ಬೆಂಗಳೂರು : ಅವರಿಬ್ಬರದ್ದು ಚೆಂದದ ಪ್ರೀತಿ. ಈ ಪ್ರೀತಿಯಲ್ಲಿ ಕೋಪ ಮುನಿಸು ಎಷ್ಟೇ ಇದ್ದರೂ ಅನುಮಾನ ಎಂಬ ಮಾತು ಮಾತ್ರ ಬರಬಾರದು. ಅದು ಬಂದರೂ ಸಹ ಆ ಕ್ಚಣದಲ್ಲೇ ಬಗೆಹರಿಸಿಕೊಳ್ಳಬೇಕು. ಇಲ್ಲ ಅಂದರೆ ಪ್ರೀತಿ ದ್ವೇಷವಾಗಿ ದುರಂತಕ್ಕೆ ಕಾರಣವಾಗುತ್ತೆ. ಇಲ್ಲಿ ಆಗಿದ್ದು ಅದೇ ಕಥೆ.
ಹೌದು.. ಆಕೆ ಪೊಲೀಸ್ ಇಲಾಖೆಯಲ್ಲಿ ಎಸ್‌ಎ ಆಗಿ ಕೆಲಸ ಮಾಡುತ್ತಿದ್ದರೆ, ಆತ ಸಿಎನ್‌ಸಿ ಅಪರೇಟರ್ ಆಗಿ ಕೆಲಸ ಮಾಡುತಿದ್ದ. ಆಕೆ ಹೆಸರು ನವ್ಯಾ. ಈತನ ಹೆಸರು ಪ್ರಶಾಂತ್. ನೋಡೋಕೆ ಇಬ್ಬರದ್ದು ಮುದ್ದಾದ ಜೋಡಿ. ಈ ಪ್ರಶಾಂತ ಹುಚ್ಚನ ರೀತಿ ನವ್ಯಾಳನ್ನು ಪ್ರೀತಿಸುತ್ತಿದ್ದ. ಅಂದರೆ ಮುಂದಿನ 18 ನೇ ತಾರಿಖು ಇದ್ದ ನವ್ಯಾ ಬರ್ತಡೆಯನ್ನ ತಾನು ಊರಲ್ಲಿ ಇರೋಲ್ಲ ಅಂತಾ ನಿನ್ನೆಯೇ ಆಚರಿಸಿದ್ದ. ರೂಮ್ ತುಂಬಾ ಬಲೂನ್ ಕಟ್ಟಿ ಅಲಂಕಾರ ಮಾಡಿ ತನ್ನ ಹುಡುಗಿ ಬರ್ತಡೆಯನ್ನ ನಾಲ್ಕು ದಿನ ಮೊದಲೇ ಅಚ್ಚುಕಟ್ಟಾಗಿ ಮಾಡಿದ್ದ.
ಇದನ್ನೂ ಓದಿ: Hema Malini : ಈ ಖ್ಯಾತ ನಟನೊಂದಿಗೆ ನಿಶ್ಚಯವಾಗಿತ್ತು ಹೇಮಾ ಮಾಲಿನಿ ಮದುವೆ! ಮಂಟಪದಲ್ಲಿ ಸಂಬಂಧ ಮುರಿದು ಬಿದ್ದಿದ್ಯಾಕೆ?
ಆದ್ರೆ, ಬರ್ತ್ ಡೇ ಕೇಕ್ ಕಟ್ ಮಾಡಿ ವಾಶ್ ರೂಮ್‌ಗೆ ಹೋಗಿದ್ದ ನವ್ಯಾ ಅದ್ಯಾರ ಜೊತೆಗೋ ಚಾಟ್ ಶುರುಮಾಡಿದ್ದಳು. ಇದನ್ನ ಗಮನಿಸಿದ ಪ್ರಶಾಂತ ಯಾರ ಜೊತೆ ಚಾಟ್ ಮಾಡುತ್ತಿದ್ದೀಯಾ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರ ಕೊಡಲು ನಿರಾಕರಿಸಿದ ನವ್ಯಾ ಮೊಬೈಲ್ ಲಾಕ್ ಮಾಡಿ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಇಷ್ಟೇ ಸಾಕಗಿತ್ತು ಪ್ರಶಾಂತನ ಕೋಪ ನೆತ್ತಿಗೇರಲು. ಅನುಮಾನದ ಭೂತವನ್ನ ತಲೆಗೇರಿಸಿಕೊಂಡ ಪ್ರಶಾಂತ ನವ್ಯಾ ನಡುವೆ ಜೋರು ಗಲಾಟೆಯಾಗಿದೆ.
ಗಲಾಟೆ ಜಾಸ್ತಿಯಾಗಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಪ್ರಶಾಂತ್ ನವ್ಯಾ ಕುತ್ತಿಗೆಗೆ ಇರಿದ್ದಿದ್ದಾನೆ. ಬರ್ತಡೇ ಸಂಭ್ರಮದ ರೂಮಲ್ಲಿ ನವ್ಯಾ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಸಂಜೆ ನಡೆದ ಕೊಲೆ ನಂತರ ಐದು ತಾಸು ಪ್ರೇಯಸಿ ಶವದ ಜೊತೆಗೆ ಪ್ರಶಾಂತ್ ಕಾಲ ಕಳೆದಿದ್ದಾನೆ. ಇನ್ನೂ ಕೊಲೆ ಪ್ರಕರಣ ಸಂಬಂಧಿಸಿ ರಾಜಗೋಪಲನಗರ ಪೊಲೀಸರು ಆರೋಪಿ ಪ್ರಶಾಂತ್ ನ ವಶಕ್ಕೆ ಪಡೆದಿದ್ದಾರೆ. ಇತ್ತ ತಂದೆ ಸಾವಿನ ನಂತರ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ್ದ ನವ್ಯಾ ಸಾವಿನ ಮನೆ ಸೇರಿರೋದು ಕುಟುಂಬಕ್ಕೆ ಮಾತ್ರ ತುಂಬಲಾರದ ನಷ್ಟವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.