Viral Video: 'ನನಗೆ ಒಂದು ಮುತ್ತು ಬೇಕು' ಎಂದು ಹುಡುಗ ಹುಡುಗಿಗೆ ಕೇಳಿದ್ದೆ ತಡ, ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ!

Viral Video: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಹುಡುಗನೊಬ್ಬ ಸಾರ್ವಜನಿಕವಾಗಿ ಹುಡುಗಿಗೆ ಕಿಸ್ ಕೇಳಿದ್ದಾನೆ. ಈ ವೀಡಿಯೋ ನೋಡಿದ ನಂತರ ಬಳಕೆದಾರರ ತರಹೇವಾರಿ ಪ್ರಶ್ನೆಗಳೆ ಆರಂಭಗೊಂಡಿವೆ. (Viral News In Kannada)  

Written by - Nitin Tabib | Last Updated : Jan 9, 2024, 05:14 PM IST
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
  • ಕೆಲವು ಬಳಕೆದಾರರು ಅವರನ್ನು ಮುದ್ದಾದ ಜೋಡಿ ಮತ್ತು ವಿಶೇಷ ಜೋಡಿ ಎಂದು ಕರೆದರೆ ಕೆಲವರು ಹುಡುಗನ ಕೃತ್ಯವನ್ನು ಶ್ಲಾಘಿಸಿದ್ದಾರೆ.
  • ಅನೇಕ ಜನರು ಕೈಯಿಂದ ಹೃದಯ ಮಾಡುವ ಮತ್ತು ಚಪ್ಪಾಳೆ ತಟ್ಟುವ ಎಮೋಜಿಗಳ ಮೂಲಕ ವೀಡಿಯೊವನ್ನು ಶ್ಲಾಘಿಸಿದ್ದಾರೆ.
Viral Video: 'ನನಗೆ ಒಂದು ಮುತ್ತು ಬೇಕು' ಎಂದು ಹುಡುಗ ಹುಡುಗಿಗೆ ಕೇಳಿದ್ದೆ ತಡ, ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ! title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬರುವ ಕೆಲ ವಿಡಿಯೋಗಳು ಅವುಗಳನ್ನು ನೋಡುವ ಯಾವುದೇ ವ್ಯಕ್ತಿಯನ್ನು ನಿಬ್ಬೆರಗಾಗಿಸುತ್ತವೆ.  ಅಂತಹುದೇ ವಿಡಿಯೋವೊಂದನ್ನು ಇಂದು ನಾವು ನಿಮಗೆ ತೋರಿಸುತ್ತಿದ್ದು,  ಇದರಲ್ಲಿ ಹುಡುಗನ ಪ್ರಾಮಾಣಿಕತೆಯನ್ನು ನೋಡಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರಿ. ಇನ್ನೊಂದೆಡೆ ಆ ಸಮಯದಲ್ಲಿ ಹುಡುಗಿಯ ಮುಖದ ಮೇಲೆ ಮೂಡುವ ನಗು ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎನ್ನಬಹುದು. ಏನಿದು ಸಂಪೂರ್ಣ ವಿಷಯ ತಿಳಿದುಕೊಳ್ಳೋಣ ಬನ್ನಿ, (Viral News In Kannada)

ಇಲ್ಲಿದೆ ವಿಡಿಯೋದ ಸಂಪೂರ್ಣ ಸಾರಾಂಶ
ಸಾಮಾಜಿಕ ಜಾಲತಾಣದಲ್ಲಿ
ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗನೊಬ್ಬ ಹುಡುಗಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತಿದೆ. ಆರಂಭದಲ್ಲಿ, ಇಬ್ಬರೂ ಯಾವುದೋ ಸೀರಿಯಲ್ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆಂದು ತೋರುತ್ತದೆ, ಏಕೆಂದರೆ ಇಬ್ಬರೂ ತುಂಬಾ ಗಂಭೀರವಾಗಿ ಕಾಣಿಸುತ್ತಿದ್ದಾರೆ.

ನಂತರ ಹುಡುಗ ಈ ರೀತಿ ವರ್ತಿಸುತ್ತಾನೆ
ಮೊದಲಿಗೆ ಹುಡುಗ ಸಾಕಷ್ಟು ಯೋಚನೆಯಲ್ಲಿ ಮುಳುಗಿರುವಂತೆ ತೋರುತ್ತದೆ. ನಂತರ ಆತ ಸುತ್ತಲೂ ನೋಡುತ್ತಾನೆ. ಇದಾದ ನಂತರ ಆ ಹುಡುಗಿಯನ್ನು ಹತ್ತಿರ ಕರೆದು ಆಕೆಗೆ ಶಾಕ್ ಆಗುವ ಪ್ರಶ್ನೆಯೋದನ್ನು ಕೇಳುತ್ತಾನೆ.

