ಭಾರತದಲ್ಲಿನ ಚಲನಶೀಲ ಸ್ಟಾರ್ಟ್ ಅಪ್ ವ್ಯವಸ್ಥೆಯು ದೇಶವನ್ನು ಇ-ಗೇಮಿಂಗ್ ಉದ್ಯಮದಲ್ಲಿ ಮುಂಚೂಣೆಗೆ ತಲುಪಲು ಚಾಲನೆ ನೀಡಿದೆ. ಈ ಕ್ಷಿಪ್ರಗತಿಯಲ್ಲಿ ವಿಸ್ತರಿಸುತ್ತಿರುವ ಕ್ಷೇತ್ರದ ಆಡಳಿತ ಕೈಗೊಳ್ಳಲು ಪ್ರಮುಖ ನಿಯಂತ್ರಣಗಳನ್ನು ಸ್ಥಾಪಿಸುವ ಅಗತ್ಯ ಈಗ ಮೂಡಿಬಂದಿದೆ. ಈ ನಿಯಂತ್ರಣಗಳು ದ್ವಂದ್ವ ಉದ್ದೇಶಕ್ಕೆ ಸಹಕಾರಿಯಾಗಿರುತ್ತವೆ. ಇದರಿಂದ ಆಟಗಾರರು 'ಕೌಶಲ್ಯದ ಆಟಗಳು' ಮತ್ತು 'ಅದೃಷ್ಟದ ಆಟಗಳ' ನಡುವೆ ವ್ಯತ್ಯಾಸ ಕಂಡುಕೊಳ್ಳಲು ನೆರವಾಗುವುದರ ಜೊತೆಗೆ ಇದು ಸರ್ಕಾರದ ಆದಾಯಕ್ಕೂ ಕೊಡುಗೆ ನೀಡುತ್ತದೆ.ಆಟದ ಫಲಿತಾಂಶವು ಇವುಗಳಲ್ಲಿನ ವ್ಯತ್ಯಾಸದ ಮೂಲವಾಗಿರುತ್ತದೆ- "ಕೌಶಲ್ಯದ ಆಟಗಳು" ಆಟಗಾರನ ಅದೃಷ್ಟದ ಬದಲಿಗೆ ಅವರ ಜ್ಞಾನ ಮತ್ತು ಪರಿಣತಿಯನ್ನು ಆಧರಿಸಿರುತ್ತವೆ. ಹಲವಾರು ನ್ಯಾಯಾಲಯದ ನಿರ್ಣಯಗಳಲ್ಲಿ ಈ ಅಂಶಕ್ಕೆ ಒತ್ತು ನೀಡಲಾಗಿದೆ.
ಇದನ್ನೂ ಓದಿ: ಸದನದಲ್ಲಿ ವಿರೋಧ ಪಕ್ಷದ ನಾಯಕನ ಕೊರತೆ ಕಾಣುತ್ತಿತ್ತು : ಸಲೀಂ ಅಹಮದ್
(ಉಲ್ಲೇಖ: ಮನೋರಂಜಿಥನ್ ಮನಮೈಲ್ ಮಂಡ್ರಮ್ ಮತ್ತು ತಮಿಳುನಾಡು ಸರ್ಕಾರಗಳ ನಡುವೆ(2005): ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿನ ಇಂಡಿಯನ್ ಪೋಕರ್ ಅಸೋಸಿಯೇಷನ್ (ಐಪಿಎ) ಮತ್ತು ಕರ್ನಾಟಕ (2013)ಸರ್ಕಾರದ ನಡುವಿನ ಪ್ರಕರಣದಲ್ಲಿ ಪೋಕರ್ ಕೌಶಲ್ಯದ ಆಟವಾಗಿದೆ ಎಂದು ಗಮನಿಸಲಾಗಿದೆ. ಪಂಜಾಬ್ ಮತ್ತು ಹರಿಯಾನ ಉಚ್ಚ ನ್ಯಾಯಾಲಯಗಳಲ್ಲಿನ ವರುಣ್ ಗುಂಬರ್ ಮತ್ತು