Akay Kohli AI Photo Viral: ವಿರುಷ್ಕಾ ದಂಪತಿಯ ಮಗ ಆಕಾಯ್ ನ ಎಐ ರಚಿತ ಚಿತ್ರ ಭಾರಿ ವೈರಲ್!

Viral Photo: ವಿರುಷ್ಕಾ ದಂಪತಿಗೆ ಪುತ್ರ ರತ್ನ ಜನಿಸಿದ್ದಾನೆ ಎಂಬ ಸುದ್ದಿ ತಿಳಿಯುತ್ತಲೆ, ಇಬ್ಬರ ಅಭಿಮಾನಿಗಳ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ. ಇದೀಗ ಜ್ಯೂನಿಯರ್ ಕೊಹ್ಲಿಯ ಎಐ-ನಿರ್ಮಿತ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ (Viral News In Kannada)  

Written by - Nitin Tabib | Last Updated : Feb 23, 2024, 05:19 PM IST
  • ಪೋಸ್ಟ್ ಅನ್ನು 13 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಅನೇಕ ಲೈಕ್‌ಗಳನ್ನು ಪಡೆದುಕೊಂಡಿದೆ.
  • ಅನುಷ್ಕಾ ಮತ್ತು ವಿರಾಟ್ ಅವರ ಅಭಿಮಾನಿಗಳಿಂದ ಈ ಪೋಸ್ಟ್‌ಗೆ ಕಾಮೆಂಟ್‌ಗಳ ಮಹಾಪೂರವನ್ನೇ ಹರಿದುಬರುತ್ತಿದೆ.
  • ಆಕಾಯ್ ನನ್ನು ಅನುಷ್ಕಾ ಮುಖವನ್ನು ಹೋಲುವಂತೆ ರಚಿಸಲಾಗಿಲ್ಲ ಎಂದು ಕೆಲ ಅನುಷ್ಕಾ ಅಭಿಮಾನಿಗಳು ಅಸಮಾಧಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
Akay Kohli AI Photo Viral: ವಿರುಷ್ಕಾ ದಂಪತಿಯ ಮಗ ಆಕಾಯ್ ನ ಎಐ ರಚಿತ ಚಿತ್ರ ಭಾರಿ ವೈರಲ್! title=

Viral Photo: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಂಗಳವಾರ ತಮಗೆ ಎರಡನೇ ಪುತ್ರರತ್ನ ಜನಿಸಿದ್ದಾನೆ ಎಂದು ಘೋಷಿಸಿದ್ದಾರೆ. ದಂಪತಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪೋಸ್ಟ್ ಹಂಚಿಕೊಂಡು, ಫೆಬ್ರವರಿ 15 ರಂದು ತಮಗೆ ಎರಡನೇ ಮಗು ಜನಿಸಿರುವುದಾಗಿ ತಿಳಿಸಿದ್ದಾರೆ. ಈ ಸುದ್ದಿ ಪ್ರಕಟಗೊಂದಾಗಿನಿಂದ, ಇಬ್ಬರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ ಮತ್ತು ಜೂನಿಯರ್ ಕೊಹ್ಲಿಯ ಎಐ- ರಚಿತ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಎಐ-ರಚಿತ ಚಿತ್ರಗಳ ಸರಣಿಯೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದೀಗ ಜನರ ಗಮನ ಸೆಳೆದಿದೆ. ಒಬ್ಬ ಎಕ್ಸ್ ಬಳಕೆದಾರರು Postost ನಿಂದ ರಚಿತ Akay ಅವನ ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ ಮತ್ತು "ಎಐ- ರಚಿತ Akay ಕೊಹ್ಲಿಯ ಕಾಲ್ಪನಿಕ ಚಿತ್ರ" ಎಂದು ಬರೆದಿದ್ದಾರೆ. ಕೊಲಾಜ್ ನಾಲ್ಕು ವಿಭಿನ್ನ ಉಡುಗೆಗಳಲ್ಲಿ 'ಕಾಲ್ಪನಿಕ' ಆಕಾಯ್ ನ ನಗುತ್ತಿರುವ ಮುಖಗಳನ್ನು ತೋರಿಸುತ್ತಿದೆ.

