ಬೆಂಗಳೂರು : ಹೋಂಡಾ ಸಿಟಿ ಬಹಳ ಕಾಲದಿಂದ ಭಾರತೀಯ ಕಾರು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಈ ಕಂಪನಿಯ ಕಾರಿಗೆ ಬೇಡಿಕೆ ಕೂಡಾ ಇದೆ. ಆದರೆ, ಹೋಂಡಾ ತನ್ನ ಫೋರ್ತ್ ಜನರೇಶನ್ ಸಿಟಿಯನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ, ಫಿಫ್ತ್ ಜನರೇಶನ್ ಸಿಟಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರಿನ ಬೆಲೆ ಸುಮಾರು 11.5 ಲಕ್ಷದಿಂದ ಪ್ರಾರಂಭವಾಗುತ್ತವೆ. ಇದರ ಬೆಲೆ ನೋಡಿದರೆ ಇದು ದುಬಾರಿ ಕಾರು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಆದರೆ ಹೊಂಡಾ ಸಿಟಿಯಂತೆಯೇ ಆರಾಮದಾಯಕ, ಚಾಲನಾ ಅನುಭವ ಮತ್ತು ವಿಶ್ವಾಸಾರ್ಹತೆಯ ಕಾರನ್ನು ಕೈ ಗೆಟಕುವ ದರದಲ್ಲಿ ಖರೀದಿಸಬೆಕಾದರೂ ಆಯ್ಕೆ ಲಭ್ಯವಿದೆ. ಹೋಂಡಾ ಸಿಟಿಯಂತಹ ಕೈಗೆಟುಕುವ ಸೆಡಾನ್ ಖರೀದಿಸಲು ಬಯಸುವವರಿಗೆ ಹೋಂಡಾ ಅಮೇಜ್ ಒಂದು ಉತ್ತಮ ಆಯ್ಕೆಯಾಗಿದೆ. ಹೋಂಡಾ ಸಿಟಿಗೆ ಹೋಲಿಸಿದರೆ, ಹೋಂಡಾ ಅಮೇಜ್ ಒಂದು ಸ್ಟೆಪ್ ಕೆಳಗಿನ ಉತ್ಪನ್ನವಾಗಿದೆ. ಕಡಿಮೆ ಐಷಾರಾಮಿ, ಕಡಿಮೆ ಫೀಚರ್ ಲೋಡ್ ಮತ್ತು ಕಡಿಮೆ ದಕ್ಷತೆಯನ್ನು ಹೊಂದಿರುವ ಕಾರು . ಆದ್ದರಿಂದ, ಇದರ ಬೆಲೆ ಹೊಂಡಾ ಸಿಟಿಗಿಂತ ಅಗ್ಗ. ಅಮೇಜ್ ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಸೆಡಾನ್ ಆಗಿದೆ.
ಬೆಲೆ ಮತ್ತು ರೂಪಾಂತರಗಳು :
ಹೋಂಡಾ ಅಮೇಜ್ ಬೆಲೆ 6.99 ಲಕ್ಷದಿಂದ 9.60 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುತ್ತದೆ. ಇದರ ಟಾಪ್ ವೆರಿಯಂಟ್ನ ಬೆಲೆಯು ಹೋಂಡಾ ಸಿಟಿಯ ಮೂಲ ರೂಪಾಂತರದ ಬೆಲೆಗಿಂತ ಕಡಿಮೆಯಾಗಿದೆ. (ರೂ. 11.5 ಲಕ್ಷ). ಎರಡರ ಮೂಲ ರೂಪಾಂತರಗಳ ಬೆಲೆಯನ್ನು ಗಮನಿಸುವುದಾದರೆ ಸುಮಾರು 4.5 ಲಕ್ಷ ರೂಪಾಯಿಗಳ ವ್ಯತ್ಯಾಸವಿದೆ. ಅಮೇಜ್ E, S ಮತ್ತು VX ಮೂರು ರೂಪಾಂತರಗಳಲ್ಲಿ ಬರುತ್ತದೆ. ಇದು 5 ಆಸನಗಳ ಸೆಡಾನ್ ಕಾರು.
ಇದನ್ನೂ ಓದಿ : ಬೇಸಿಗೆಯಲ್ಲಿ ಕಾಶ್ಮೀರದ ಅನುಭವ ನೀಡುತ್ತೆ ಈ ಪುಟ್ಟ Air Cooler: ಒಂದಲ್ಲ ಎರಡಲ್ಲ.. ಹತ್ತಾರು ವೈಶಿಷ್ಟ್ಯ- ಬೆಲೆ ಜಸ್ಟ್ 1500 ರೂ!
ಇಂಜಿನ್ ವಿಶೇಷತೆಗಳು :
ಅಮೇಜ್ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ, ಇದು 90PS ಪವರ್/110Nm ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಇದು ಮೊದಲು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿತ್ತು. ಆದರೆ ಕಂಪನಿಯು ಇದೀಗ ಅದನ್ನು ಸ್ಥಗಿತಗೊಳಿಸಲಾಗಿದೆ. ಅಮೇಜ್ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್/ಸಿವಿಟಿ ಆಯ್ಕೆಯನ್ನು ಪಡೆಯುತ್ತದೆ. ಇದು CVT ಜೊತೆಗೆ ಪ್ಯಾಡಲ್ ಶಿಫ್ಟರ್ಗಳ ಆಯ್ಕೆಯೊಂದಿಗೆ ಕೂಡಾ ಬರುತ್ತದೆ. ಇದು 18.6KM ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಅಮೇಜ್ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ ಇದು 7-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್ಗಳು (ಸಿವಿಟಿ ಮಾತ್ರ), ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, ISOFIX ಚೈಲ್ಡ್ ಸೀಟ್ ಆಂಕರ್ಗಳು, ರಿಯರ್ ಪಾರ್ಕಿಂಗ್ ಸೆನ್ಸರ್ಗಳು, ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಫಾಗ್ ಲ್ಯಾಂಪ್ಗಳು ಮತ್ತು 15- ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ನಂಥಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
ಇದನ್ನೂ ಓದಿ : ಒಂದು ರೂಪಾಯಿಯೂ ಖರ್ಚಾಗಲ್ಲ, FREE ಆಗಿ ಸಿಗುತ್ತೆ 55-ಇಂಚಿನ ಸ್ಮಾರ್ಟ್ ಟಿವಿ, ಹೇಗ್ ಗೊತ್ತಾ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