Viral Video: ಪತ್ನಿಯ ಹಣೆಗೆ ಫಿಲ್ಮಿ ಸ್ಟೈಲ್ ನಲ್ಲಿ ಸಿಂಧೂರ ತುಂಬಿದ ವರ, 'ದೇವರೇ... ರೀಲ್ ಗಳಿಂದ ನಮ್ಮ ದೇಶವನ್ನು ರಕ್ಷಿಸು' ಎಂದ ನೆಟ್ಟಿಗರು

Viral Video: ಪ್ರಸ್ತುತ ಭಾರತದಲ್ಲಿ ಮದುವೆಯ ಸುಗ್ಗಿ ನಡೆಯುತ್ತಿದೆ. ಭಾರತದ ಮದುವೆಗಳ ಕುರಿತು ಹೇಳುವುದಾದರೆ, ತುಂಬಾ ಅದ್ದೂರಿಯಾಗಿ ಮತ್ತು ಉತ್ಸಾಹಭರಿತವಾಗಿ ಮದುವೆಯ ಆಚರಣೆಗಳು ನಡೆಯುತ್ತವೆ. ಪ್ರಸ್ತುತ ಅನೇಕ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಆದರೆ ಈ ರೀಲ್‌ಗಳ ಯುಗದಲ್ಲಿ, ಬಳಕೆದಾರರು ತಮ್ಮ ದೇಶವನ್ನು ರೀಲ್‌ಗಳಿಂದ ರಕ್ಷಿಸಲು ದೇವರ ಮೊರೆ ಹೋಗುತ್ತಿರುವ ರೀಲ್ ಕೂಡ ಶಾಮಿಲಾಗಿದೆ. (Viral News In Kannada)  

Written by - Nitin Tabib | Last Updated : Feb 20, 2024, 06:33 PM IST
  • ಈ ಕುರಿತು ಪ್ರತಿಕ್ರಿಯಿಸಿರುವ ಮತ್ತೊರ್ವ ಬಳಕೆದಾರ, 'ಭಾರತವು ಟಿಕ್‌ಟಾಕ್ ಅನ್ನು ಏಕೆ ನಿಷೇಧಿಸಿದೆ ಎಂಬುದು ಈಗ ನನಗೆ ಅರ್ಥವಾಗಿದೆ' ಎಂದು ಬರೆದಿದ್ದಾರೆ.
  • ಮೂರನೇ ಬಳಕೆದಾರೆ, "ಕಪಲ್ ಗೋಲ್ಸ್" ಎಂದು ಕಾಮೆಂಟ್ ಮಾಡಿದ್ದಾರೆ.
  • ಮತ್ತೊರ್ವ ಬಳಕೆದಾರರು 'ಸಂಬಂಧಿಕರು ಸಂಪೂರ್ಣ ಸ್ಟ್ಯಾಚ್ಯೂ ಭಂಗಿಯಲ್ಲಿ ನಿಂತಿರುವುದು ಸಕ್ಕತ್ತಾಗಿದೆ' ಎಂದಿದ್ದಾರೆ.
Viral Video: ಪತ್ನಿಯ ಹಣೆಗೆ ಫಿಲ್ಮಿ ಸ್ಟೈಲ್ ನಲ್ಲಿ ಸಿಂಧೂರ ತುಂಬಿದ ವರ, 'ದೇವರೇ... ರೀಲ್ ಗಳಿಂದ ನಮ್ಮ ದೇಶವನ್ನು ರಕ್ಷಿಸು' ಎಂದ ನೆಟ್ಟಿಗರು title=

