EPFO Update: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!

EPFO Update: ಇಪಿಎಫ್‌ಒನಿಂದ ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗದಾತರಿಂದ ವೇತನ ವಿವರಗಳು ಇತ್ಯಾದಿಗಳನ್ನು ಅಪ್‌ಲೋಡ್ ಮಾಡುವ ಗಡುವನ್ನು ಇಪಿಎಫೋ ಐದು ತಿಂಗಳವರೆಗೆ ವಿಸ್ತರಿಸಿದೆ. (Business News In Kannada)  

Written by - Nitin Tabib | Last Updated : Jan 4, 2024, 05:45 PM IST
  • ಉದ್ಯೋಗದಾತರು ಮತ್ತು ಉದ್ಯೋಗದಾತರ ಸಂಘಗಳ ಪರವಾಗಿ, ಪಿಂಚಣಿದಾರರು ಮತ್ತು ಸದಸ್ಯರ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು
  • ಹೆಚ್ಚುವರಿ ಸಮಯವನ್ನು ನೀಡುವಂತೆ ಇಪಿಎಫ್‌ಒಗೆ ಈ ಹಿಂದೆ ವಿನಂತಿಸಲಾಗಿತ್ತು.
  • ಆದ್ದರಿಂದ, ಇದನ್ನು ಮೊದಲು ಸೆಪ್ಟೆಂಬರ್ 30, 2023 ಕ್ಕೆ ಮತ್ತು ನಂತರ ಡಿಸೆಂಬರ್ 31, 2023 ಕ್ಕೆ ವಿಸ್ತರಿಸಲಾಗಿತ್ತು.
EPFO Update: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ! title=

ನವದೆಹಲಿ:  ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ, ನಿವೃತ್ತಿಯ ಸಮಯದಲ್ಲಿ ಐ‌ಪಿ‌ಎಫೋ​​ನಿಂದ ಹೆಚ್ಚಿನ ಪಿಂಚಣಿ ಪಡೆಯಲು ಹೈಯರ್ ಪೆನ್ಷನ್ ಸ್ಕೀಮ್ ಅನ್ನು ಆರಂಭಿಸಲಾಗಿದೆ, ಇದರ ಅಡಿಯಲ್ಲಿ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಡಿಸೆಂಬರ್ 31, 2023 ರ ಗಡುವು ನೀಡಲಾಗಿತ್ತು. ಇದೀಗ ಈ ಗಡುವನ್ನು ಈಗ ಐದು ತಿಂಗಳು ವಿಸ್ತರಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬುಧವಾರ ತಿಳಿಸಿದೆ. ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ಉದ್ಯೋಗಿಗಳ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಮೇ 31, 2024 ರವರೆಗೆ ಸಮಯಾವಕಾಶ ನೀಡಲಾಗಿದೆ. (Business News In Kannada)

ಈ ಹಿಂದೆಯೂ ಗಡುವನ್ನು ವಿಸ್ತರಿಸಲಾಗಿತ್ತು
ನವೆಂಬರ್ 4, 2022 ರಂದು ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಈ ಹೈಯರ್ ಪೆನ್ಷನ್ ಸ್ಕೀಮ್ ಅನ್ನು 26.02.2023 ರಂದು ಪ್ರಾರಂಭಿಸಲಾಗಿದೆ, ಇದು ಮೊದಲು 3.05.2023 ರವರೆಗೆ ಮಾತ್ರ ಇತ್ತು, ಆದಾಗ್ಯೂ, ಪಿಂಚಣಿದಾರರು ಮತ್ತು ಸದಸ್ಯರ ಬೇಡಿಕೆಯ ದೃಷ್ಟಿಯಿಂದ, ಅದರ ಗಡುವನ್ನು 26.06.2023 ಕ್ಕೆ ವಿಸ್ತರಿಸಲಾಗಿತ್ತು.

ಇದಾದ ನಂತರವೂ ಅದನ್ನು ಇನ್ನೂ 15 ದಿನಗಳವರೆಗೆ ಅಂದರೆ 11.07.2023 ರವರೆಗೆ ವಿಸ್ತರಿಸಲಾಯಿತು. ಇಲ್ಲಿಯವರೆಗೆ, ಇಪಿಎಫ್‌ಒ ಪಿಂಚಣಿದಾರರು ಮತ್ತು ಸದಸ್ಯರಿಂದ ಒಟ್ಟು 17.59 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ.

ಇದನ್ನೂ ಓದಿ-DA Hike 2024: ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ವೇತನದಲ್ಲಿ 49, 420 ಹೆಚ್ಚಳ!

ವಿವರಗಳನ್ನು ಅಪ್‌ಲೋಡ್ ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು
ಉದ್ಯೋಗದಾತರು ಮತ್ತು ಉದ್ಯೋಗದಾತರ ಸಂಘಗಳ ಪರವಾಗಿ, ಪಿಂಚಣಿದಾರರು ಮತ್ತು ಸದಸ್ಯರ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಹೆಚ್ಚುವರಿ ಸಮಯವನ್ನು ನೀಡುವಂತೆ ಇಪಿಎಫ್‌ಒಗೆ ಈ ಹಿಂದೆ ವಿನಂತಿಸಲಾಗಿತ್ತು. ಆದ್ದರಿಂದ, ಇದನ್ನು ಮೊದಲು ಸೆಪ್ಟೆಂಬರ್ 30, 2023 ಕ್ಕೆ ಮತ್ತು ನಂತರ ಡಿಸೆಂಬರ್ 31, 2023 ಕ್ಕೆ ವಿಸ್ತರಿಸಲಾಗಿತ್ತು.

ಇದನ್ನೂ ಓದಿ-Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು!

ಉದ್ಯೋಗದಾತರು ಇನ್ನೂ 3.6 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಪ್ರಕ್ರಿಯೆಗೊಳಿಸಬೇಕಾಗಿದೆ. ಇದರ ದೃಷ್ಟಿಯಿಂದ, ವೇತನ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಇಪಿಎಫ್‌ಒ ಮೇ 31, 2024 ರವರೆಗೆ ಹೆಚ್ಚುವರಿ ಸಮಯವನ್ನು ನೀಡಿದೆ.

ಇದನ್ನೂ ನೋಡಿ-

 ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News