ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣವನ್ನು ಅವಹೇಳನ ಮಾಡುವ ಮೂಲಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಅವರ ಪಕ್ಷದ ಮನುವಾದದಲ್ಲಿನ ವರ್ಣಾಶ್ರಮ ಬಗೆಗಿನ ಪ್ರೀತಿ ಹಾಗೂ ದಮನಿತರ ವಿರುದ್ಧದ ಮನಸ್ಥಿತಿ ತೆರೆದಿಟ್ಟಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಬಿಜೆಪಿಯವರು ವರ್ಣಾಶ್ರಮ ಪದ್ಧತಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ, ಅ ಪ್ರಯತ್ನವೇ ಆರಗ ಅವರ ಬಾಯಲ್ಲಿ ಈಗ ಹೊರಬಂದಿದೆ. ಇದೇ ಆರಗ ಜ್ಞಾನೇಂದ್ರ ಹಿಂದೆ ತುಳುನಾಡಿನ ನೆಲಮೂಲ ಸಂಸ್ಕೃತಿಯ ದೈವಗಳನ್ನು ಅವಮಾನಿಸಿದ್ದರು, ಈಗ ಒಂದೇ ಮಾತಿನಲ್ಲಿ ಉತ್ತರ ಕರ್ನಾಟಕದ ಜನರನ್ನು, ದಲಿತ ಸಮುದಾಯವನ್ನು, ಕಪ್ಪು ವರ್ಣದ ಜನರನ್ನು ಮತ್ತು ದೇಶದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಅವಮಾನಿಸಿದ್ದಾರೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
,@BJP4Karnataka ಗೆ ಉತ್ತರ ಕರ್ನಾಟಕದ ಜನರ ಬಗ್ಗೆ, ದಲಿತರ ಬಗ್ಗೆ, ಕಪ್ಪುವರ್ಣದವರ ಬಗ್ಗೆ ನಿಜಕ್ಕೂ ಗೌರವ ಇದ್ದಿದ್ದೇ ಆದರೆ ಎಐಸಿಸಿ ಅಧ್ಯಕ್ಷರಾದ @kharge ಅವರನ್ನು, ಅರಣ್ಯ ಸಚಿವರಾದ @eshwar_khandre ಅವರನ್ನು ಹಾಗೂ ಉತ್ತರ ಕರ್ನಾಟಕದ ಜನತೆಯನ್ನು ಅತ್ಯಂತ ಕೀಳು ಅಭಿರುಚಿಯ ಮಾತುಗಳಿಂದ ಅವಮಾನಿಸಿದ @JnanendraAraga ಅವರನ್ನು ಬಿಜೆಪಿ…
— Karnataka Congress (@INCKarnataka) August 2, 2023
ಇದನ್ನೂ ಓದಿ: ʼಶಕ್ತಿʼಯ ವ್ಯಯದ ಮೊತ್ತ ಬಿಡುಗಡೆ ಮಾಡಿದ ಸರ್ಕಾರ : ಯಾವ ಸಾರಿಗೆ ನಿಗಮಕ್ಕೆ ಎಷ್ಟು..?
‘ಬಿಜೆಪಿಗೆ ಸಭ್ಯ ರಾಜಕಾರಣ ಮಾಡುವುದು ತಿಳಿದೇ ಇಲ್ಲವೇ? ಬಿಜೆಪಿಗೆ ಉತ್ತರ ಕರ್ನಾಟಕದ ಜನರ ಬಗ್ಗೆ, ದಲಿತರ ಬಗ್ಗೆ, ಕಪ್ಪುವರ್ಣದವರ ಬಗ್ಗೆ ನಿಜಕ್ಕೂ ಗೌರವ ಇದ್ದಿದ್ದೇ ಆದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರನ್ನು, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಹಾಗೂ ಉತ್ತರ ಕರ್ನಾಟಕದ ಜನತೆಯನ್ನು ಅತ್ಯಂತ ಕೀಳು ಅಭಿರುಚಿಯ ಮಾತುಗಳಿಂದ ಅವಮಾನಿಸಿದ ಆರಗ ಜ್ಞಾನೇಂದ್ರ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು. ಅವರ ಹೇಳಿಕೆಗೆ ಬಿಜೆಪಿ ಪಕ್ಷ ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಖರ್ಗೆಯವರ ಮೈ ಬಣ್ಣವನ್ನು ಅವಹೇಳನ ಮಾಡುವ ಮೂಲಕ @JnanendraAraga ಮತ್ತು ಅವರ ಪಕ್ಷದ ಮನುವಾದದಲ್ಲಿನ ವರ್ಣಾಶ್ರಮ ಬಗೆಗಿನ ಪ್ರೀತಿ ಹಾಗೂ ದಮನಿತರ ವಿರುದ್ಧದ ಮನಸ್ಥಿತಿ ತೆರೆದಿಟ್ಟಿದ್ದಾರೆ.