ಚಂಡಿಗಢ(2017) ಕೇಂದ್ರಾಡಳಿತ ಪ್ರದೇಶಗಳ ನಡುವಿನ ಪ್ರಕರಣದಲ್ಲಿ ಕುದುರೆ, ದೋಣಿ ಮತ್ತು ಓಟ, ಫುಟ್ಬಾಲ್, ಬೇಸ್‌ಬಾಲ್, ಚೆಸ್, ಗಾಲ್ಫ್ ಮುಂತಾದವುಗಳು ಕೌಶಲ್ಯದ ಆಟಗಳು ಎಂದು ತೀರ್ಪು ನೀಡಲಾಗಿದೆ. ಇದು ಗಮನಾರ್ಹ ತೀರ್ಪು ಆಗಿದ್ದು, ಇವು ಅದೃಷ್ಟದ ಆಟಗಳಲ್ಲ ಎನ್ನಲಾಗಿದೆ; ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಗುರ್‌ದೀಪ್ ಸಿಂಗ್ ಸಾಚಾರ್ ಮತ್ತು ಭಾರತ ಸರ್ಕಾರ (2019)10 ಮತ್ತು ಇತರರ ನಡುವಿನ ಪ್ರಕರಣದಲ್ಲಿ ಡ್ರೀಮ್ 11 ಫ್ಯಾಂಟಿಸಿ ಸ್ಪೋರ್ಟ್ಸ್ನಲ್ಲಿ ಯಶಸ್ಸು ಎನ್ನುವುದು ಬಳಕೆದಾರರ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಅದರಲ್ಲಿ ಬಳಕೆದಾರರು ಹೆಚ್ಚು ಉತ್ತಮವಾದ ಜ್ಞಾನ, ನಿರ್ಣಯ, ಶಕ್ತಿ ಮತ್ತು ಏಕಾಗ್ರತೆಗಳನ್ನು ಆಧರಿಸಿ ಅವರ ಕೌಶಲ್ಯವನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಇದು ಆಧರಿಸಿರುತ್ತದೆ ಎಂದು ನ್ಯಾಯಾಲಯ ಗುರುತಿಸಿದೆ. ಇತ್ತೀಚಿನ ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ಕೌಶಲ್ಯ ಆಧಾರಿತ ಆಟಗಳ ವರ್ಗೀಕರಣವನ್ನು ಆಧರಿಸಿ ತೆರಿಗೆ ಕುರಿತಂತೆ ಆನ್‌ಲೈನ್/ಎಲೆಕ್ಟ್ರಾನಿಕ್/ಡಿಜಿಟಲ್ ರಮ್ಮಿ ಆಟ ಮತ್ತು ಇತರೆ ಆನ್‌ಲೈನ್/ಎಲೆಕ್ಟ್ರಾನಿಕ್/ಡಿಜಿಟಲ್ ಕೌಶಲ್ಯದ ಆಟಗಳ ಮೇಲೆ 'ಬಾಜಿ' ಕಟ್ಟುವುದು ಮತ್ತು 'ಜೂಜಾಟ' ಎಂದು ಕೇಂದ್ರ ಸರಕು ಮತ್ತು ಸೇವೆಗಳ(ಜಿಎಸ್‌ಟಿ) ಕಾನೂನು ಅಡಿಯಲ್ಲಿ ತೆರಿಗೆ ವಿಧಿಸಲಾಗದು ಎಂದು ಹೇಳಿದೆ.
