ಈ ದಿನ ಆರಂಭವಾಗಲಿದೆ IPL 2024 : ಫೈನಲ್ ಪಂದ್ಯದ ದಿನಾಂಕವೂ ಪ್ರಕಟ

IPL 2024 Dates :  ಜೂನ್ 1, 2024 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ T20 ವಿಶ್ವಕಪ್ ಆರಂಭವಾಗಲಿದೆ. T20 ವಿಶ್ವಕಪ್ 2024ರಲ್ಲಿ ಭಾರತದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ಜೂನ್ 5 ರಂದು  ನಡೆಯಲಿದೆ.  

Written by - Ranjitha R K | Last Updated : Jan 22, 2024, 12:41 PM IST
  • IPL 2024 ಲೀಗ್ ಮಾರ್ಚ್ 22 ರಿಂದ ಪ್ರಾರಂಭವಾಗಬಹುದು
  • ಟಿ20 ಕ್ರಿಕೆಟ್ ಲೀಗ್‌ನ ಅಂತಿಮ ಪಂದ್ಯ ಮೇ 26 ರಂದು ನಡೆಯುವ ಸಾಧ್ಯತೆ
  • ಬಿಸಿಸಿಐ ಮುಂದಿನ ಬಹು ದೊಡ್ಡ ಸವಾಲು
ಈ ದಿನ ಆರಂಭವಾಗಲಿದೆ IPL 2024 : ಫೈನಲ್ ಪಂದ್ಯದ  ದಿನಾಂಕವೂ ಪ್ರಕಟ  title=

IPL 2024 Dates : ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನ 17 ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಟಿ20 ಕ್ರಿಕೆಟ್ ಲೀಗ್‌ನ ಅಂತಿಮ ಪಂದ್ಯ ಮೇ 26 ರಂದು ನಡೆಯುವ ಸಾಧ್ಯತೆ ಇದೆ. ಐಪಿಎಲ್ 2024 ಮತ್ತು ಟಿ 20 ವಿಶ್ವಕಪ್ 2024 ಟೂರ್ನಮೆಂಟ್ ನಡುವೆ ಕೇವಲ 5 ದಿನಗಳು ಬಾಕಿ ಉಳಿಯುತ್ತವೆ. ಜೂನ್ 1, 2024 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ T20 ವಿಶ್ವಕಪ್ ಆರಂಭವಾಗಲಿದೆ.T20 ವಿಶ್ವಕಪ್ 2024ರಲ್ಲಿ ಭಾರತದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ಜೂನ್ 5 ರಂದು ನಡೆಯಲಿದೆ.

IPL 2024 ಮಾರ್ಚ್ 22 ರಿಂದ ಪ್ರಾರಂಭ ಸಾಧ್ಯತೆ: 
ಕ್ರಿಕ್‌ಬಜ್ ವರದಿಯ ಪ್ರಕಾರ, ಮಾರ್ಚ್ 22 ರಿಂದ ಮೇ 26 ರವರೆಗೆ ಐಪಿಎಲ್ 2024 ಅನ್ನು ಆಯೋಜಿಸಲು ಬಿಸಿಸಿಐ ಸಿದ್ದತೆ ನಡೆಸುತ್ತಿದೆ.WPL ನ ಎರಡನೇ ಋತುವನ್ನು ಫೆಬ್ರವರಿ 22 ರಿಂದ ಮಾರ್ಚ್ 17 ರವರೆಗೆ ಆಯೋಜಿಸಬಹುದು.ಪ್ರಸ್ತುತ, ಲೋಕಸಭೆ ಚುನಾವಣೆಯ ದಿನಾಂಕದಿಂದಾಗಿ ಐಪಿಎಲ್ 2024 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.ಲೋಕಸಭೆ ಚುನಾವಣೆಯ ದಿನಾಂಕ ಬಹಿರಂಗಗೊಂಡ ನಂತರವೇ ಐಪಿಎಲ್ 2024 ರ ವೇಳಾಪಟ್ಟಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.ಚುನಾವಣಾ ದಿನಾಂಕಗಳನ್ನು ಘೋಷಿಸಿದ ತಕ್ಷಣ, ಐಪಿಎಲ್ 2024 ರ  ಅಧಿಕೃತ ವೇಳಾಪಟ್ಟಿ ಕೂಡಾ ಪ್ರಕಟವಾಗುತ್ತದೆ. 

ಇದನ್ನೂ ಓದಿ :  ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ ವಿಚ್ಚೇದನಕ್ಕೆ ಇದೇ ಮೂಲ ಕಾರಣವಂತೆ!

ಬಿಸಿಸಿಐ ಮುಂದಿನ ಬಹು ದೊಡ್ಡ ಸವಾಲು : 
ಐಪಿಎಲ್ ಫೈನಲ್ ತನಕ ತಮ್ಮ ಆಟಗಾರರು ಲಭ್ಯರಿರುತ್ತಾರೆ ಎಂಬ ಭರವಸೆಯನ್ನು ಬಿಸಿಸಿಐ ಬಹುತೇಕ ಕ್ರಿಕೆಟ್ ಮಂಡಳಿಗಳಿಂದ ಪಡೆದುಕೊಂಡಿದೆ. ಆದರೂ T20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗುತ್ತದೆ ಎನುವುದನ್ನು ಪರಿಗಣಿಸಿ, ಕೆಲವು ಆಟಗಾರರು IPL 2024 ರ ಋತುವಿನ ಮಧ್ಯದಲ್ಲಿ ನಿರ್ಗಮಿಸಬಹುದು.ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಐಪಿಎಲ್ 2024 ಅನ್ನು ಆಯೋಜಿಸುವುದು ಮತ್ತು ಭಾರತದಲ್ಲಿಯೇ ಲೀಗ್ ಅನ್ನು ಆಯೋಜಿಸುವುದು ಬಿಸಿಸಿಐನ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಈ ಮಧ್ಯೆ, ಭಾರತದ ಆಟಗಾರರು ಹೈದರಾಬಾದ್‌ನಲ್ಲಿ ನೆಟ್ ಸೆಷನ್ ನಡೆಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹೆಚ್ಚಿನ ಆಟಗಾರರು ಭಾಗವಹಿಸಿದ್ದರು.

ಇದನ್ನೂ ಓದಿ :  IND vs ENG: ಟೆಸ್ಟ್ ಶತಕವನ್ನು ಶ್ರೀರಾಮನಿಗೆ ಅರ್ಪಿಸಿದ ಭಾರತದ ಕ್ರಿಕೆಟಿಗ, ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News