B.C. Patil in Garadi Film Interview: ದೀಪಾವಳಿ ಹಬ್ಬಕ್ಕೆ ʼಗರಡಿʼ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಬಿ ಸಿ ಪಾಟೀಲ್ ಈ ಸಿನಿಮಾ ನಿರ್ಮಾಣ ಮಾಡಿದ್ರೆ, ಅತ್ತ ಯೋಗರಾಜ್ ಭಟ್ ಮಾಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಯಶಸ್ ಸೂರ್ಯ ಹೀರೊ ಆಗಿ ಮತ್ತೆ ಎಂಟ್ರಿ ಕೊಟ್ಟಿದ್ದು, ಬೆಳಕಿನ ಹಬ್ಬಕ್ಕೆ ಥಿಯೇಟರ್‌ನಲ್ಲಿ ಜೋರಾಗಿಯೇ ಸದ್ದು ಮಾಡಬಹುದು ಅನ್ನೋ ನಿರೀಕ್ಷೆಯಿದೆ. ಬಹಳ ದಿನಗಳ ಬಳಿಕ ಯೋಗರಾಜ್ ಭಟ್ ಮಾಸ್ ಸಿನಿಮಾಗೆ ಕೈ ಹಾಕಿದ್ದರಿಂದ ಚಿತ್ರತಂಡ ಕೂಡ ಜೋರಾಗಿಯೇ ಪ್ರಚಾರಕ್ಕೆ ಇಳಿದು ಎಲ್ಲಾ ಕಡೆ ಸಂದರ್ಶನಗಳನ್ನು ನೀಡುತ್ತಿದೆ.
ʼಗರಡಿʼ ಸಿನಿಮಾದ ಪ್ರಚಾರದಲ್ಲಿ ಬಿಸಿ ಪಾಟೀಲ್ ಸಹ ಭಾಗಿಯಾಗಿದ್ದು, ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ ನಾದಬ್ರಹ್ಮ ಹಂಸಲೇಖ ಕೌರವ ಸಮಯದಲ್ಲಿ ಹೇಳಿದ ಒಂದು ಮಾತನ್ನು ನೆನಪಿಸಿಕೊಂಡು, ನಾನು ಮೀಸೆ ಬಿಟ್ಟದಾಗ, ಕೌರವ ಸಿನಿಮಾ ಮಾಡುವಾಗ ಹಂಸಲೇಖ ಹೇಳುತ್ತಿದ್ದರು. ಈ ಇಂಡಸ್ಟ್ರಿಯಲ್ಲಿ ಯಾರೂ ನಮ್ಮ ಮೀಸೆಯನ್ನು ತಿರುಗಿಸಲ್ಲ. ನಮ್ಮ ಮೀಸೆಯನ್ನು ನಾವೇ ತಿರುಗಿಸಿಕೊಳ್ಳಬೇಕು ಅಂತ ಹೇಳ್ತಿದ್ರು. ಅವತ್ತೇ ಮೀಸೆ ತಿರುಗಿಸಿ ಆಗಿದೆ." ಎಂದು ಹೇಳಿದ್ದಾರೆ."
ಇದನ್ನುಓದಿ: “ಗರಡಿ“ ಮನೆಗೆ ಹೋಗಲು ನೀವು ರೆಡಿನಾ. .. ನಾಳೆ ಕರ್ನಾಟಕದಲ್ಲಿ ”ಗರಡಿ“ಯದ್ದೇ ಹವಾ
ಬಿ ಸಿ ಪಾಟೀಲ್ ಅದೆಷ್ಟೇ ಸಿನಿಮಾ ಮಾಡಿದರೂ, ಅವರಿಗೆ ಅಂಟಿಕೊಂಡಿರೋ 'ಕೌರವ' ಟೈಟಲ್ ಮಾತ್ರ ಹೋಗೋದಿಲ್ಲ. ಈ ಚಿತ್ರದಲ್ಲಿ ಬಿ ಸಿ ಪಾಟೀಲ್ ಪೈಲ್ವಾನ್‌ನ ಗುರುವಾಗಿ ಕಾಣಿಸಿಕೊಂಡಿದ್ದು, ಅದೇ ಗತ್ತು, ಗಾಂಭೀರ್ಯದಿಂದ ಮತ್ತೆ ತೆರೆಮೇಲೆ ಬಣ್ಣ ಹಚ್ಚಿದ್ದಾರೆ. "ನಾನು ಪೈಲ್ವಾನ್ ಅಲ್ಲ.. ಪೈಲ್ವಾನ್ ಆಗಿಬಿಟ್ಟಿದ್ದೀನಿ. ನಾನು ಕೌರವದಲ್ಲಿಯೇ ಪೈಲ್ವಾನ್. ಈಗ ಪೈಲ್ವಾನ್‌ಗೆ ಗುರು ನಾನು." ಎಂದಿದ್ದಾರೆ. ಹಾಗೇ 'ಗರಡಿ' ಸಿನಿಮಾದಲ್ಲಿ ನಟಿಸೋ ಆಲೋಚನೆ ಬಿ ಸಿ ಪಾಟೀಲ್‌ಗೆ ಇರಲಿಲ್ಲ. ಈ ಪಾತ್ರಕ್ಕೆ ಅನುಪಮ್ ಖೇರ್ ಅಥವಾ ಪ್ರಕಾಶ್ ರೈ ಹಾಕೋಬೇಕು ಅಂತಿದ್ರಂತೆ. ಆದರೆ, ಯೋಗರಾಜ್ ಭಟ್‌ರಿಂದ ಲೆಕ್ಕಾಚಾರವೆಲ್ಲಾ ತಲೆ ಕೆಳಗಾಗಿತ್ತು.
ಬಿ.ಸಿ.ಪಾಟೀಲ್, "ಈ ಸಿನಿಮಾದಲ್ಲಿ ನಾನು ಸಿನಿಮಾ ಮಾಡುವ ಆಲೋಚನೆ ಕೂಡ ಇರಲಿಲ್ಲ. ನಾನು ಅನುಪಮ್ ಖೇರ್ ಅಥವಾ ಪ್ರಕಾಶ್ ರೈ ಹಾಕಬೇಕು ಅಂತ ಇದ್ದೆವು. ಅವರ ಡೇಟ್ ಅದು ಇದೂ ಅಂತ ಇದ್ದರು. ಆ ಮೇಲೆ ಭಟ್ಟರು ಹೇಳಿದ್ರು ನೀವೇ ಮಾಡಿಬಿಡಿ ಅಂದಿದ್ರು. ನನಗೆ ಈಗ ಎಲ್ಲಿ ಆಗುತ್ತೆ ಅಷ್ಟೊಂದು ಟೈಮ್ ಇಲ್ಲ ಅಂದಿದ್ದೆ. ಇಲ್ಲ ನಾಲ್ಕೈದು ದಿನ ಆಗೀಗ ಬಂದು ಹೋಗಿಬಿಡಿ ಆಗಿಬಿಡುತ್ತೆ ಎಂದಿದ್ದರು. ಭಟ್ಟರು ಹೇಳಿದ್ರು ಅಂತ ಬಂದಿ ಸಿಕ್ಕಾಕಿಕೊಂಡೆ." ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