ನಿಯಂತ್ರಣಾತ್ಮಕ ಚೌಕಟ್ಟು ಸ್ಥಾಪಿಸುವ ಅಗತ್ಯ
ಗಮನಾರ್ಹವಾಗಿ ಫ್ಯಾಂಟಿಸಿ ಸ್ಪೋರ್ಟ್ಸ್ ಕ್ಷೇತ್ರ ಸೇರಿದಂತೆ ಭಾರತದ ಇ-ಗೇಮಿಂಗ್ ಉದ್ಯಮ ಕ್ಷಿಪ್ರಗತಿಯ ಬೆಳವಣಿಗೆ ಅನುಭವಿಸುತ್ತಿದೆ. ಪ್ರಾಥಮಿಕವಾಗಿ ಅದೃಷ್ಟವನ್ನು ಆಧರಿಸಿದ ಆಟಗಳಿಂದ ಕೌಶಲ್ಯಾಧಾರಿತ ಆಟಗಳನ್ನು ಪ್ರತ್ಯೇಕಿಸುವುದಕ್ಕೆ ಸ್ಪಷ್ಟವಾದ ಅಗತ್ಯ ಇರುತ್ತದೆ. ಕಾನೂನಿನ ನಿರ್ಣಯಗಳು, ಸ್ವಲ್ಪ ಮಾರ್ಗದರ್ಶನ ನೀಡಿದರೂ ಕೂಡ ಸಮಗ್ರ ನಿಯಂತ್ರಣಾತ್ಮಕ ಚೌಕಟ್ಟಿನ ಅಭಿವೃದ್ಧಿ ಅವಶ್ಯಕವಾಗಿರುತ್ತದೆ. ಅದರಲ್ಲಿಯೂ ಭವಿಷ್ಯಸೂಚನೆ ಒಳಗೊಂಡ ಕೌಶಲ್ಯಾಧಾರಿತ ಆಟಗಳ ವಿಷಯದಲ್ಲಿ ಇದು ಅಗತ್ಯವಾಗಿರುತ್ತದೆ.
ಆಡಳಿತ ಕುರಿತ ಮಾರ್ಗದರ್ಶನ
ಜೂಜಾಟ ನಿಯಂತ್ರಣ ಕುರಿತಂತೆ ಭಾರತದ ಮಾರ್ಗವು, ಕುಟುಂಬಗಳು ಎದುರಿಸಬೇಕಾಗಿ ಬರುವ ಆರ್ಥಿಕ ಸಂಕಷ್ಟಗಳು ಮತ್ತು ವ್ಯಕ್ತಿಗಳಿಗೆ ಗೀಳಾಗಿ ಪರಿಣಮಿಸಬಹುದಾದ ಅಪಾಯಗಳನ್ನು ಕಡಿಮೆ ಮಾಡುವುದನ್ನು ಪ್ರಾಥಮಿಕವಾಗಿ ಆಧರಿಸಿದೆ. ಜೂಜಾಟದ ಚಟುವಟಿಕೆಗಳಿಗೆ ಪರವಾನಗಿ ನೀಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 1857ರ ಸಾರ್ವಜನಿಕ ಜೂಜಾಟ ಕಾನೂನು ಅಧಿಕಾರ ನೀಡಿದೆ. ಇದು ಸಾರ್ವಜನಿಕರಿಗೆ ಈ ಆಟಗಳ ಗೀಳು ಉಂಟಾಗುವುದರಿಂದ ಮತ್ತು ಆರ್ಥಿಕ ನಷ್ಟ ಉಂಟಾಗುವುದರಿಂದ ಸಂರಕ್ಷಣೆ ನೀಡುವ ಅಗತ್ಯ ಮತ್ತು ಸಂಭಾವ್ಯ ಹಣಕಾಸು ಲಾಭಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವ ಉದ್ದೇಶ ಹೊಂದಿರುತ್ತದೆ. ಆದರೆ ಪರಿಣಾಮಕಾರಿ ನಿಯಂತ್ರಣದ ವಿಷಯದಲ್ಲಿ ಇ-ಗೇಮಿಂಗ್ ವೇದಿಕೆಗಳು ಹೊರಹೊಮ್ಮುತ್ತಿರುವುದು ಹೊಸ ಸವಾಲುಗಳನ್ನು ತರುತ್ತಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ!