Bride Groom Viral Video: ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ನಲ್ಲಿ ಸ್ಕ್ರಾಲ್ ಮಾಡುವಾಗ ನಾವು ನೋಡುವ ಕೆಲ ವಿಡಿಯೋಗಳನ್ನು ನಾವು ತಕ್ಷಣ ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೆ ಹಂಚಿಕೊಳ್ಳುತ್ತೇವೆ. ಅಂತಹುದೇ ಒಂದು ರೀಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಮದುವೆಯನ್ನು ವಿಶಿಷ್ಟವಾಗಿಸಲು ಜೋಡಿಯೊಂದು ಮಾಡಿದ ರೀಲ್ ವಿಡಿಯೋ ಜನರ ಭಾರಿ ಕಿರಿಕಿರಿಗೆ ಕಾರಣವಾಗಿದೆ. ತುಂಬಾ ಫಿಲ್ಮಿ ಸ್ಟೈಲ್ ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ವಧುವಿನ ಬೇಡಿಕೆಯನ್ನು ಈಡೇರಿಸಲು ವರ ಮಾಡಿದ ಕಸರತ್ತು ತುಂಬಾ ತಮಾಷೆಯಿಂದ ಕೂಡಿದೆ. ನೀವು ಒಮ್ಮೆ ಈ ವೀಡಿಯೊವನ್ನು ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕೂಡ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ. (Viral News In Kannada)
 
ಸ್ಟ್ಯಾಚ್ಯೂ ಆಗಿ ನಿಂತ ಸಂಬಂಧಿಕರು
ಈ ರೀಲ್ ಕೇವಲ 28 ಸೆಕೆಂಡುಗಲದ್ದಾಗಿದೆ. ಇದರಲ್ಲಿ ವರ ಮೊದಲು ವಧುವಿನ ಹಣೆಗೆ ಸಿಂಧೂರ ತುಂಬುತ್ತಾನೆ.  ಈ ಸಂದರ್ಭದಲ್ಲಿ ಆತ ಕ್ಯಾಮೆರಾ ಕಡೆಗೆ ನೋಡುತ್ತಾ ಹಿಂದಿ ಚಿತ್ರಗೀತೆ 'ದೊ ಅಂಜಾನೆ'ಗೆ ಲಿಪ್ ಸಿಂಕ್ ಮಾಡುತ್ತಾನೆ.  ವಧು ಕೇವಲ ನಾಚುತ್ತಿದ್ದಾಳೆ ಮತ್ತು ವರನನ್ನು ನೋಡುತ್ತಿದ್ದಾಳೆ. ದಂಪತಿಗಳ ಹಿಂದೆ ಕುಟುಂಬದ ಇತರ ಸದಸ್ಯರು ವಿಗ್ರಹದ ರೂಪ ತಳೆದು ಗಂಭೀರವಾಗಿ ನಿಂತಿದ್ದಾರೆ. ಆದರೆ ಹಾಡಿಗೆ ವಾರ ವ್ಯಕ್ತಪಡಿಸುತ್ತಿರುವ ಎಕ್ಸ್ಪ್ರೇಷನ್ ತುಂಬಾ ತಮಾಷೆಯಿಂದ ಕೂಡಿದೆ ಮತ್ತು ಅದ್ಭುತವಾಗಿದೆ. ವಧುವರರ ಈ ಫಿಲ್ಮಿ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾರಿ ವೀಕ್ಷಣೆಗಳನ್ನು ಪಡೆಯುತ್ತಿದೆ ಈ ವಿಡಿಯೋ
ಈ ಮದುವೆಯ ವೀಡಿಯೊವನ್ನು ಫೆಬ್ರವರಿ 14 ರಂದು @rahulroshan ಎಂಬ X ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಶೀರ್ಷಿಕೆಯನ್ನು ಬರೆದ ಅವರು - 'ದೇವರೇ ನನ್ನ ದೇಶವನ್ನು ರೀಲ್‌ಗಳಿಂದ ಉಳಿಸು' ಎಂದಿದ್ದಾರೆ. ಇದುವರೆಗೆ ಈ ಪೋಸ್ಟ್‌ಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ ಮತ್ತು  4 ಲಕ್ಷ 43 ಸಾವಿರ ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.

ಸಿ  ಇತರ ಬಳಕೆದಾರರಿಗೆ ತಮ್ಮ ನಗುವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ನಿಮಗೆ ಸಾಧ್ಯವಾಯಿತಾ ಎಂಬುದನ್ನು ನಮಗೆ ತಿಳಿಸಿ. 

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News