ಬೆಂಗಳೂರು : ಸಾಮಾನ್ಯವಾಗಿ, ನಮ್ಮ ವಯಸ್ಸು ಹೆಚ್ಚಾದಂತೆ ಕಪ್ಪು ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಆದರೆ ಈಗಿನ ಕಾಲದಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಕಿರಿ ವಯಸ್ಸಿನಲ್ಲಿಯ್ತೆ ಬಿಳಿ ಕೂದಲು ಕಾಣಿಸಿಕೊಂಡರೆ ಅದು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಮುಜುಗರವನ್ನು ಉಂಟು ಮಾಡುತ್ತದೆ. ಆದರೆ, ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಈ ಮನೆ ಮದ್ದುಗಳುನಿಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ.
ಬಿಳಿ ಕೂದಲನ್ನು ಕಪ್ಪಾಗಿಸುವ ವಸ್ತುಗಳು :
1. ಬ್ಲಾಕ್ ಟೀ :
ಬ್ಲಾಕ್ ಟೀ ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರವಾಗಿದೆ. ಇದು ಕೂದಲಿಗೆ ಟೋನರಿನಂತೆ ಕೆಲಸ ಮಾಡುತ್ತದೆ. ಚಹಾ ಪುಡಿಯನ್ನು ನೀರಿನಲ್ಲಿ ಬಿಸಿ ಮಾಡಿ. ಬಣ್ಣವು ಗಾಢವಾದ ಕಪ್ಪು ಬಣ್ಣಕ್ಕೆ ತಿರುಗಿದಾಗ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಸ್ನಾನ ಮಾಡುವಾಗ, ಈ ನೀರನ್ನು ಬುಡದಿಂದ ತುದಿಯವರೆಗೂ ಹಚ್ಚಿ. ಕೂದಲು ಸಂಪೂರ್ಣವಾಗಿ ಒಣಗಿದಾಗ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ನೀವು ಬಯಸಿದ ಫಲಿತಾಂಶ ಸಿಗುತ್ತದೆ.
ಇದನ್ನೂ ಓದಿ : ಮನೆಯಲ್ಲಿಯೇ ಈ ತರಕಾರಿ ಹೇಯರ್ ಮಾಸ್ಕ್ ತಯಾರಿಸಿ ಕೂದಲುದುರುವಿಕೆಗೆ ಗುಡ್ ಬೈ ಹೇಳಿ!
2. ಹರ್ಬಲ್ ಹೇರ್ ಮಾಸ್ಕ್:
ಅನೇಕ ಆಯುರ್ವೇದ ವಸ್ತುಗಳ ಸಹಾಯದಿಂದ ಮನೆಯಲ್ಲಿ ಹೇರ್ ಮಾಸ್ಕ್ ತಯಾರಿಸಬಹುದು. ಇದಕ್ಕಾಗಿ, ಒಂದು ಚಮಚ ಇಂಡಿಗೊ, ಒಂದು ಚಮಚ ತ್ರಿಫಲ ಪುಡಿ, ಒಂದು ಚಮಚ ಬ್ರಾಹ್ಮಿ ಪುಡಿ, 2 ಚಮಚ ಕಪ್ಪು ಚಹಾ, ಒಂದು ಚಮಚ ಆಮ್ಲಾ ಪುಡಿ ಮತ್ತು ಒಂದು ಚಮಚ ಕಾಫಿಯನ್ನು ಒಂದು ಬೌಲ್ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ನೀರು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ನಂತರ ಈ ಪೇಸ್ಟ್ ತಣ್ಣಗಾಗುವವರೆಗೆ ಕಾಯಿರಿ. ಈಗ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು 30 ರಿಂದ 45 ನಿಮಿಷಗಳ ಬಿಡಿ. ನಂತರ ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಈ ಪೇಸ್ಟ್ ಅನ್ನು ಬಳಸುವದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.
3. ಮೆಂತ್ಯೆ ಬೀಜಗಳು:
ಆಹಾರದ ರುಚಿಯನ್ನು ಹೆಚ್ಚಿಸಲು ಮೆಂತ್ಯೆ ಬೀಜಗಳನ್ನು ಹೆಚ್ಚಾಗಿ ಬಳಸಿರಬಹುದು. ಆದರೆ ಈ ಬೀಜಗಳ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಮೆಂತ್ಯೆ ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ನಂತರ ಈ ಕಾಳುಗಳನ್ನು ರುಬ್ಬಿ ಹೇರ್ ಮಾಸ್ಕ್ ನಂತೆ ಹಚ್ಚಿ ನಂತರ ಕೆಲವು ಗಂಟೆಗಳ ಕಾಲ ಒಣಗಲು ಬಿಡಿ. ಕೆಲವು ದಿನಗಳವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದರೆ, ಒಂದೂ ಬಿಳಿ ಕೂದಲು ಕಾಣಿಸುವುದಿಲ್ಲ.
ಇದನ್ನೂ ಓದಿ : ಒಂದೇ ವಾರದಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಹಾಗಾದ್ರೆ ಮನೆಯಲ್ಲಿಯೇ ಈ ತರಕಾರಿ ಜ್ಯೂಸ್ ತಯಾರಿಸಿ ಸೇವಿಸಿ!
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