ಬಿಜೆಪಿಯವರು ವರ್ಣಾಶ್ರಮ ಪದ್ದತಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ, ಅ ಪ್ರಯತ್ನವೇ ಆರಗ ಅವರ ಬಾಯಲ್ಲಿ ಈಗ ಹೊರಬಂದಿದೆ.
ಇದೇ ಆರಗ…
— Karnataka Congress (@INCKarnataka) August 2, 2023
‘ಬಿಸಿಲು ನಾಡಿನ ಉತ್ತರ ಕರ್ನಾಟಕದ ಜನರನ್ನು, ಕಪ್ಪು ಬಣ್ಣದವರನ್ನು, ದಲಿತರನ್ನು ಬಿಜೆಪಿ ತುಚ್ಚವಾದ ದೃಷ್ಟಿಯಲ್ಲಿ ನೋಡುತ್ತದೆ ಎನ್ನುವುದಕ್ಕೆ ಆರಗ ಜ್ಞಾನೇಂದ್ರ ಅವರ ಕೀಳುಮಟ್ಟದ ಹೇಳಿಕೆಯೇ ಸಾಕ್ಷಿ. ಬಿಸಿಲುನಾಡಿನ ಶ್ರಮಜೀವಿಗಳು ಕಪ್ಪು ಬಣ್ಣದಲ್ಲಿರುವುದು ಭ್ರಷ್ಟಾಚಾರದ ಹಣದಿಂದ ಎಸಿ ಮನೆಯಲ್ಲಿರುವ ಬಿಜೆಪಿಗರಿಗೆ ನೋಡಲಾಗುತ್ತಿಲ್ಲವೇ? ಉತ್ತರ ಕರ್ನಾಟಕದವರನ್ನು ಪ್ರತ್ಯೇಕತಾ ಭಾವನೆಯಲ್ಲಿ ನೋಡುತ್ತಿರುವ ಬಿಜೆಪಿಗೆ ಅಲ್ಲಿನ ಜನರ ಮತಗಳು ಮಾತ್ರ ಬೇಕೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ವರ್ಕೌಟ್ ಮಾಡಿ ಸುಸ್ತಾದ ಶಿಲ್ಪಾ ಶೆಟ್ಟಿ, ವಿಡಿಯೋ ನೋಡಿ
ಬಿಸಿಲು ನಾಡಿನ ಉತ್ತರ ಕರ್ನಾಟಕದ ಜನರನ್ನು, ಕಪ್ಪು ಬಣ್ಣದವರನ್ನು, ದಲಿತರನ್ನು ಬಿಜೆಪಿ ತುಚ್ಚವಾದ ದೃಷ್ಟಿಯಲ್ಲಿ ನೋಡುತ್ತದೆ ಎನ್ನುವುದಕ್ಕೆ @JnanendraAraga ಅವರ ಕೀಳು ಮಟ್ಟದ ಹೇಳಿಕೆಯೇ ಸಾಕ್ಷಿ.
ಬಿಸಿಲುನಾಡಿನ ಶ್ರಮಜೀವಿಗಳು ಕಪ್ಪು ಬಣ್ಣದಲ್ಲಿರುವುದು ಭ್ರಷ್ಟಾಚಾರದ ಹಣದಿಂದ ಎಸಿ ಮನೆಯಲ್ಲಿರುವ ಬಿಜೆಪಿಗರಿಗೆ ನೋಡಲಾಗುತ್ತಿಲ್ಲವೇ?…
— Karnataka Congress (@INCKarnataka) August 2, 2023
‘ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳುಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ. ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ’ ಎಂದು ಕಾಂಗ್ರೆಸ್ ಟೀಕಿಸಿದೆ.
ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ @JnanendraAraga ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ.
ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ.ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ…
— Karnataka Congress (@INCKarnataka) August 2, 2023
‘ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ, ಪಾಶ್ಚಿಮಾತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ, ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ. ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.