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ 2023ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಇತ್ತೀಚೆಗೆ ಪರಿಚಯಿಸಲಾಗಿದ್ದು, ಇದು ಜೂಜಾಟವನ್ನು ಒಳಗೊಂಡ ಆಟಗಳನ್ನು ನಿರ್ಬಂಧಿಸುವ ಉದ್ದೇಶ ಹೊಂದಿದೆ. ಆರ್ಥಿಕ ಅಂಶ ಹೊಂದಿರುವ ಕೌಶಲ್ಯಾಧಾರಿತ ಆಟಗಳಿಗೆ ನ್ಯಾಯಾಲಯ ಅನುಮತಿ ನೀಡಿರುವುದಕ್ಕೆ ಇದು ವ್ಯತಿರಿಕ್ತವಾಗಿರುವಂತೆ ಕಾಣುತ್ತಿದೆ. ಕೌಶಲ್ಯಾಧಾರಿತ ಆಟಗಳ ವಿನ್ಯಾಸದಲ್ಲಿ ಸ್ಪಷ್ಟ ವ್ಯತ್ಯಾಸ ಇಲ್ಲದಿರುವುದು ನಿಯಂತ್ರಣಾತ್ಮಕ ವಿಷಯವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಸ್ಪಷ್ಟವಾಗಿ ನಿರೂಪಿಸಲಾದ ಕಾನೂನಾತ್ಮಕ ಗಡಿಗಳನ್ನು ಸ್ಥಾಪಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಕ್ರೀಡಾ ಫಲಿತಾಂಶಗಳ ಭವಿಷ್ಯ ಸೂಚಿಸುವುದನ್ನು ಆಧರಿಸಿ ಬಹುಮಾನಗಳನ್ನು ಸಾದರಪಡಿಸುವ ಆಟಗಳು ಮತ್ತು ಫ್ಯಾಂಟಿಸಿ ಸ್ಪೋರ್ಟ್ಸ್ ಅನ್ನು ಕುರಿತಂತೆ ಇದು ಮುಖ್ಯವಾಗಿರುತ್ತದೆ.
ಆನ್ ಲೈನ್ ಮತ್ತು ಆಫ್ ಲೈನ್ ವಾಸ್ತವತೆಗಳ ಸಮನ್ವಯ ಕೈಗೊಳ್ಳುವುದು
ಆನ್‌ಲೈನ್ ಮತ್ತು ಆಫ್‌ಲೈನ್ ಆಟಗಳ ನಡುವೆ ಒಂದೇ ರೀತಿಯಲ್ಲಿ ಸ್ಥಿರ ಸಾಮರಸ್ಯ ಕಾಪಾಡುವುದು ಮುಖ್ಯವಾಗಿದ್ದು, ಇಲ್ಲಿ ಸುಪ್ರಿಂಕೋರ್ಟ್ ಸ್ಥಾಪಿಸಿರುವ ವರ್ಗೀಕರಣಗಳನ್ನು ಸಮಾನ ರೀತಿಯಲ್ಲಿ ಅನ್ವಯವಾಗುವ ಖಾತ್ರಿ ಮಾಡಿಕೊಳ್ಳಬೇಕಿರುತ್ತದೆ. ಕೇಂದ್ರ ಮತ್ತು ಪ್ರತ್ಯೇಕ ರಾಜ್ಯ ಸರ್ಕಾರಗಳ ನಡುವಿನ ನ್ಯಾಯಾಡಳಿತ ಕ್ಷೇತ್ರದ ಗಡಿಗಳನ್ನು ನಿರೂಪಿಸುವುದಕ್ಕೆ ಮಾರ್ಗದರ್ಶಿ ನೀತಿಯಾಗಿ ಕೌಶಲ್ಯ ಮತ್ತು ಅದೃಷ್ಟಗಳ ನಡುವಿನ ವ್ಯತ್ಯಾಸವು ಕಾರ್ಯನಿರ್ವಹಿಸಬೇಕು.
