ಸರ್ಕಾರಿ ನೌಕರರ ವೇತನದಲ್ಲಿ 8000 ರೂಪಾಯಿ ಹೆಚ್ಚಳ ! ಈಗ ಕೈ ಸೇರುವ ಮೊತ್ತ ಎಷ್ಟು ಇಲ್ಲಿದೆ ಲೆಕ್ಕಾಚಾರ

DA Hike News:ಮಾರ್ಚ್ 2023 ರಲ್ಲಿ ಸರ್ಕಾರವು 4 ಶೇಕಡಾ ಡಿಎ ಹೆಚ್ಚಳವನ್ನು ಘೋಷಿಸಿದೆ. ಇದಾದ ಬಳಿಕ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು ಸರ್ಕಾರ ಜನವರಿ 1 ರಿಂದ ಜಾರಿಗೆ ತಂದಿದೆ.

Written by - Ranjitha R K | Last Updated : Apr 17, 2023, 10:26 AM IST
  • ಇದು ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಪಟ್ಟ ವಿಚಾರ.
  • ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ
  • ಶೇ.46ಕ್ಕೆ ಏರಿಕೆಯಾಗಲಿದೆ ನೌಕರರ ಡಿಎ.
ಸರ್ಕಾರಿ ನೌಕರರ ವೇತನದಲ್ಲಿ  8000 ರೂಪಾಯಿ ಹೆಚ್ಚಳ ! ಈಗ ಕೈ ಸೇರುವ ಮೊತ್ತ ಎಷ್ಟು ಇಲ್ಲಿದೆ ಲೆಕ್ಕಾಚಾರ  title=

DA Hike News : ಇದು ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಪಟ್ಟ ವಿಚಾರ. ಹೌದು, ಕೇಂದ್ರ ನೌಕರರಿಗೆ ಮುಂದಿನ ದಿನಗಳಲ್ಲಿ ಮತ್ತೊಂದು ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ.  ಮಾರ್ಚ್ ಕೊನೆಯ ವಾರದಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ .4ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು. ಇದೀಗ ಈ ಬದಲಾವಣೆಯ ನಂತರ ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಬಾರಿಯೂ ಕೇಂದ್ರ ನೌಕರರ ಡಿಎಯನ್ನು ಶೇ.4ರಷ್ಟು ಹೆಚ್ಚಿಸಲಿದ್ದು, ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.

4 ರಷ್ಟು ಡಿಎ ಹೆಚ್ಚಳ ಘೋಷಣೆ : 
ಮಾರ್ಚ್ 2023 ರಲ್ಲಿ ಸರ್ಕಾರವು 4 ಶೇಕಡಾ ಡಿಎ ಹೆಚ್ಚಳವನ್ನು ಘೋಷಿಸಿದೆ. ಇದಾದ ಬಳಿಕ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು ಸರ್ಕಾರ ಜನವರಿ 1ರಿಂದ ಜಾರಿಗೆ ತಂದಿದೆ. ಇನ್ನು ಮುಂದಿನ ಡಿಎ ಹೆಚ್ಚಳ  ಜುಲೈ 1ರಿಂದ ಅನ್ವಯವಾಗಲಿದೆ.  ಡಿಎ ಮತ್ತು  ಡಿಆರ್ ದ್ವಿತೀಯಾರ್ಧದಲ್ಲಿ ನಾಲ್ಕು ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಡಿಎ ಶೇ.42ರಷ್ಟಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಇದು ಶೇ.46ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್..‌ ಮತ್ತೆ ಇಳಿಕೆಯಾದ ಚಿನ್ನದ ದರ

ಈ ಬಾರಿ 2023 ರ ದ್ವಿತೀಯಾರ್ಧದಲ್ಲಿ ಹೆಚ್ಚಳವಾಗುವ ಡಿಎಯನ್ನು ಆಗಸ್ಟ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಪ್ರತಿ ಬಾರಿಯೂ ದ್ವಿತೀಯಾರ್ಧದ ಡಿಎಯನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಘೋಷಿಸಲಾಗುತ್ತದೆ. ಆದರೆ ಈ ಬಾರಿ ಆಗಸ್ಟ್ ನಲ್ಲಿಯೇ ಡಿಎ ಘೋಷಣೆಯಾಗುವ ನಿರೀಕ್ಷೆ ಇದೆ. ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂದು ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಿಸುತ್ತದೆ.   

ಸಂಬಳದಲ್ಲಿ ಎಷ್ಟಾಗಲಿದೆ ಹೆಚ್ಚಳ?
ದ್ವಿತಿಯಾರ್ಧದಲ್ಲಿ ಕೇಂದ್ರ ನೌಕರರ ಡಿಎ ಶೇ.46ಕ್ಕೆ ಏರಿಕೆಯಾದರೆ ಅದಕ್ಕೆ ತಕ್ಕಂತೆ ವೇತನವೂ ಹೆಚ್ಚಾಗಲಿದೆ. ಉದಾಹರಣೆಗೆ, ಉದ್ಯೋಗಿ ಪ್ರಸ್ತುತ 18,000 ರೂಪಾಯಿ ಮೂಲ ವೇತನ ಪಡೆಯುತ್ತಿದ್ದರೆ, 42 ಶೇಕಡಾ ದರದಲ್ಲಿ 7560 ರೂಪಾಯಿ ಡಿಎ ಸಿಗುತ್ತದೆ. ಇದೀಗ ಡಿಎ  46 ಶೇಕಡಾಕ್ಕೆ ಹೆಚ್ಚಳವಾದರೆ ಉದ್ಯೋಗಿಯ ತುಟ್ಟಿ ಭತ್ಯೆ 8,280 ರೂಪಾಯಿ ಆಗಿರುತ್ತದೆ. 

ಇದನ್ನೂ ಓದಿ : Akshaya Tritiya: ಅಕ್ಷಯ ತೃತೀಯ ದಿನ ಚಿನ್ನದ ವಿಚಾರದಲ್ಲಾಗಲಿದೆ ಈ ಬದಲಾವಣೆ! ಖರೀದಿಸುವಾಗ ನೆನಪಿರಲಿ ಈ ವಿಚಾರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News