ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಆಟೋ ಕದ್ದು ಪರಾರಿಯಾದ ಖದೀಮ...ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ

Auto Theft : ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಬಳಿಯಿರುವ ಮೊಬೈಲ್​, ಪರ್ಸ್​ ಇತ್ಯಾದಿ ವಸ್ತುಗಳು ಮಾಯವಾಗುತ್ತದೆ. ಅದರಂತೆ ಇದೀಗ ಕ್ವಾಟರ್ ಎಣ್ಣೆಗಾಗಿ ತನ್ನ ಹೊಸ ಆಟೋ ವನ್ನು ಕಳೆದುಕೊಂಡ ಘಟನೆ ದಾಸರಹಳ್ಳಿಯ 8ನೇ ಮೈಲಿ ಅಟೋಸ್ಟಾಂಡ್​ನಲ್ಲಿ ನಡೆದಿದೆ.  

Written by - Savita M B | Last Updated : Aug 19, 2023, 08:40 PM IST
  • ಎಣ್ಣೆ ಕುಡಿಸಿ, ಆಟೋ ಕದ್ದ ಖದೀಮ
  • ಆಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ
  • ಅಟೋದಲ್ಲಿದ್ದ 25ಸಾವಿರ ಬೆಲೆಬಾಳುವ ಮೊಬೈಲ್ ಜೊತೆ ಆಟೋವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ.
ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಆಟೋ ಕದ್ದು ಪರಾರಿಯಾದ ಖದೀಮ...ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ title=

ಪೀಣ್ಯ ದಾಸರಹಳ್ಳಿ: ವಿಜಯ್ ಕುಮಾರ್ ಆಟೋ ಕಳೆದುಕೊಂಡ ವ್ಯಕ್ತಿ ನೆನ್ನೆ ಆ. 17ರ ಮಟ ಮಟ ಮಧ್ಯಾಹ್ನದ ವೇಳೆ ಹಳೆಯ ಅಟೋದಲ್ಲಿ ಬಂದಿದ್ದ ಅಪರಿಚಿತ ಚಾಲಕನೊಬ್ಬ ಪರಿಚಯ ಮಾಡಿಕೊಂಡು ಆತ್ಮೀಯವಾಗಿ ಈ ಸ್ಟ್ಯಾಂಡ್​ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೆ ಅಂದುಕೊಂಡು ಪರಿಚಯಸ್ಥನ ತರ ನಟನೆ ಮಾಡಿ, ಆಟೋವನ್ನೇ ಕದ್ದುಕೊಂಡು ಹೋದ ಘಟನೆ ಪೀಣ್ಯ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಣ್ಣೆ ಕುಡಿಸಿ, ಆಟೋ ಕದ್ದ ಖದೀಮ
ಆತ್ಮೀಯವಾಗಿ ಮಾತನಾಡುತ್ತ, ಬಾ ಗುರು ಎಣ್ಣೆ ಹೊಡೆಯೋಣವೆಂದು ಪಕ್ಕದಲ್ಲೇ ಇದ್ದ ಮೂನ್ ಲೈಟ್ ಬಾರ್​ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ದುಡ್ಡಲ್ಲೇ ಕ್ವಾಟರ್​ ಎಣ್ಣೆಯನ್ನು ಕುಡಿಸಿದ್ದಾನೆ. 

ಇದನ್ನೂ ಓದಿ-ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ ಅಪ್ಡೇಟ್

ಬಳಿಕ ಎಣ್ಣೆ ಕುಡಿದು ಹೊಸ ಅಟೋದಲ್ಲಿ ಮಲಗಬಾರದೆಂದು ವಿಜಯ್ ಕುಮಾರ್ ಅವರು ಅರೋಪಿ ತಂದಿದ್ದ ಹಳೆಯ ಅಟೋದಲ್ಲಿ ಮಲಗಿದ್ದಾರೆ. ಅಷ್ಟೇ, ಮಲಗಿ ಎದ್ದೇಳುವಷ್ಟರಲ್ಲಿ ಆತನ ಹಳೆಯ ಅಟೋ ಬಿಟ್ಟು ಹೊಸ ಆಟೋದಲ್ಲಿ ಪರಾರಿಯಾಗಿದ್ದಾನೆ.

ಆಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ
ಇನ್ನು ಅಟೋದಲ್ಲಿದ್ದ 25ಸಾವಿರ ಬೆಲೆಬಾಳುವ ಮೊಬೈಲ್ ಜೊತೆ ಆಟೋವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಇತ್ತ ಹಳೆಯ ಅಟೋ ಸುದ್ದಗುಂಟೆಪಾಳ್ಯದಲ್ಲಿ ಕದ್ದಿರುವುದು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಇತ್ತ ಅಪರಿಚಿತನ ಬಳಿ ಕ್ವಾಟರ್ ಎಣ್ಣೆಯ ಆಸೆಗೆ ಬಿದ್ದು ಆಟೋ ಕಳಕೊಂಡಿದ್ದಾನೆ. ಇನ್ನು ಅಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ-ಫ್ರೀ ಬಸ್ ಎಫೆಕ್ಟ್ ಬಸ್ಗಳೆಲ್ಲ ಫುಲ್ ರಶ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News