Pakistan Politics: ಇಮ್ರಾನ್ ಖಾನ್ ಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಲಾಹೋರ್ ಎಟಿಸಿ

Lahore ATC Imran Khan: ಜಿನ್ನಾ ಹೌಸ್ ದಾಳಿ ಸೇರಿದಂತೆ ಮತ್ತೆರಡು ಪ್ರಕರಣಗಳಲ್ಲಿ ನ್ಯಾಯಾಲಯ ಇಮ್ರಾನ್ ಖಾನ್ ಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಇಮ್ರಾನ್ ಖಾನ್‌ಗೆ ಜೂನ್ 2 ರವರೆಗೆ ಮಧ್ಯಂತರ ಜಾಮೀನು ನೀಡಿದೆ.  

Written by - Nitin Tabib | Last Updated : May 19, 2023, 03:06 PM IST
  • ಇದಕ್ಕೂ ಮೊದಲು ತಮ್ಮ ಮನೆಯ ತಪಾಸಣೆ ನಡೆಸಬಹುದು ಎಂದು ಸ್ವತಃ ಇಮ್ರಾನ್ ಖಾನ್ ಹೇಳಿದ್ದಾರೆ.
  • ಆದರೆ ಇದಕ್ಕೆ ಅವರು ಒಂದು ಷರತ್ತು ವಿಧಿಸಿದ್ದಾರೆ,
  • ಮನೆಯ ತಪಾಸಣೆಗೆ ಬರುವವರ ಬಳಿ ಮಾನ್ಯತೆ ಇರುವ ವಾರೆಂಟ್ ಇರಬೇಕು ಎಂದು ಅವರು ಹೇಳಿದ್ದಾರೆ.
Pakistan Politics: ಇಮ್ರಾನ್ ಖಾನ್ ಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಲಾಹೋರ್ ಎಟಿಸಿ  title=

Lahore ATC Imran Khan: ಇಮ್ರಾನ್ ಖಾನ್‌ಗೆ ಲಾಹೋರ್ ಆಂಟಿಟೆರರ್ ಕೋರ್ಟ್ (ಎಟಿಸಿ) ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದೆ. 2 ಪ್ರಕರಣಗಳಲ್ಲಿ ಇಮ್ರಾನ್‌ಗೆ ಜೂನ್ 2 ರವರೆಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಜಿನ್ನಾ ಹೌಸ್ ಮೇಲಿನ ದಾಳಿ ಸೇರಿದಂತೆ ಎರಡು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಈ ಜಾಮೀನು ಪಡೆದಿದ್ದಾರೆ. ಇದೇ ವೇಳೆ ಜಮಾನ್ ಪಾರ್ಕ್ ಗೆ ನಿಯೋಗ ತೆರಳಲಿದೆ ಎಂಬ ಸುದ್ದಿ ಇದೆ. ಸರ್ಕಾರದ ನಿಯೋಗ ಮಾತುಕತೆ ನಡೆಸಲಿದೆ. ಈ ವೇಳೆ ಶೋಧ ಕಾರ್ಯದ ಬಗ್ಗೆಯೂ ಚರ್ಚೆ ನಡೆಯಲಿದೆ. ಆಯುಕ್ತ ರಾಂಧವ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇಮ್ರಾನ್ ಖಾನ್ ಪಕ್ಷದ ಪಿಟಿಐ ಜೊತೆ ಮಾತುಕತೆಗಾಗಿ ಸರ್ಕಾರದ ಸಂಧಾನ ತಂಡ ಜಮಾನ್ ಪಾರ್ಕ್‌ಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ. ಲಾಹೋರ್ ಕಮಿಷನರ್ ಮುಹಮ್ಮದ್ ಅಲಿ ರಾಂಧವಾ ನೇತೃತ್ವದ ತಂಡವು ಪಾಕಿಸ್ತಾನ ತೆಹ್ರೀಕ್‌ನೊಂದಿಗೆ ಮಾತುಕತೆಗಾಗಿ ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಅವರ ಸೂಚನೆಯ ಮೇರೆಗೆ ಶುಕ್ರವಾರದ ಪ್ರಾರ್ಥನೆಯ ನಂತರ ಇಂದು ಜಮಾನ್ ಪಾರ್ಕ್ ತಲುಪಲಿದೆ. ಸರ್ಕಾರಿ ತಂಡವು ಮಧ್ಯಾಹ್ನ 2 ಗಂಟೆಗೆ (ಪಾಕ್ ಕಾಲಮಾನ) ಜಮಾನ್ ಪಾರ್ಕ್ ತಲುಪುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇಮ್ರಾನ್ ಪಕ್ಷಕ್ಕೆ ನಿಷೇಧ?
ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಪಿಟಿಐ ನಿಷೇಧಿಸಲು ಸಿದ್ಧತೆ ನಡೆದಿದೆ. ಪಿಟಿಐ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಗೃಹ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ. ಸಚಿವ ಸಂಪುಟವು ಇದನ್ನು ಪರಿಗಣಿಸುತ್ತಿದೆ. ಒಂದು ಕಡೆ ಇಮ್ರಾನ್ ಖಾನ್ ಅವರ ಪಕ್ಷವನ್ನು ಬ್ಯಾನ್ ಮಾಡುವ ಮಾತುಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಇಮ್ರಾನ್ ಖಾನ್ ಶಹಬ್ಬಾಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಪೊಲೀಸರಿಗಿಂತ ಒಂದು ಹೆಜ್ಜೆ ಮುಂದೆ ಇಮ್ರಾನ್!
ಗಮನಾರ್ಹವಾಗಿ, ಮೇ 9 ರಂದು ಪಾಕಿಸ್ತಾನದಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಜನರನ್ನು ಬಂಧಿಸಲು ಸಿದ್ಧತೆಗಳು ನಡೆಯುತ್ತಿವೆ. ಗುರುವಾರ, ಪೊಲೀಸರು ಇಮ್ರಾನ್ ಅವರ ಮನೆ ಮೇಲೆ ದಾಳಿ ನಡೆಸಲು ಮುಂದಾದಾಗ ಇಮ್ರಾನ್ ಖಾನ್ ಮಾಸ್ಟರ್ ಸ್ಟ್ರೋಕ್ ಆಡಿದರು ಮತ್ತು ಪೊಲೀಸರಿಗಿಂತ ಮುಂಚಿತವಾಗಿ ತಮ್ಮ ಮನೆಯ ತನಿಖೆ ಮಾಡಲು ಅಲ್ಲಿನ ಮಾಧ್ಯಮಗಳಿಗೆ ಬರಮಾಡಿಕೊಂಡಿದ್ದಾರೆ. ಇಮ್ರಾನ್ ಖಾನ್ ನ ಈ ಕ್ರಮದ ನಂತರ ಪಂಜಾಬ್ ಪೊಲೀಸರು ಕೂಡ ಹೊಸ ಪ್ಲಾನ್ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ-Pakistan Crisis : 'ನನಗೆ ಭಯ ಉಂಟು ಮಾಡುವ ಕನಸುಗಳು ಬೀಳುತ್ತಿವೆ'