ಇದನ್ನೂ ಓದಿ-Shocking Video: ಯುವಕ 'ಅಪ್ಪನಿಗೆ ಹುಟ್ಟಿದ್ರೆ ಗುಂಡು ಹೊಡೆ' ಅಂದಿದ್ದೆ ತಡ, ಈ ದೊಡಪ್ಪ ಮಾಡಿದ್ದೇನು ನೀವೇ ನೋಡಿ!
 
'ನನಗೆ ಮುತ್ತು ಬೇಕು'
ಹುಡುಗಿ ಹುಡುಗನ ಹತ್ತಿರ ಬಂದ ತಕ್ಷಣ, ಹುಡುಗ 'ನನಗೆ ಒಂದು ಮುತ್ತು ಬೇಕು' ಎಂದು ಕೇಳುತ್ತಾನೆ ಮಾತು ಕಪಾಳಮೋಕ್ಷದ ಭಯದಿಂದ ತನ್ನ ಮುಖವನ್ನು ಮೆಲ್ಲಗೆ ನಾಚಿಕೊಳ್ಳುತ್ತಾ ಹಿಂದಕ್ಕೆ ಎಳೆಯುತ್ತಾನೆ. ಇದಾದ ಬಳಿಕ ಹುಡುಗಿಯ ಮುಖದಲ್ಲಿ ಒಂದು ಕ್ಯೂಟ್ ಸ್ಮೈಲ್ ನೋಡಲು ಸಿಗುತ್ತದೆ ಮತ್ತು ನಂತರ ಅವಳು ಕಿರಿದಾದ ಕಣ್ಣುಗಳಿಂದ ಹುಡುಗನನ್ನು ನೋಡಲು ಪ್ರಾರಂಭಿಸುತ್ತಾಳೆ.

ಇದನ್ನೂ ಓದಿ-Viral Video: 'ಈತ ಫಟ್ಬಾಲ್ ಆಡ್ತಾನೆ... ನಾನು ಅಕ್ಕನ ಜೊತೆ ಅಭ್ಯಾಸ ಮಾಡ್ತೇನೆ', ಟೀಚರ್ ಬಳಿ ಅಣ್ಣನ ಕಂಪ್ಲೇಂಟ್ ಮಾಡುತ್ತಿರುವ ಕ್ಯೂಟಿಪೈ

ಬಳಕೆದಾರರ ಪ್ರತಿಕ್ರಿಯೆ ಬಂಬಾಟಾಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವು ಬಳಕೆದಾರರು ಅವರನ್ನು ಮುದ್ದಾದ ಜೋಡಿ ಮತ್ತು ವಿಶೇಷ ಜೋಡಿ ಎಂದು ಕರೆದರೆ ಕೆಲವರು ಹುಡುಗನ ಕೃತ್ಯವನ್ನು ಶ್ಲಾಘಿಸಿದ್ದಾರೆ. ಅನೇಕ ಜನರು ಕೈಯಿಂದ ಹೃದಯ ಮಾಡುವ ಮತ್ತು ಚಪ್ಪಾಳೆ ತಟ್ಟುವ ಎಮೋಜಿಗಳ ಮೂಲಕ ವೀಡಿಯೊವನ್ನು ಶ್ಲಾಘಿಸಿದ್ದಾರೆ. ಇನ್ನೊಂದೆಡೆ ಓರ್ವ ಬಳಕೆದಾರರು 'ನಿಮಗೆ ಕಿಸ್ ಸಿಗಲಿಲ್ಲ ಅಲ್ಲಾ ಬ್ರೊ?' ಎಂತ ಡೈರೆಕ್ಟಾಗಿ ಪ್ರಶ್ನಿಸಿದ್ದಾರೆ. ಈ ವೀಡಿಯೋವನ್ನು ನೋಡಿ ನಗುವ ಅನೇಕ ಬಳಕೆದಾರರು ಫೈರ್ ಎಮೋಜಿಗಳನ್ನು ಮಾಡುವ ಮೂಲಕ ಕಾಮೆಂಟ್ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ -

 
 
 
 

 
 
 
 
 
 
 
 
 
 
 

A post shared by Rutik M (@lovstory3204)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News