ಇದನ್ನೂ ಓದಿ-Viral Video: ಆನೆಯೊಂದಿಗೆ ಫ್ರೆಂಡ್ಲಿ ಆಗಲು ಹೋದ ಯುವತಿ, ನಂತರ ನಡೆದಿದ್ದು ಆಕೆ ಲೈಫಲ್ಲೆ ಮರೆಯಲ್ಲ!

ಪೋಸ್ಟ್ ಅನ್ನು 13 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಅನೇಕ ಲೈಕ್‌ಗಳನ್ನು ಪಡೆದುಕೊಂಡಿದೆ. ಅನುಷ್ಕಾ ಮತ್ತು ವಿರಾಟ್ ಅವರ ಅಭಿಮಾನಿಗಳಿಂದ ಈ ಪೋಸ್ಟ್‌ಗೆ ಕಾಮೆಂಟ್‌ಗಳ ಮಹಾಪೂರವನ್ನೇ ಹರಿದುಬರುತ್ತಿದೆ. ಆಕಾಯ್ ನನ್ನು  ಅನುಷ್ಕಾ ಮುಖವನ್ನು ಹೋಲುವಂತೆ ರಚಿಸಲಾಗಿಲ್ಲ ಎಂದು ಕೆಲ ಅನುಷ್ಕಾ ಅಭಿಮಾನಿಗಳು ಅಸಮಾಧಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊರ್ವ ಬಳಕೆದಾರರು, “ಅನುಷ್ಕಾಳಂತೆ ಯಾವುದೇ ವೈಶಿಷ್ಟ್ಯವಿಲ್ಲವೇ?? ಯಾಕೆ ಹೀಗೆ?" ಎಂದು ಪ್ರಶ್ನಿಸಿದ್ದಾರೆ.  "ನಂಬಿ ಅಥವಾ ನಂಬದೇ, ಎಐ ತುಂಬಾ ಕೆಟ್ಟದಾಗಿದೆ" ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು "ಮುದ್ದಾಗಿದೆ" ಎಂದು ಬರೆದಿದ್ದಾರೆ

ಇದನ್ನೂ ಓದಿ-Viral Video: ರೀಲ್ ತಯಾರಿಸುವ ನಶೆಯಲ್ಲಿ ಪ್ರಾಣ ಪಣಕ್ಕಿಟ್ಟ ಯುವತಿ, ವಿಚಿತ್ರ ವರ್ತನೆ ಕಂಡು ನೆಟ್ಟಿಗರ ಪಿತ್ತ ನೆತ್ತಿಗೆರಿದೆ!

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಂಗಳವಾರ ಪೋಸ್ಟ್ ಹಂಚಿಕೊಂಡು ಈ ಸುದ್ದಿ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸುತ್ತಾ, ಬರೆದುಕೊಂಡ ಅವರು, “ಅಪಾರವಾದ ಸಂತೋಷ ಮತ್ತು ಪ್ರೀತಿಯಿಂದ ತುಂಬಿದ ಹೃದಯದಿಂದ, ಫೆಬ್ರವರಿ 15 ರಂದು ನಾವು ನಮ್ಮ ಮಗು ಆಕಯ್ ಮತ್ತು ವಾಮಿಕಾ ಅವರ ಚಿಕ್ಕ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಹಂಚಿಕೊಳ್ಳಲು ನಾವೆಲ್ಲರೂ ಸಂತೋಷಪಡುತ್ತೇವೆ. ಸ್ವಾಗತ! ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ. ವಿರಾಟ್ ಮತ್ತು ಅನುಷ್ಕಾ" ಎಂದು ಹೇಳಿದ್ದರು.

ಇಲ್ಲಿವೆ ಆ ವೈರಲ್ ಫೋಟೋಗಳು

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News