ಇದು ʼಬಾಡಿ ಬಿಲ್ಡರ್ʼ ಕಳ್ಳನಾದ ಸ್ಟೋರಿ: ಸರಗಳ್ಳತನವೇ ಈತನ ಕಾಯಕ..!

ಮಿಸ್ಟರ್‌ ಆಂಧ್ರಪ್ರದೇಶ ಸ್ಪರ್ಧೆಯಲ್ಲಿ  3ನೇ ಸ್ಥಾನ ಪಡೆದು ಮಿಂಚಿದ್ದ ದೇಹದಾರ್ಡ್ಯ ಪಟುಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಯರನ್ನ ಟಾರ್ಗೆಟ್‌ ಮಾಡುತ್ತಿದ್ದ ಐನಾತಿಗಳು, ಬೈಕಲ್ಲಿ ಬಂದು ಸರಗಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದರು.. 

Written by - VISHWANATH HARIHARA | Edited by - Krishna N K | Last Updated : Apr 24, 2023, 08:35 PM IST
  • ಸರಗಳ್ಳತನ ಮಾಡುತ್ತಿದ್ದ ಬಾಡಿ ಬಿಲ್ಡರ್‌ ಬಂಧನ.
  • ಮಿಸ್ಟರ್‌ ಆಂಧ್ರಪ್ರದೇಶ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದು ಮಿಂಚಿದ್ದ ದೇಹದಾರ್ಡ್ಯ ಪಟು.
  • ಐಷಾರಾಮಿ ಬದುಕಿನ ದುರಾಸೆಗೆ ಬಿದ್ದು ಕಳ್ಳತನ ಮಾಡುತ್ತಿದ್ದ ಆರೋಪಿ.
ಇದು ʼಬಾಡಿ ಬಿಲ್ಡರ್ʼ ಕಳ್ಳನಾದ ಸ್ಟೋರಿ: ಸರಗಳ್ಳತನವೇ ಈತನ ಕಾಯಕ..!   title=

ಬೆಂಗಳೂರು : ಬಾಡಿ ಬಿಲ್ಡಿಂಗ್‌ ಮಾಡಿ ಮಿಸ್ಟರ್‌ ಆಂಧ್ರಪ್ರದೇಶ ಸ್ಪರ್ಧೆಯಲ್ಲಿ  3ನೇ ಸ್ಥಾನ ಪಡೆದು ಮಿಂಚಿದ್ದ ದೇಹದಾರ್ಡ್ಯ ಪಟುಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆಂಧ್ರ ಮೂಲದ ಸೈಯದ್ ಬಾಷ ಬಂಧಿತ ಆರೋಪಿಯಾಗಿದ್ದಾನೆ. ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸೈಯದ್ ಬಾಷ ಜೊತೆಗೆ ಈತನ ಕಳ್ಳ ಸ್ನೇಹಿತ ಶೇಖ್ ಅಯೂಬ್ ನನ್ನು ಬಂಧಿಸಿದ್ದಾರೆ. 

ಶೇಖ್ ಅಯೂಬ್ ಆಂಧ್ರಪ್ರದೇಶದಲ್ಲಿ ಬಾಡಿಬಿಲ್ಡಿಂಗ್‌ನಲ್ಲಿ ದೊಡ್ಡ ಹೆಸರು ಮಾಡಿದ್ದ.. ಆದರೆ ಐಷಾರಾಮಿ ಬದುಕಿನ ದುರಾಸೆಗೆ ಬಿದ್ದ ಈತ, ಶೇಖ್ ಅಯೂಬ್ ಜೊತೆ ಸೇರಿ ಕಳ್ಳತನವನ್ನ ಕಾಯಕ ಮಾಡಿಕೊಂಡಿದ್ದ. ಆಂಧ್ರದಲ್ಲಿ ಬಂಧಿತರ ಮೇಲೆ ಬರೋಬ್ಬರಿ 32 ಪ್ರಕರಣಗಳಿವೆ. ಮಹಿಳೆಯರನ್ನ ಟಾರ್ಗೆಟ್‌ ಮಾಡುತ್ತಿದ್ದ ಐನಾತಿಗಳು, ಬೈಕಲ್ಲಿ ಬಂದು ಸರಗಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದರು.. ಹೀಗಾಗಿ ಆಂಧ್ರ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 

ಇದನ್ನೂ ಓದಿ: Malaika arora : ವಯಸ್ಸು ಬರೀ ಸಂಖ್ಯೆ ಅಷ್ಟೇ ಅಲ್ವಾ..! ಮಲೈಕಾ ಅಂದಕ್ಕೆ ಸರಿಸಾರಿ ಯಾರು..?

ಆದರೆ ಜಾಮೀನು ಪಡೆದು ಹೊರಬಂದ ಆರೋಪಿಗಳು ಆಂಧ್ರದಲ್ಲಿ ನಮ್ಮ ಆಟ ನಡೆಯಲ್ಲಿ ಅಂತಾ ಸಿಲಿಕಾನ್‌ ಸಿಟಿಗೆ ಎಂಟ್ರಿ ಕೊಟ್ಟು ಕೈಚಳಕ ಶುರುಮಾಡಿದ್ದರು. ಸುಬ್ರಮಣ್ಯಪುರದಲ್ಲಿ 2, ಕಾಟನ್‌ಪೇಟೆ 1,ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗೆಯೇ ಪ್ರವೃತ್ತಿ ಮುಂದುವರೆಸಿದ್ದ ಆಸಾಮಿಗಳು ಕಳೆದ ತಿಂಗಳ 23ನೇ ತಾರೀಖು ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಸರ ಕದ್ದು ತಮ್ಮ ಎಸ್ಕೇಪ್‌ ಆಗಿದ್ದರು. 

ಸರ ಕಳೆದುಕೊಂಡ ಮಹಿಳೆ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸದ್ಯ ಆರೋಪಿಗಳನ್ನು ಬಂಧಿಸಿ 6 ಲಕ್ಷ ಮೌಲ್ಯದ ಚಿನ್ನದ ಸರಗಳು,ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಸೀಜ್ ಮಾಡಿದ್ದಾರೆ. ಇನ್ನೂ ಉತ್ತಮ ಭವಿಷ್ಯವಿದ್ದ ಬಾಡಿಬಿಲ್ಡರ್‌ ತನ್ನ ಸ್ನೇಹಿತನ ಜೊತೆ ಜೈಲಲ್ಲಿ ಮುದ್ದೆ ಮುರಿಯುವಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News