RCB vs CSK, Match Highlights: ಇಂಡಿಯನ್ ಪ್ರೀಮಿಯರ್ ಲೀಗ್ 2023ರ 24 ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ತಂಡ ಅದ್ಭುತ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು. ಇದಾದ ಬಳಿಕ ಗೆಲುವಿನ ಗುರಿ ತಲುಪಲು ಆರ್ಸಿಬಿ ತಂಡ ಮುನ್ನಡೆಯಿತು, ಆದರೆ 20 ಓವರ್’ನಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: IPLನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಕೊನೆಯಾಯ್ತು ಈ ಆಟಗಾರರ ವೃತ್ತಿಜೀವನ! ಕಾರಣ ಶಾಕಿಂಗ್
ಚೆನ್ನೈ ಪರ ಕಾನ್ವೇ-ದುವೆ ಅದ್ಭುತ ಇನ್ನಿಂಗ್ಸ್:
ಚೆನ್ನೈ ಸೂಪರ್ ಕಿಂಗ್ಸ್ ಪರ ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಕಾನ್ವೆ 45 ಎಸೆತಗಳಲ್ಲಿ 83 ರನ್’ಗಳ ಇನಿಂಗ್ಸ್ ಆಡಿದ್ದು, 6 ಬೌಂಡರಿ ಮತ್ತು 6 ಸಿಕ್ಸರ್’ಗಳು ಇದರಲ್ಲಿ ಸೇರಿದ್ದವು. ಇನ್ನೊಂದೆಡೆ ಶಿವಂ ದುಬೆ 27 ಎಸೆತಗಳಲ್ಲಿ 52 ರನ್’ಗಳ ಇನಿಂಗ್ಸ್ ಆಡಿದ್ದು, 2 ಬೌಂಡರಿ ಮತ್ತು 5 ದೀರ್ಘ ಸಿಕ್ಸರ್’ಗಳು ಒಳಗೊಂಡಿವೆ. ಇನ್ನುಳಿದಂತೆ ಅಜಿಂಕ್ಯ ರಹಾನೆ ಕೂಡ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 37 ರನ್ ಗಳಿಸಿದ್ದರು.
ಬೆಂಗಳೂರು ಪರ ಮ್ಯಾಕ್ಸ್ವೆಲ್-ಡು ಪ್ಲೆಸಿಸ್ ರೋಚಕ ಬ್ಯಾಟಿಂಗ್:
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 227 ರನ್’ಗಳ ದೊಡ್ಡ ಗುರಿ ಬೆನ್ನಟ್ಟಿದ ಬೆಂಗಳೂರು, ಆರಂಭಿಕ ಆಘಾತವನ್ನು ಎದುರಿಸಿತು. 15 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು ಆರ್ ಸಿ ಬಿ. ಇದಾದ ಬಳಿಕ ಬ್ಯಾಟಿಂಗ್’ಗೆ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಸಿಕ್ಸರ್’ಗಳ ಸುರಿಮಳೆಗೈದರು. ಮ್ಯಾಕ್ಸ್ವೆಲ್ 36 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ 76 ರನ್ ಗಳಿಸಿದರೆ, ಪ್ಲೆಸಿಸ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 62 ರನ್ ಬಾರಿಸಿದೆ. ಇದಲ್ಲದೆ ಕೊನೆಯ ಓವರ್’ನಲ್ಲಿ ಆಗಮಿಸಿದ ದಿನೇಶ್ ಕಾರ್ತಿಕ್ ಮತ್ತು ಸುಯಶ್ ಪ್ರಭುದೇಸಾಯಿ ತಂಡವನ್ನು ಗೆಲುವಿನ ಸಮೀಪಕ್ಕೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ನೋಡಲು ಸಣಕಲು… ಆದ್ರೆ World Cupನಲ್ಲಿ ಟೀಂ ಇಂಡಿಯಾ ಆನೆಬಲ ತುಂಬಲಿದ್ದಾನೆ ಈ ಆಟಗಾರ! ಎಂಟ್ರಿ ಕನ್ಫರ್ಮ್?
ಚೆನ್ನೈನಿಂದ ಉತ್ತಮ ಬೌಲಿಂಗ್”
ಚೆನ್ನೈ ಸೂಪರ್ ಕಿಂಗ್ಸ್ ಬೌಲರ್’ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ವೇಗಿ ತುಷಾರ್ ದೇಶಪಾಂಡೆ ಗರಿಷ್ಠ 3 ವಿಕೆಟ್ ಪಡೆದರೆ, ಮತಿಶ ಪತಿರಣ 2 ವಿಕೆಟ್ ಪಡೆದಿದ್ದಾರೆ. ಇನ್ನು, ಆಕಾಶ್ ಸಿಂಗ್, ಮಹಿಷ್ ತೀಕ್ಷಣ ಮತ್ತು ಮೊಯಿನ್ ಅಲಿ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಆರ್ ಸಿ ಬಿ ಬೌಲಿಂಗ್ ಹೇಳಿಕೊಳ್ಳುವಂತಹ ಅದ್ಭುತವನ್ನು ಸೃಷ್ಟಿಸಿಲ್ಲ. ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಖ್, ವೇಯ್ನ್ ಪಾರ್ನೆಲ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮತ್ತು ಹರ್ಷಲ್ ಪಟೇಲ್ ಸೇರಿದಂತೆ ಎಲ್ಲಾ ಬೌಲರ್ಗಳು ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.