Custard Apple Fruit For Diabetic Patient: ಮಧುಮೆಹಿಗಳು ತಮ್ಮ ಆಹಾರ-ಪಾನೀಯಗಳ ಬಗ್ಗೆ ತುಂಬಾ ಕಾಳಜಿವಹಿಸಬೇಕು. ಸಾಮಾನ್ಯವಾಗಿ ಮಧುಮೇಹಕ್ಕೆ ಬಲಿಯಾದವರಿಗೆ ಸಿಹಿ ಪದಾರ್ಥಗಳಿಂದ ದೂರವಿರಲು ಸೂಚಿಸಲಾಗುತ್ತದೆ. ಅಷ್ಟೇ ಅಲ್ಲ, ತುಂಬಾ ರುಚಿಕರವಾದ ಮಾವು, ಅನಾನಸ್ನಂತಹ ಸಿಹಿ ಹಣ್ಣುಗಳಿಂದಲೂ ದೂರವಿರಲು ಸಲಹೆ ನೀಡಲಾಗುತ್ತದೆ. ಆದರೆ, ರುಚಿಯಲ್ಲಿ ಸಿಹಿಯಾದ ಒಂದು ಹಣ್ಣನ್ನು ಮಧುಮೇಹಿಗಳು ಸಹ ತಿನ್ನಬಹುದು. ಅದು ಯಾವ ಹಣ್ಣು. ಮಧುಮೇಹಿಗಳಿಗೆ ಯಾವ ಹಣ್ಣು ಹಾನಿಕಾರಕವಲ್ಲ ಎಂದು ತಿಳಿಯೋಣ...
ಆರೋಗ್ಯ ತಜ್ಞರ ಪ್ರಕಾರ, ಸೀತಾಫಲವನ್ನು ಸೇವಿಸುವುದರಿಂದ ಮಧುಮೆಹಿಗಳಿಗೆ ಯಾವುದೇ ತೊಂದರೆ ಇಲ್ಲ. ಈ ಸಿಹಿ ಹಣ್ಣು ಅವರ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಹೇಳಲಾಗುತ್ತದೆ. ಹೆಚ್ಚು ಬೀಜಗಳಿಂದ ತುಂಬಿರುವ ಈ ಹಣ್ಣನ್ನು ತಿನ್ನುವುದು ಕಷ್ಟವೆನಿಸಿದರೂ ಕೂಡ ಅದರ ರುಚಿ ಮಾತ್ರ ಎಲ್ಲರನ್ನೂ ಆಕರ್ಷಿಸುತ್ತದೆ.
ಇದನ್ನೂ ಓದಿ- ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿದರೆ ನಿಮ್ಮ ಕೈಯ್ಯಾರ ಆರೋಗ್ಯ ಕೆಡಿಸಿದಂತೆ
ಪೋಷಕಾಂಶಗಳ ಪವರ್ಹೌಸ್ ಸೀತಾಫಲ:
ಸಾಮಾನ್ಯವಾಗಿ ಕಸ್ಟರ್ಡ್ ಆಪಲ್ ಎಂದೇ ಕರೆಯಲ್ಪಡುವ ಸೀತಾಫಲವನ್ನು ಪೋಷಕಾಂಶಗಳ ಪವರ್ಹೌಸ್ ಎಂದು ಕರೆಯಲಾಗುತ್ತದೆ. ಸೀತಾಫಲದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಸಿಯಮ್, ತಾಮ್ರ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಮಾತ್ರವಲ್ಲ, ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಕೊರತೆಯೂ ಇಲ್ಲ. ಕಸ್ಟರ್ಡ್ ಆಪಲ್ ಅನ್ನು ವಿಟಮಿನ್ ಬಿ6ನ ಶ್ರೀಮಂತ ಮೂಲವೆಂದು ಹೇಳಲಾಗುತ್ತದೆ.
ಇದನ್ನೂ ಓದಿ- Water Intake : ಊಟ ಮಾಡುವಾಗ ನೀವು ನೀರು ಕುಡಿಯುತ್ತೀರಾ? ಹಾಗಿದ್ರೆ, ಎಚ್ಚರ..!
ಆರೋಗ್ಯಕ್ಕೆ ಕಸ್ಟರ್ಡ್ ಆಪಲ್ / ಸೀತಾಫಲದ ಪ್ರಯೋಜನಗಳು:
* ಇದು ಹೊಟ್ಟೆ ಉಬ್ಬರದಂತಹ ಸಮಸ್ಯೆಗೆ ತಕ್ಷಣವೇ ಉಪಶಮನ ನೀಡಬಲ್ಲದು.
* ಈ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ.
* ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿರುವ ಸೀತಾಫಲವನ್ನು ಮಧುಮೆಹಿಗಳು ಸಹ ತಿನ್ನಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.