ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ನಡೆಯನ್ನು ಬದಲಾಯಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಗ್ರಹಗಳ ಈ ಸ್ಥಿತಿಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸುತ್ತದೆ. ಪ್ರಸ್ತುತ ದೇವಗುರು ಬೃಹಸ್ಪತಿ ಡಿಸೆಂಬರ್ 31, 2023 ರಂದು ತನ್ನ ನೆರನಡೆಯನ್ನು ಅನುಸರಿಸಲಿದ್ದು, ಇದು 3 ರಾಶಿಗಳ ಜನರಿಗೆ ವರ್ಷ 2024ರ ಆರಂಭದಲ್ಲಿಯೇ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗವನ್ನು ರಚಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
ಕರ್ಕ ರಾಶಿ: ಗುರು ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ನೇರ ನಡೆ ಅನುಸರಿಸುವ ಕಾರಣ ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದ ಸಂಪನ್ಮೂಲಗಳಲ್ಲಿ ವೃದ್ಧಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರ ಹಾಗೂ ವೃತ್ತಿ ಜೀವನದಲ್ಲಿ ನಿಮಗೆ ಉತ್ತಮ ಧನಲಾಭ ಉಂಟಾಗಲಿದೆ. ವ್ಯಾಪಾರದ ವಿಸ್ತರಣೆ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ಹೂಡಿಕೆ ಮಾಡಲು ಸಮಯ ಸಾಕಷ್ಟು ಶುಭವಾಗಿದೆ. ನೌಕರವರ್ಗದ ಜನರಿಗೆ ನೌಕರಿಯಲ್ಲಿ ಪ್ರಮೋಷನ್ ಭಾಗ್ಯ, ಕೇಳಿದ ಕಡೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ.
ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಗುರು ತನ್ನ ನೆರನಡೆಯ ಮೂಲಕ ಸಂಚರಿಸಲಿದ್ದಾನೆ ಇದರಿಂದ ನಿಮ್ಮ ಭಾಗ್ಯೋದಯವಾಗುವ ಎಲ್ಲಾ ಸಾಧ್ಯತೆಗಳಿವೆ. ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಮನೆ-ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರುವ ಸಾಧ್ಯತೆ ಇದೆ. ಗುರು ನಿಮ್ಮ ಜಾತಕದ ಪಂಚಮ ಹಾಗೂ ಅಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ.
ಇದನ್ನೂ ಓದಿ-Diwali 2023 ಬಳಿಕ ಶನಿ-ಗುರುವಿನ ನೆರನಡೆ ಆರಂಭ, ಈ ರಾಶಿಗಳ ಜನರ ಮನೆಯಲ್ಲಿ ಕುಣಿ-ನಲಿಯಲಿದ್ದಾಳೆ ತಾಯಿ ಲಕುಮಿ!
ಧನು ರಾಶಿ: ಗಜಲಕ್ಷ್ಮಿ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಗಿತಾಗಲಿದೆ. ಗುರು ನಿಮ್ಮ ಜಾತಕಕ್ಕೆ ಅಧಿಪತಿಯಾದ ಕಾರಣ, ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಸಿಗುವ ಸಾಧ್ಯತೆ ಇದೆ. ಆತ ನಿಮ್ಮ ಗೋಚರ ಜಾತಕದ ಚತುರ್ಥ ಭಾವಕ್ಕೆ ಅಧಿಪತಿಯಾದ ಕಾರಣ ಮಕ್ಕಳ ನೌಕರಿ ಅಥವಾ ವಿವಾಹ ನೆರವೇರುವ ಸಾಧ್ಯತೆ ಇದೆ. ವಾಹನ, ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗಲಿದೆ. ಭೌತಿಕ ಸುಖಗಳು ಹೆಚ್ಚಾಗಲಿವೆ, ಪಿತ್ರಾರ್ಜಿತ ಸಂಪತ್ತಿನ ಲಾಭ ಸಿಗಲಿದೆ. ವ್ಯಾಪಾರದಲ್ಲಿ ವೃದ್ಧಿ, ನೌಕರಿಯಲ್ಲಿ ಒಳ್ಳೆಯ ಅವಕಾಶಗಳು ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ-ವರ್ಷ 2024ರಲ್ಲಿ ಶನಿ ಉದಯ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.