Baal Aadhaar card : ಕೇಂದ್ರ ಸರ್ಕಾರ ದೇಶದ ಜನತೆಗೆ ಅನೇಕ ಬಾರಿ ತಮ್ಮ ಗುರುತನ್ನು ಹೊಂದಲು ಹೊಸ ಹೊಸ ಮಾರ್ಗಗಳನ್ನು ತೋರಿಸುತ್ತದೆ. ಯಾವುದೇ ಯೋಜನೆ ಲಾಭ ಪಡೆಯಲು ಸಹ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. 2014 ರ ನಂತರ ಆಧಾರ್ ಕಾರ್ಡ್ ಹೆಚ್ಚು ಪ್ರವರ್ದಮಾನಕ್ಕೆ ಬಂದಿತ್ತು. ಈ ಕಾರ್ಡ್ನಲ್ಲಿ ವ್ಯಕ್ತಿಯ ಹೆಸರು, ಶಾಶ್ವತ ವಿಳಾಸ ಮತ್ತು ಜನ್ಮ ದಿನಾಂಕ ಸೇರಿ ಪ್ರಮುಖ ವಿವರಗಳನ್ನು ನಮೂದಿಸಲಾಗಿರುತ್ತದೆ. ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ನೀಡಲಾಗಿದೆ.
ಸಾಮಾನ್ಯವಾಗಿ ಆಧಾರ್ ಕಾರ್ಡ್ಗಳು ಬಿಳಿ ಬಣ್ಣದಲ್ಲಿರುತ್ತವೆ. ಆದರೆ ನೀಲಿ ಬಣ್ಣದ ಆಧಾರ್ ಕಾರ್ಡ್ ಬಗ್ಗೆ ನಿಮ್ಗೆ ತಿಳಿದಿದೆಯೇ...? ಹಾಗಾದ್ರೆ ಈ ನೀಲಿ ಆಧಾರ್ ಕಾರ್ಡ್ ಎಂದರೇನು..? ಇದರ ವಿಶೇಷತೆಗಳೇನೂ ಎಂಬುದನ್ನ ತಿಳಿದುಕೊಳ್ಳಬೇಕಿದೆ.. ಈ ವಿಶೇಷ ಆದಾರ್ ಕಾರ್ಡನ್ನು ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸರ್ಕಾರ ನೀಡುತ್ತಿದೆ. ಇದರ ಬಣ್ಣ ನೀಲಿಯಾಗಿದ್ದು, ಇದೇ ಕಾರಣಕ್ಕೆ ನೀಲಿ ಆಧಾರ್ ಕಾರ್ಡ್ ಎಂದು ಹೆಸರಿಸಲಾಗಿದೆ.
ಇದನ್ನು ಓದಿ :ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.!
ಮಕ್ಕಳಿಗೆ ಕಾರ್ಡ್ ನೀಡಲು ಹಿರಿಯರಂತೆ ಬಯೋಮೆಟ್ರಿಕ್ ಅಗತ್ಯವಿಲ್ಲ. ಬದಲಿಯಾಗಿ UID ಗೆ ಲಿಂಕ್ ಮಾಡಲಾದ ಪೋಷಕರ ಮಾಹಿತಿ ಮತ್ತು ಭಾವಚಿತ್ರ ಆಧರಿಸಿ UID ನೀಡಲಾಗುತ್ತದೆ. ಮಗುವಿಗೆ ಹದಿನೈದು ವರ್ಷವಾದಾಗ ಬಯೋಮೆಟ್ರಿಕ್ ಡೇಟಾ ಅಪ್ಡೇಟ್, ಐರಿಸ್ ಸ್ಕ್ಯಾನ್ ಮತ್ತು ಭಾವಚಿತ್ರಗಳು ಅಗತ್ಯವಿದೆ.
ಇದನ್ನು ಓದಿ : ನಟ ವಿಜಯ್ ಅವರನ್ನು ರಾಜಕೀಯಕ್ಕೆ ಬರುವಂತೆ ಹೇಳಿದ್ದೆ : ಕಮಲ್ ಹಾಸನ್
ಅರ್ಜಿ ಸಲ್ಲಿಸಬಹುದು ಹೇಗೆ?
ಪೋಷಕರು ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಡಾಕ್ಯೂಮೆಂಟ್ ಬಳಸಿಕೊಂಡು ಬಾಲ ಆಧಾರ್ಗಾಗಿ ಅರ್ಜಿ ಸಲ್ಲಿಸಬಹುದು.
• UIDAI ವೆಬ್ಸೈಟ್ uidai.gov.in ಓಪನ್ ಮಾಡಿ.
• ಆಧಾರ್ ಕಾರ್ಡ್ ನೋಂದಣಿ ಆಯ್ಕೆಗೆ ಮಾಡಿ
• ಮಗುವಿನ ಹೆಸರು, ಪೋಷಕರ ಮೊಬೈಲ್ ನಂಬರ್ ಮತ್ತು ಅಗತ್ಯವಿರುವ ಮಾಹಿತಿಯನ್ನು ನೀಡಿ.
• ನೀಲಿ ಆಧಾರ್ ಕಾರ್ಡ್ ನೋಂದಣಿಗಾಗಿ ಅಪಾಯಿಂಟ್ಮೆಂಟ್ ಸ್ಲಾಟ್ ಮೇಲೆ ಕ್ಲಿಕ್ ಮಾಡಿ. .
• ಹತ್ತಿರದ ದಾಖಲಾತಿ ಕೇಂದ್ರದಲ್ಲಿ ಸಮಯ ಪಡೆದುಕೊಳ್ಳಿ
• ನಿಮ್ಮ ಆಧಾರ್ ಕಾರ್ಡ್, ವಿಳಾಸದ ಪುರಾವೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಸೇರಿದ ಅಗತ್ಯ ದಾಖಲೆಗಳೊಂದಿಗೆ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.
• ಮಗುವಿನ ಭಾವಚಿತ್ರ ಮಾತ್ರ ಅಗತ್ಯವಿದ್ದು, ಬಯೋಮೆಟ್ರಿಕ್ ಅಗತ್ಯವಿಲ್ಲ.
• ಪ್ರಕ್ರಿಯೆ ಪೂರ್ಣವಾದ ಬಳಿಕ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.