ಈ ಚೌಕಟ್ಟು ಕುರಿತ ನಿರೀಕ್ಷೆಗಳು
ಇ-ಗೇಮಿಂಗ್ ಅನ್ನು ಅಧಿಕೃತವಾಗಿ 'ಕೌಶಲ್ಯದ ಆಟಗಳು' ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಅಲ್ಲದೆ, ಇವುಗಳಿಗೆ ಭಾರತೀಯ ಸಂವಿಧಾನದ 19(1)(ಜಿ) ಕಲಮಿನ ಅಡಿಯಲ್ಲಿ ಸಂರಕ್ಷಣೆ ನೀಡಲಾಗಿದೆ. ಈ ರೀತಿ ಹೆಸರಿಸಿರುವುದರಿಂದ ಅವುಗಳನ್ನು ಜೂಚಾಟ ಎಂದು ವರ್ಗೀಕರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಏಕೆಂದರೆ ಈ ಆಟಗಳು ಪ್ರಾಥಮಿಕವಾಗಿ ಆಡುವವರ ಜ್ಞಾನ, ಪರಿಣತಿ ಮತ್ತು ಸಾಮರ್ಥ್ಯಗಳನ್ನು ಆಧರಿಸಿರುತ್ತವೆ. ಇವು ಕೌಶಲ್ಯ ಕೇಂದ್ರೀಕೃತವಾಗಿರುತ್ತವೆಯೇ ಹೊರತಾಗಿ ಅದೃಷ್ಟವನ್ನು ಆಧರಿಸಿರುವುದಿಲ್ಲ. ಇರ ಪರಿಣಾಮವಾಗಿ ಇ-ಗೇಮಿಂಗ್‌ನ ನಿಯಂತ್ರಣವು ಮಾಹಿತಿ ತಂತ್ರಜ್ಞಾನ ಕಾನೂನಿಗೆ ತಕ್ಕಂತೆ ಇರಬೇಕು. ಅಲ್ಲದೆ, ಭಾರತೀಯ ದಂಡ ಸಂಹಿತೆ(ಐಪಿಸಿ)ಯಲ್ಲಿನ ಜೂಜಾಟ ಸಂಬಂಧಿತ ನಿಬಂಧನೆಗಳಿಂದ ಇದು ಪ್ರತ್ಯೇಕಿತವಾಗಿರಬೇಕಿದೆ. ಸ್ಪಷ್ಟ ಮತ್ತು ಪಾರದರ್ಶಕ ಮಾರ್ಗದರ್ಶಿ ಸೂತ್ರಗಳನ್ನು ಸಾದರಪಡಿಸುವ ಸಮಗ್ರವಾದ ಕೇಂದ್ರಮಟ್ಟದ ಶಾಸನದ ಅಗತ್ಯವನ್ನು ಒತ್ತಿ ಹೇಳುತ್ತದೆ. ಈ ಮಾನದಂಡಗಳನ್ನು ಪೂರೈಸದ ಮತ್ತು ಜೂಜಿನ ಅಂಶಗಳನ್ನು ಒಳಗೊಂಡಿರುವ ಆಟಗಳನ್ನು ಐಪಿಸಿ ನಿಬಂಧನೆಗಳಿಗೆ ಒಳಪಡಿಸಬೇಕು.
"ಕೌಶಲ್ಯಗಳ ಆಟಗಳನ್ನು ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ವರ್ಗೀಕರಿಸುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಯತ್ನಗಳು ಶ್ಲಾಘನೀಯವಾದರೂ, ಕೌಶಲ್ಯಾಧರಿತ ಮತ್ತು ಅದೃಷ್ಟಾಧರಿತ ಆಟಗಳನ್ನು ಪ್ರತ್ಯೇಕಿಸುವ ಸೂಕ್ಷ್ಮ ವ್ಯತ್ಯಾಸ ಒಳಗೊಂಡ ನಿಯಂತ್ರಣಾತ್ಮಕ ಚೌಕಟ್ಟು ಅವಶ್ಯಕವಾಗಿರುತ್ತದೆ.
