Viral Video: ಪ್ರತಿ ದಿನ ಹಲವಾರು ತಮಾಷೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವೈರಲ್ ಆಗುತ್ತಿರುವ ವೀಡಿಯೋಗಳಲ್ಲಿ ಹಲವು ಡ್ಯಾನ್ಸ್ ವಿಡಿಯೋಗಳೂ ಕೂಡ ಶಾಮಿಲಾಗಿರುತ್ತವೆ. ನೃತ್ಯಕ್ಕೆ ಸಂಬಂಧಿಸಿದ ವೀಡಿಯೊಗಳಲ್ಲಿ, ಕೆಲವೊಮ್ಮೆ ಅಜ್ಜ, ಕೆಲವೊಮ್ಮೆ ಅಂಕಲ್ ಅಥವಾ ಆಂಟಿ ಹಾಡುಗಳಿಗೆ ನೃತ್ಯ ಮಾಡುವುದನ್ನು ನೀವು ಕಂಡಿರಬಹುದು. ಆದರೆ ಈ ಹಿಂದೆ ಯಾವುದಾದರೂ ಪ್ರಾಣಿ ಡೋಲಿನ ತಾಳಕ್ಕೆ ಕುಣಿಯುವುದನ್ನು ನೋಡಿದ್ದೀರಾ? ಇಲ್ಲ ಎಂದಾದಲ್ಲಿ, ಈಗಲೇ ನೋಡಿ. ಏತನ್ಮಧ್ಯೆ, ಆನೆಯು ಡೋಲು ಬಡಿತಕ್ಕೆ ತಕ್ಕಂತೆ ನೃತ್ಯ ಮಾಡುತ್ತಿರುವ ಈ ವೀಡಿಯೊ ಇಂಟರ್ನೆಟ್‌ನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.(Viral News In Kannada)
ಇದನ್ನೂ ಓದಿ-Viral Video: ಪಾರ್ಕ್ನಲ್ಲಿ ಕಾಣಿಸಿಕೊಂಡ ಭೂತ! ನೋಡಿ ದಂಗಾದ ಪೊಲೀಸರು, ವಿಡಿಯೋ ವೈರಲ್!
ವೈರಲ್ ವಿಡಿಯೋದಲ್ಲಿ ಏನಿದೆ?
ಆನೆಯ ಸುತ್ತ ಜನ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಆನೆಯನ್ನು ಆನೆ ರಾಜನಂತೆಯೇ ಅಲಂಕರಿಸಲಾಗಿದೆ. ಆನೆಯ ಸುತ್ತ ಜನ ನಿಂತಿದ್ದಾರೆ. ಕೆಲವರು ಹಲಗೆ ಮತ್ತು ಡೋಲು ಬಾರಿಸುತ್ತಾ ಕುಣಿಯುತ್ತಿದ್ದಾರೆ. ಇದರೊಂದಿಗೆ, ಗಜರಾಜ ಕೂಡ ಹಲಗೆ ಬೀಟ್‌ಗಳ ಜೊತೆಗೆ ವೀಡಿಯೊದಲ್ಲಿ ತನ್ನ ಪಾದಗಳನ್ನು ತಟ್ಟುವುದನ್ನು ಸಹ ಕಾಣಬಹುದು. ಆನೆಯ ಸುತ್ತ ನಿಂತಿರುವ ಜನರು ಕೂಡ ಆನೆಯೊಂದಿಗೆ ನೃತ್ಯ ಮಾಡುತ್ತಿದ್ದಾರೆ. ಹಬ್ಬದ ವಾತಾವರಣ ಇರುವಂತೆ ದೃಶ್ಯವಿದೆ. ಈ ಆನೆ ಡ್ಯಾನ್ಸ್ ವಿಡಿಯೋವನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ.
ಇದನ್ನೂ ಓದಿ-Viral Video: ವಾಹನದಲ್ಲಿ ಇಂಧನ ಖಾಲಿ, ಕೈದಿಗಳಿಂದಲೇ ವಾಹನ ತಳ್ಳಿಸಿದ ಪೊಲೀಸರು! 'ಅದು ಬಿಹಾರ' ಎಂದ ನೆಟ್ಟಿಗರು!
ಬಳಕೆದಾರರ ಕಾಮೆಂಟ್ ಹೇಗಿದೆ?
ಗಜರಾಜನ ಈ ನೃತ್ಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ X ನಲ್ಲಿ @WokePandemic ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಂಚಿಕೊಂಡ ಮೂಲ ಬಳಕೆದಾರ ಶೀರ್ಷಿಕೆಯಲ್ಲಿ - "ಸನಾತನ ಸಂಸ್ಕೃತಿ ಮಾತ್ರ ಪ್ರಾಣಿಗಳನ್ನು ಸಂತೋಷವಾಗಿರಿಸುತ್ತದೆ" ಎಂದು ಬರೆದುಕೊಂಡಿದ್ದಾರೆ. ವೀಡಿಯೊವನ್ನು ವೀಕ್ಷಿಸಿದ ನಂತರ, ಇತರ ಬಳಕೆದಾರರು ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ- ಸನಾತನ ಸಂಸ್ಕೃತಿ ಮಾತ್ರ ಪ್ರಾಣಿಗಳನ್ನು ಸಂತೋಷವಾಗಿರಿಸುತ್ತದೆ ಎಂದು ಮೂಲ ಬಳಕೆದಾರ ಕಾಮೆಂಟ್ ಮಾಡಿದರೆ, ಮತ್ತೊರ್ವ ಬಳಕೆದಾರರು - ಸನಾತನ ಧರ್ಮ ಮತ್ತು ಸಂಸ್ಕೃತಿಯ ಅಲೌಕಿಕ ಮತ್ತು ಅದ್ಭುತ ದೃಶ್ಯ ಎಂದಿದಾರೆ. ಮೂರನೇ ಬಳಕೆದಾರ - ನೀವು ಇಂತಹ ಆನೆಯನ್ನು ಮೊದಲು ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಾಲ್ಕನೇ ಬಳಕೆದಾರರು, ಗಣಪತಿ ಬಪ್ಪಾ ಮೋರಿಯಾ ಎಂದಿದ್ದಾರೆ. ಈ ವೀಡಿಯೋವನ್ನು ಇದುವರೆಗೆ 14 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಬಳಕೆದಾರರಿಂದ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಕನ್ನಡದಲ್ಲಿ ವೈರಲ್ ಸುದ್ದಿಗಳು-
Only Sanatan Culture can keep animals happy. pic.twitter.com/5ObF0LqOsF
— Eminent Woke (@WokePandemic) February 2, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