Sky Football Stadium Viral Video: ತಮ್ಮ ದೇಶದಲ್ಲಿನ ಮೂಲಸೌಕರ್ಯಗಳನ್ನು ವಿಶೇಷವಾಗಿಸಲು ಮತ್ತು ಹೆಚ್ಚಿಸಲು ಸತತ ಪ್ರಯತ್ನ ಮಾಡುವ ಹಲವಾರು ದೇಶಗಳು ಈ ವಿಶ್ವದಲ್ಲಿವೆ. ಇದೆ ಕಾರಣದಿಂದ ಈ ಖ್ಯಾತನಾಮ ಕೆಲ ದೇಶಗಳಿವೆ ಜನರ ಗಮನವನ್ನು ಹೇಗೆ ಸೆಳೆಯುವುದು ಎಂಬುದು ಚೆನ್ನಾಗಿ ತಿಳಿದಿದೆ. ಅಂತಹ ಒಂದು ದೇಶದ ಸುದ್ದಿ ಭಾರಿ ವೈರಲ್ ಆಗುತ್ತಿದ್ದು, ಅದರ ಅದ್ಭುತ ಮೂಲಸೌಕರ್ಯದಿಂದಾಗಿ ಸಾಕಷ್ಟು ಹೆಡ್ಲೈನ್ ಗಿಟ್ಟಿಸಿದೇ. ಇತ್ತೀಚೆಗೆ, ಈ ದೇಶವು ಫುಟ್ಬಾಲ್ ಮೈದಾನವನ್ನು ನಿರ್ಮಿಸಿದ್ದು, ಅದನ್ನು ನೋಡಿ ನಿಮ್ಮ ಸ್ವಂತ ಕಣ್ಣುಗಳ ಮೇಲೆ ನಿಮ್ಮ ನಂಬಿಕೆಯೇ ಹೊರಟು ಹೋಗುವಂತಿದೆ(Viral News In Kannada)
ಇದನ್ನೂ ಓದಿ-Viral Video: ನಡು ರಸ್ತೆಯಲ್ಲಿಯೇ ರೊಚ್ಚಿಗೆದ್ದು ಸ್ಕೂಟರ್ ಸವಾರನನ್ನು ಗಾಳಿಗೆ ತೂರಿದ ಎಮ್ಮೆ... ವಿಡಿಯೋ ನೋಡಿ!
ಆಗಸದಲ್ಲಿ ನಿರ್ಮಾಣಗೊಂಡ ಫುಟ್ಬಾಲ್ ಮೈದಾನ
ವೈರಲ್ ಆಗುತ್ತಿರುವ ಈ ವೀಡಿಯೋ ಚೀನಾದ ಝೆಜಿಯಾಂಗ್‌ನಿಂದ ಹೊರಹೊಮ್ಮಿದೆ ಎಂದು ಹೇಳಲಾಗಿದ್ದು, ಇದನ್ನು ನೋಡಿ ನಿಮಗೂ ಆಶ್ಚರ್ಯವಾಗಬಹುದು. ನೀವು ವೀಡಿಯೊದಲ್ಲಿ ಫುಟ್ಬಾಲ್ ಮೈದಾನವೊಂದನ್ನು ನೋಡಬಹುದು. ಅಚ್ಚರಿಯ ಸಂಗತಿ ಎಂದರೆ ವಿಡಿಯೋದಲ್ಲಿ ಕಾಣುವ ಈ ಮೈದಾನ ನೆಲದ ಮೇಲೆ ನಿರ್ಮಾಣವಾಗಿಲ್ಲ, ಆಕಾಶದಲ್ಲಿ ನಿರ್ಮಾಣವಾಗಿದೆ. ಎರಡು ಪರ್ವತಗಳ ನಡುವೆ ಉಳಿದಿರುವ ಜಾಗದಲ್ಲಿ ನೆಟ್ ಸಹಾಯದಿಂದ ಈ ಮೈದಾನವನ್ನು ನಿರ್ಮಿಸಲಾಗಿದೆ, ಅದರ ಮೇಲೆ ಕೆಲವರು ಖುಷಿಯಿಂದ ಆಟವಾಡುತ್ತಿರುವುದನ್ನು ಸಹ ನೀವು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ-Viral Video: ತಂತ್ರಜ್ಞಾನದ ಸರಿಯಾದ ಬಳಕೆ ಅಂದ್ರೆ ಇದಪ್ಪ! ಇಲ್ಲಿ ಡ್ರೋನ್ ಮೂಲಕ ಕಾಫಿ ಸರ್ವ್ ಮಾಡಲಾಗುತ್ತೆ
ಜನರ ಪ್ರತಿಕ್ರಿಯೆ ಹೇಗಿದೆ?
ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ X ನಲ್ಲಿ @gunsnrosesgirl3 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕೇವಲ 10 ಸೆಕೆಂಡ್ ಗಳ ಈ ವಿಡಿಯೋವನ್ನು ಇದುವರೆಗೆ 2 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬಳಕೆದಾರರು ವೀಡಿಯೊಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ವಾಹ್, ವಾಟ್ ಎ ಗೇಮ್' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರ, 'ನನಗೆ ಇದನ್ನು ಮಾಡಲು ಧೈರ್ಯವಿಲ್ಲ' ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು, 'ಅವರು ಬಿದ್ದರೆ ಏನು?' ಎಂದು ಪ್ರಶ್ನಿಸಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ
Playing football in the sky, Zhejiang China
📹mychinatrip
pic.twitter.com/36ivYq1Fcu— Science girl (@gunsnrosesgirl3) February 21, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.