ಆಟಗಾರರ ಕೌಶಲ್ಯ ಮತ್ತು ಜ್ಞಾನಗಳನ್ನು ಪ್ರದರ್ಶಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ಸಾದರಪಡಿಸಲಾದ ಮತ್ತು ಸಾಂಪ್ರದಾಯಕ ಆಟಗಳ ವಿದ್ಯುನ್ಮಾನ ರೂಪಗಳಿಗೆ ವೇದಿಕೆಯಾಗಿ ಇ-ಗೇಮಿಂಗ್ ಸೇವೆ ಸಲ್ಲಿಸುತ್ತದೆ. ಈ ಆಟಗಳ ಫಲಿತಾಂಶಗಳು ಕಾಲಕ್ರಮೇಣ ಸಂಪಾದಿಸಿರುವ ಪರಿಣತಿಯಿಂದ ಬರುತ್ತವೆಯಲ್ಲದೆ, ಇವುಗಳನ್ನು ಕೌಶಲ್ಯಾಧಾರಿತ ಆಟಗಳಾಗಿ ಪರಿವರ್ತಿಸುತ್ತವೆ. ಇದರಿಂದ ಇವು ಸಂಪೂರ್ಣವಾಗಿ ಅದೃಷ್ಟಾಧಾರಿತ ಚಟುವಟಿಕೆಗಳಾಗಿರುವುದಿಲ್ಲ. ಒಂದು ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಇ-ಗೇಮಿಂಗ್, ಸಂವಾದಯುತ ಅನುಭವಗಳ ಮೂಲಕ ಕೌಶಲ್ಯಗಳ ಮೌಲ್ವಿಕರಣ, ಸುಧಾರಣೆ ಮತ್ತು ಸ್ವಾಧೀನಗಳಿಗೆ ಅವಕಾಶ ಮಾಡಿಕೊಡುವುದಲ್ಲದೆ, ಗೇಮಿಂಗ್ ಕ್ಷೇತ್ರವನ್ನು ಪುನರ್ ರೂಪಿಸುತ್ತಿದೆ.
ಅಂತಿಮ ತೀರ್ಮಾನ
ಸಂಕ್ಷಿಪ್ತ ರೀತಿಯಲ್ಲಿ ಹೇಳಬೇಕೆಂದರೆ ತನ್ನ ನಾಗರಿಕರ ಕ್ಷೇಮ ಮತ್ತು ಆರ್ಥಿಕ ಅವಕಾಶಗಳ ನಡುವೆ ಸಮತೋಲನ ಕಂಡುಕೊಳ್ಳುವುದನ್ನು ಭಾರತದಲ್ಲಿನ ಜೂಜಾಟ ಕುರಿತಾದ ಆಡಳಿತ ಗುರಿಯಾಗಿಟ್ಟುಕೊಂಡಿದೆ. ಇ-ಗೇಮಿಂಗ್‌ನ ಜನಪ್ರಿಯತೆ ಹೆಚ್ಚುತ್ತಿರುವಂತೆ ಪರಿಣಾಮಕಾರಿ ನಿಯಂತ್ರಣಗಳ ಅಭಿವೃದ್ಧಿ ಮುಖ್ಯವಾಗಿದೆ. ಆಧುನಿಕ ಗೇಮಿಂಗ್‌ನ ವಿಕಸನಗೊಳ್ಳುತ್ತಿರುವ ಚಲನಶೀಲತೆಗೆ ಜೊತೆಗಿನ ಕಾನೂನು ವ್ಯಾಖ್ಯಾನಕ್ಕೆ ತಕ್ಕಂತಹ ಸಮಗ್ರ ನಿಯಂತ್ರಣಾತ್ಮಕ ಚೌಕಟ್ಟಿನ ಬೆಂಬಲದೊಂದಿಗೆ ಕೌಶಲ್ಯಾಧಾರಿತ ಮತ್ತು ಅದೃಷ್ಟಾಧಾರಿತ ಆಟಗಳ ನಡುವೆ ಸ್ಪಷ್ಟ ವ್ಯತ್ಯಾಸ ಸ್ಥಾಪಿಸುವುದನ್ನು ಇದು ಒಳಗೊಂಡಿರುತ್ತದೆ.
ಲೇಖಕರು : ಅರುಣಾ ಶರ್ಮಾ,
ಅಭಿವೃದ್ಧಿ ಆರ್ಥಿಕ ತಜ್ಞರು ಮತ್ತು ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.