Gold Price 12th April : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ದಾಖಲೆ ಮಟ್ಟದಲ್ಲಿ ಏರುತ್ತಿದೆ. ಬೆಲೆ ಏರಿಕೆ ವಿಚಾರದಲ್ಲಿ ಬೆಳ್ಳಿ ಕೂಡಾ ನಿರಂತರವಾಗಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಏರಿಳಿತದ ನಡುವೆ ಬುಧವಾರ ಬೆಳ್ಳಿ ಹೊಸ ದಾಖಲೆ ತಲುಪಿದೆ. ಬೆಳ್ಳಿ ಬೆಲೆ 75000 ರೂ.ಗೆ ತಲುಪಿದೆ. ಚಿನ್ನ ಮತ್ತೆ 10 ಗ್ರಾಂಗೆ 61,000 ರೂ. ಆಗಿದೆ. ಚಿನ್ನ ದರ ಏರುತ್ತಿರುವ ವೇಗವನ್ನು ನೋಡುತ್ತಿದ್ದರೆ ಇನ್ನು ಚಿನ್ನದ ಆಭರಣ ಖರೀದಿ ಕನಸಾಗಿಯೇ ಉಳಿಯುವ ಕಾಲ ಹತ್ತಿರವಾಗಲಿದೆ ಎನ್ನುತ್ತಾರೆ ತಜ್ಞರು.
ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ದರ :
ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಬುಧವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಯಲ್ಲಿ 365 ರೂ. ಗಳ ಏರಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 60,870 ರೂ. ಆಗಿದೆ. ಇದರೊಂದಿಗೆ ಬೆಳ್ಳಿಯ ದರ 903 ರೂ.ಯಷ್ಟು ಏರಿಕೆಯಾಗಿದ್ದು, 75943 ರೂ. ತಲುಪಿದೆ.
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ! ಆಗಲಿದೆ ಬಹು ದೊಡ್ಡ ನಷ್ಟ
ಬುಲಿಯನ್ ಮಾರುಕಟ್ಟೆಯಲ್ಲೂ ಏರಿಕೆ :
ಬುಲಿಯನ್ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಮಂಗಳವಾರ ಸಂಜೆ ಅಂತ್ಯಗೊಂಡ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ದಿಢೀರ್ ಏರಿಕೆ ಕಂಡು 60,390 ರೂ.ಗೆ ತಲುಪಿತ್ತು. ಬೆಳ್ಳಿ ಪ್ರತಿ ಕೆಜಿಗೆ 74,416 ರೂ. ಆಗಿತ್ತು. ಮಂಗಳವಾರ ಸಂಜೆ ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ( https://ibjarates.com ) ಬಿಡುಗಡೆ ಮಾಡಿರುವ ಬೆಲೆ ಪ್ರಕಾರ , 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 60,390 ರೂ.ಗೆ ಮತ್ತು ಬೆಳ್ಳಿ ಕೆಜಿಗೆ 74, 416 ರೂ. ಆಗಿದೆ. ಇದಲ್ಲದೇ 23ಕ್ಯಾರೆಟ್ ಚಿನ್ನ 60,148 ರೂ., 22ಕ್ಯಾರೆಟ್ ಚಿನ್ನ 55,317 ರೂ., 20ಕ್ಯಾರೆಟ್ ಚಿನ್ನ 10ಗ್ರಾಂಗೆ 45,293 ರೂ.ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.