“ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ

Anasuya Bharadwaj: ಅನಸೂಯಾ ಭಾರದ್ವಾಜ್ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದವರು. ಆ ನಂತರ ನಟಿಯಾದವರು. ಸದ್ಯ ಟಾಲಿವುಡ್’ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ, ಕೇವಲ ಧನಾತ್ಮಕ ಪಾತ್ರಗಳಲ್ಲಿ ಮಾತ್ರವಲ್ಲದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

Written by - Bhavishya Shetty | Last Updated : Dec 15, 2023, 06:20 PM IST
    • ಪುಷ್ಪಾ ನಟಿ ಅನಸೂಯಾ ಭಾರದ್ವಾಜ್
    • ಆಂಕರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದವರು ಅನಸೂಯಾ
    • ತಮ್ಮ ಕೌಟುಂಬಿಕ ಜೀವನದ ಬಗ್ಗೆ ಅನಸೂಯಾ ಹೇಳಿಕೆ
“ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ title=
Anasuya Bharadwaj

Anasuya Bharadwaj: ಪುಷ್ಪಾ ನಟಿ ಅನಸೂಯಾ ಭಾರದ್ವಾಜ್ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅನಸೂಯಾ ಮನಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುತ್ತಾರೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.

ಅನಸೂಯಾ ಭಾರದ್ವಾಜ್ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದವರು. ಆ ನಂತರ ನಟಿಯಾದವರು. ಸದ್ಯ ಟಾಲಿವುಡ್’ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ, ಕೇವಲ ಧನಾತ್ಮಕ ಪಾತ್ರಗಳಲ್ಲಿ ಮಾತ್ರವಲ್ಲದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Video: ಸೌತ್ ಆಫ್ರಿಕಾ ಬ್ಯಾಟರ್ ಔಟಾಗಿದ್ದರೂ ನಾಟ್ ಔಟ್ ಎಂದ ಅಂಪೈರ್: ಭಾರತಕ್ಕೆ ವಂಚನೆ!

ಅಂದಹಾಗೆ ಅನಸೂಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇನ್ನು ಇವರ ಕೆಲವೊಂದು ಹೇಳಿಕೆಗಳಿರಬಹುದು, ಅಥವಾ ಪೋಸ್ಟ್’ಗಳಿರಬಹುದು. ಬಹಳಷ್ಟು ವಿವಾದಗಳನ್ನು ಹುಟ್ಟು ಹಾಕಿದೆ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌’ಗೆ ನೀಡಿದ ಸಂದರ್ಶನದಲ್ಲಿ ಅನಸೂಯಾ ತಮ್ಮ ಕೌಟುಂಬಿಕ ಜೀವನದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ನನ್ನ ಪತಿಯ ಹುಟ್ಟೂರು ಬಿಹಾರ. ಹೀಗಾಗಿ ನನ್ನ ಅತ್ತೆಯ ಮನೆಯಲ್ಲಿ ಇನ್ನೂ ಬಿಹಾರ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅತ್ತೆ ಮನೆಗೆ ಹೋದರೆ ನಾನೂ ಕೂಡ ಆ ನಿಯಮಗಳನ್ನು ಪಾಲಿಸುತ್ತೇನೆ ಎಂದಿದ್ದಾರೆ.

ಬಿಹಾರದಲ್ಲಿ ಪುರುಷ ಪ್ರಾಬಲ್ಯ ಹೆಚ್ಚು ಕಾಣುತ್ತಿದೆ. ನನಗೆ ಹೆಣ್ಣು ಮಗು ಬೇಕು. ಆದರೆ ನನ್ನ ಪತಿಗೆ ಇಷ್ಟವಿಲ್ಲದ ಕಾರಣ ಸಹಕರಿಸಲು ಸಿದ್ಧರಿಲ್ಲ. ಹೀಗಾಗಿ ತನ್ನ ಆಸೆ ಈಡೇರಲಿಲ್ಲ ಎಂದು ಅನಸೂಯಾ ಹೇಳಿದ್ದಾರೆ. ಅತ್ತೆಯ ಇಬ್ಬರು ಗಂಡು ಮಕ್ಕಳು ಕೂಡ ಮನೆಗೆ ಹೆಣ್ಣು ಬರುವುದು ಇಷ್ಟವಿಲ್ಲವೆನ್ನುತ್ತಾರೆ ಎಂದು ಸಂದರ್ಶನವೊಂದರಲ್ಲಿ ಅನಸೂಯಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕಾರುಗಳ ನಡುವೆ ಭೀಕರ ಅಪಘಾತ: ತಲೆಗೆ ಗಂಭೀರ ಪೆಟ್ಟುಬಿದ್ದು MLC ನಿಧನ

ಅನಸೂಯಾ ಸದ್ಯ ತೆಲುಗಿನಲ್ಲಿ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪಾ-2 ಜೊತೆಗೆ ಇನ್ನೂ ಕೆಲವು ಸ್ಟಾರ್ ಹೀರೋ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರಣ ಅನಸೂಯಾ ಕಿರುತೆರೆಯಿಂದ ದೂರ ಉಳಿದಿದ್ದರು. ಕಳೆದ ವರ್ಷ ಜಬರ್ದಸ್ತ್ ಕಾರ್ಯಕ್ರಮಕ್ಕೆ ವಿದಾಯ ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News