ಹಂಗಾಮಿ ಮಾಹಿತಿ ಸಚಿವರು ಈ ಕ್ರಮ ಕೈಗೊಂಡಿದ್ದಾರೆ
ಈ ಬಗ್ಗೆ ಪಂಜಾಬ್‌ನ ಹಂಗಾಮಿ ಮಾಹಿತಿ ಸಚಿವ ಅಮೀರ್ ಮಿರ್, ಮೌಖಿಕ ಮಾತುಕತೆಯ ಬದಲಾಗಿ ನಾವು ಲಾಹೋರ್ ಕಮಿಷನರ್ ಮೇಲ್ವಿಚಾರಣೆಯಲ್ಲಿ ಇಮ್ರಾ ಖಾನ್ ಬಳಿಗೆ ನಿಯೋಗವನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಭೇಟಿಯಾಗಲು ನಿಯೋಗ ಸಮಯ ಪಡೆದುಕೊಳ್ಳಲಿದೆ ಮತ್ತು ಶುಕ್ರವಾರದ ಪ್ರಾರ್ಥನೆಯ ನಂತರ ಅವರನ್ನು ಭೇಟಿ ನಡೆಸಲಿದೆ. ಆ ಸಂದರ್ಭದಲ್ಲಿ  ಶೋಧ ಕಾರ್ಯಾಚರಣೆ ನಡೆಸಲು ಇಮ್ರಾನ್ ಖಾನ್ ಅವರಿಂದ ನಿಯೋಗ ಅನುಮತಿ ಪಡೆಯಲಿದೆ. ಆದರೆ, ನಿಯೋಗದ ಹೆಸರಿನಲ್ಲಿ ಮಾಡಿರುವ ಯೋಜನೆ ಇಮ್ರಾನ್ ಮೇಲೆ ನೇರ ದಾಳಿಯೂ ಆಗಬಹುದು. ಏಕೆಂದರೆ ನಿಯೋಗದ ಜೊತೆಗೆ 400 ಪೊಲೀಸರೂ ತೆರಳಲಿದ್ದಾರೆ.

ಇದನ್ನೂ ಓದಿ- US Green Card: ಭಾರತೀಯರಿಗೆ ಗ್ರೀನ್ ಕಾರ್ಡ್ ಸಿಗುವಲ್ಲಿ ಏಕೆ ವಿಳಂಬವಾಗುತ್ತಿದೆ, ಕಾರಣ ಹೇಳಿದ ಯುಎಸ್

ಇದಕ್ಕೂ ಮೊದಲು ತಮ್ಮ ಮನೆಯ ತಪಾಸಣೆ ನಡೆಸಬಹುದು ಎಂದು ಸ್ವತಃ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಒಂದು ಷರತ್ತು ವಿಧಿಸಿದ್ದಾರೆ, ಮನೆಯ ತಪಾಸಣೆಗೆ ಬರುವವರ ಬಳಿ ಮಾನ್ಯತೆ ಇರುವ ವಾರೆಂಟ್ ಇರಬೇಕು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ತಪಾಸಣೆ ನಡೆಸಲು ಇಮ್ರಾನ್ ಖಾನ್ ಅವಕಾಶ ನೀಡದಿದ್ದರೆ ಪಂಜಾಬ್ ಪೊಲೀಸರ ಹೊಸ ಪ್ಲಾನ್ ಏನು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಪಂಜಾಬ್ ಪೊಲೀಸರು ಇಮ್ರಾನ್ ಅವರ ಮನೆಗೆ ಬಲವಂತವಾಗಿ ಪ್ರವೇಶಿಸುತ್ತಾರೆಯೇ, ಹುಡುಕಾಟ ನಡೆಸುತ್ತಾರೆಯೇ ಅಥವಾ ಬೇರೆ ವಿಧಾನವನ್ನು ಅನುಸರಿಸುತ್ತಾರೆಯೇ? ಎಂಬುದು ಕಾದುನೋಡಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News