Viral Video: ಕೊರಳಿಗೆ ಹಾರ ಹಾಕುತ್ತಿದ್ದಂತೆ ವರನಿಗೆ ಹೊಡೆದು ಓಡಿಹೋದ ವಧು!

Wedding viral video: ಮದುವೆ ದಿನವೇ ತನ್ನ ಭಾವಿ ಎಂಥವನು ಅಂತಾ ಗೊತ್ತಾದ ಕೂಡಲೇ ವಧು ಆತನ ಕಪಾಳಕ್ಕೆ ಭಾರಿಸಿದ್ದಾಳೆ. ಬಂಧು-ಬಳಗದವರ ಮುಂದೆಯೇ ನಡೆದ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Puttaraj K Alur | Last Updated : Dec 24, 2023, 12:20 PM IST
  • ಕೊರಳಿಗೆ ಹಾರ ಹಾಕುತ್ತಿದ್ದಂತೆ ವರನಿಗೆ ಕಪಾಳಮೋಕ್ಷ ಮಾಡಿದ ವಧು
  • ಬಂಧು-ಬಳಗದವರ ಸಮ್ಮುಖದಲ್ಲಿಯೇ ವರನಿಗೆ ಹೊಡೆದ ವಧು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಕೊರಳಿಗೆ ಹಾರ ಹಾಕುತ್ತಿದ್ದಂತೆ ವರನಿಗೆ ಹೊಡೆದು ಓಡಿಹೋದ ವಧು!   title=
ವರನಿಗೆ ಕಪಾಳಮೋಕ್ಷ ಮಾಡಿದ ವಧು!

ನವದೆಹಲಿ: ಮದುವೆಯ ಅನೇಕ ವಿಡಿಯೋಗಳು ಇಂಟರ್ನೆಟ್‍ನಲ್ಲಿ ಕಾಣಸಿಗುತ್ತವೆ. ಮದುವೆ ವೇಳೆ ನಡೆಯುವ ಅನೇಕ ಘಟನೆಗಳು ನೋಡಲು ತಮಾಷೆಯಾಗಿರುತ್ತವೆ. ಕೆಲವು ಫನ್ನಿಯಾಗಿದ್ದರೆ ಇನ್ನೂ ಕೆಲವು ಮದುವೆಗಳು ತುಂಬಾ ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತವೆ. ತಾಳಿ ಕಟ್ಟುವ ವೇಳೆಯೇ ಮದುವೆ ಬೇಡವೆನ್ನುವುದು, ಆರತಕ್ಷತೆಗೆ ಹಾಜರಾಗಿದ್ದ ವರ-ವಧು ಮರುದಿನ ನಾಪತ್ತೆಯಾಗುವುದು, ಊಟ ಸರಿಯಿಲ್ಲ ಅಂತಾ ಬಂಧು-ಬಳಗದವರು ಜಗಳವಾಡುವುದು ಹೀಗೆ ಅನೇಕ ಘಟನೆಗಳು ಮದುವೆ ವೇಳೆ ನಡೆಯುತ್ತವೆ.

ಸದ್ಯ ಮತ್ತೊಂದು ಮದುವೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಂಧು-ಬಳಗ, ಸ್ನೇಹಿತರ ಸಮ್ಮುಖದಲ್ಲಿ ಹಾರ ಹಾಕಲು ಬಂದ ವರನಿಗೆ ವಧು ಕಪಾಳಮೋಕ್ಷ ಮಾಡಿ ವೇದಿಕೆಯಿಂದ ಕೆಳಗೆ ಇಳಿದು ಹೋಗಿದ್ದಾಳೆ. ಈ ಘಟನೆಗೆ ಸಾಕ್ಷಿಯಾದ ಜನರು ಒಂದುಕ್ಷಣ ಹೌಹಾರಿ ಹೋಗಿದ್ದಾರೆ.

ಇದನ್ನೂ ಓದಿ: ಈ ಪ್ರಾಣಿ ಮಲಗುವಾಗಲೂ ಕಣ್ಣು ತೆರೆದಿರುತ್ತದೆ, ಇದರ ಹೆಸರು ಗೊತ್ತಾ?

ಮದುವೆಯಾಗುವ ದಿನವೇ ತನ್ನ ಭಾವಿ ಎಂಥವನು ಅಂತಾ ಗೊತ್ತಾದ ಕೂಡಲೇ ವಧು ಆತನ ಕಪಾಳಕ್ಕೆ ಭಾರಿಸಿದ್ದಾಳೆ. ಬಂಧು-ಬಳಗದವರ ಮುಂದೆಯೇ ನಡೆದ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧು ನಡೆದುಕೊಂಡ ರೀತಿಗೆ ನೆರೆದಿದ್ದ ಜನರು ಅವಾಕ್ಕಾಗಿದ್ದಾರೆ. ಮದುವೆ ಸಮಾರಂಭದಲ್ಲಿ ತನ್ನ ಭಾವಿ ಪತಿ ಮೇಲೆ ಕೋಪಗೊಂಡ ವಧು ಅತಿಥಿಗಳ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾಳೆ.

ಅಂದು ಏನಾಗಿತ್ತು..?

ಅಂದಹಾಗೆ ಈ ವಿಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ವಧುವಿನ ಕೊರಳಿಗೆ ಮಾಲೆ ಹಾಕಲು ಮುಂದಾದ ಕೂಡಲೇ ವರನ ಬಾಯಿಯಿಂದ ಮದ್ಯದ ದುರ್ವಾಸನೆ ಬರುತ್ತಿರುವುದು ವಧುವಿಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡು ವಧು ವೇದಿಕೆಯ ಮೇಲೆಯೇ ವರನಿಗೆ ಹೊಡೆಯಲು ಪ್ರಾರಂಭಿಸುತ್ತಾಳೆ. ಆತನ ಕೊರಳಿಗೆ ಹಾರ ಹಾಕದೆ ಆಕೆ ಬೈಯುತ್ತಾ ವೇದಿಕೆಯಿಂದ ಕಳಗೆ ಇಳಿದು ಹೋಗಿದ್ದಾಳೆ. ವೇದಿಕೆಯ ಮೇಲೆಯೇ ನಿಂತುಕೊಂಡಿದ್ದ ವರ ಮತ್ತು ಅತಿಥಿಗಳಿಗೆ ಈ ಘಟನೆಯಿಂದ ಆಘಾತವಾಗಿದೆ.

ಇದನ್ನೂ ಓದಿ: ಹಿಮಾಲಯನ್ ವಯಾಗ್ರ' ಫಂಗಸ್‌ ಬೇಡಿಕೆ ಕೇಳಿದ್ರೇ ಶಾಕ್‌ ಆಗೊದಂತು ಗ್ಯಾರಂಟಿ ..!

ಈ ವಿಡಿಯೋವನ್ನು @gharkekalesh ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಹುತೇಕ ಜನರು ವಧುವಿನ ಈ ನಡೆಯನ್ನು ಸರಿ ಅಂತಾ ಹೇಳಿದ್ದಾರೆ. ವರನಿಗೆ ಕಪಾಳಮೋಕ್ಷ ಮಾಡುವ ಮೂಲಕ ವಧು ಸರಿಯಾಗಿಯೇ ಪಾಠ ಕಲಿಸಿದ್ದಾಳೆ ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News