಂಧಿಸಿದ ಯಾವುದನ್ನೂ ಮಾರಾಟ ಮಾಡಬಾರದೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ಜಾತಕನ ಸ್ಥಾನವು ದುರ್ಬಲವಾಗುತ್ತದೆ ಮತ್ತು ಜೀವನದಲ್ಲಿ ದುರಾದೃಷ್ಟವು ಪ್ರವೇಶಿಸುತ್ತದೆ. ಇದರೊಂದಿಗೆ ಭಾನುವಾರದಂದು ಮನೆಯಲ್ಲಿ ತಾಮ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡಬಾರದು.

ಇದನ್ನೂ ಓದಿ: Shukra Gochar 2023 : ಹೋಳಿ ನಂತರ ಮಂಗಳ ಗ್ರಹದಲ್ಲಿ ಶುಕ್ರ ಗೋಚರ, ಈ 5 ರಾಶಿಯವರಿಗೆ ಹಣದ ಲಾಭ!

ಸೂರ್ಯಾಸ್ತದ ಮೊದಲು ಊಟ ಮಾಡಿ: ಭಾನುವಾರ ಸೂರ್ಯಾಸ್ತದ ಮೊದಲು ಆಹಾರ ಸೇವಿಸಬೇಕೆಂದು ಧಾರ್ಮಿಕ ಪಂಡಿತರು ಹೇಳುತ್ತಾರೆ. ಇದರೊಂದಿಗೆ ಆ ದಿನ ಉಪ್ಪನ್ನು ತಿನ್ನದಿರಲು ಅಥವಾ ಕಡಿಮೆ ತಿನ್ನಲು ಪ್ರಯತ್ನಿಸಬೇಕು. ಹೀಗೆ ಮಾಡಿದ್ದಲ್ಲಿ ವ್ಯಕ್ತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅನೇಕ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.