BMRCL : ತುಮಕೂರಿಗೆ ಕಾಲಿಡಲಿರುವ ನಮ್ಮ ಮೆಟ್ರೋ : ಹೊಸ ಅಪಡೇಟ್ ನೀಡಿದ ಬಿಎಂಆರ್ ಸಿಎಲ್

BMRCL : ಬೆಂಗಳೂರು ಮೆಟ್ರೋ ರೈಲನ್ನು ತುಮಕೂರು ವರೆಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಹೊಸ ಅಪಡೇಟ್ ಒಂದನ್ನು ನೀಡಿದೆ.  

Written by - Zee Kannada News Desk | Last Updated : Mar 1, 2024, 05:38 PM IST
  • ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ (PPP) ಮಾದರಿಯಡಿಯಲ್ಲಿ ಬಿಡ್ ಆಹ್ವಾನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ ಎಂದು ವರದಿಯಾಗಿದೆ.
  • ಮಾದಾವರ (ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ)ದಿಂದ ಕುಣಿಗಲ್ ಕ್ರಾಸ್ ವರೆಗೆ 11 ಕಿ.ಮೀ ದೂರದವರೆಗೆ ಹಸಿರು ಮಾರ್ಗವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಆರಂಭದಲ್ಲಿ ಯೋಜಿಸಿತ್ತು.
  • ಬೆಂಗಳೂರು ಜನರ ಸಂಚಾರಿ ಒಡನಾಡಿಯಾಗಿರುವ ನಮ್ಮ ಮೆಟ್ರೋ ಸದ್ಯದಲ್ಲೇ ತುಮಕೂರು ಜಿಲ್ಲೆಯವರೆಗೂ ವಿಸ್ತಾರವಾಗುತ್ತಿರುವುದು
BMRCL : ತುಮಕೂರಿಗೆ ಕಾಲಿಡಲಿರುವ ನಮ್ಮ ಮೆಟ್ರೋ : ಹೊಸ ಅಪಡೇಟ್ ನೀಡಿದ ಬಿಎಂಆರ್ ಸಿಎಲ್ title=

Metro to reach Tumkur : ಬೆಂಗಳೂರು ಜನರ ಸಂಚಾರಿ ಒಡನಾಡಿಯಾಗಿರುವ ನಮ್ಮ ಮೆಟ್ರೋ ಸದ್ಯದಲ್ಲೇ ತುಮಕೂರು ಜಿಲ್ಲೆಯವರೆಗೂ ವಿಸ್ತಾರವಾಗುತ್ತಿರುವುದು ಕಲ್ಪತರು ನಾಡಿಗೆ ಸಂತಸದ ಸುದ್ದಿಯಾಗಿದೆ. ಇದೀಗ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೊದಲ ಹೆಜ್ಜೆ ಇಟ್ಟಿದೆ.

ಉತ್ತರ ಬೆಂಗಳೂರಿನ ಮಾದಾವರದಿಂದ ತುಮಕೂರಿನವರೆಗೆ 52.41 ಕಿ.ಮೀ ಉದ್ದದ ಮೆಟ್ರೋ ಮಾರ್ಗದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಎಂಆರ್‌ಸಿಎಲ್ ಬಿಡ್‌ಗಳನ್ನು ಆಹ್ವಾನಿಸಿದ್ದು,  ಈ ಮೂಲಕ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು ಸಂಚಾರ ಆರಂಭವನ್ನು ನಿರೀಕ್ಷಿಸುತ್ತಿರುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ನಿಂದ ಹೊಸ ಅಪ್ಡೇಟ್‌ ಸಿಕ್ಕಿದೆ.

ಇದನ್ನು ಓದಿ : ISRO: ಭಾರತದ ಬಾಹ್ಯಾಕಾಶ ವ್ಯಾಪ್ತಿಯನ್ನು ಹೆಚ್ಚಿಸುತ್ತಿವೆ ಶ್ರೀಹರಿಕೋಟಾ ಮತ್ತು ಕುಲಶೇಕರಪಟ್ಟಿನಂ

ಟೆಂಡರ್ ದಾಖಲೆಯನ್ನು ಇಂದಿನಿಂದ (ಮಾರ್ಚ್ 1) ಡೌನ್‌ಲೋಡ್ ಮಾಡಬಹುದಾಗಿದ್ದು, ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 2 ಆಗಿದೆ ಮತ್ತು  ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ (PPP) ಮಾದರಿಯಡಿಯಲ್ಲಿ ಬಿಡ್ ಆಹ್ವಾನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ವೇಳೆ ತುಮಕೂರು ಜಿಲ್ಲೆಗೆ ಮೆಟ್ರೋ ವಿಸ್ತರಿಸುವ ಬಗ್ಗೆ ತಿಳಿಸಿದ್ದರು. ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಮಾರ್ಗಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.ಕಳೆದ ವಾರವಷ್ಟೇ ಬಿಎಂಆರ್​ಸಿಎಲ್ ಮೆಟ್ರೋ ಜಾಲಕ್ಕೆ 118 ಕಿಮೀ ಸೇರಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಡ್‌ಗಳನ್ನು ಆಹ್ವಾನಿಸಿತ್ತು.

ಇದನ್ನು ಓದಿ  : ಎಪ್ಪೋ! ಅಂಬಾನಿ ಮದುವೆಯಲ್ಲಿ ಕಾರ್ಯಕ್ರಮ ನೀಡಲು ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ!

ಮಾದಾವರ (ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ)ದಿಂದ ಕುಣಿಗಲ್ ಕ್ರಾಸ್ ವರೆಗೆ 11 ಕಿ.ಮೀ ದೂರದವರೆಗೆ ಹಸಿರು ಮಾರ್ಗವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಆರಂಭದಲ್ಲಿ ಯೋಜಿಸಿತ್ತು.ಆದರೆ ಸಚಿವ ಗೃಹ ಸಚಿವ ಜಿ.ಪರಮೇಶ್ವರ್‌ ತಮ್ಮ ತವರು ಜಿಲ್ಲೆ ತುಮಕೂರಿಗೆ ಮೆಟ್ರೋ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ತುಮಕೂರಿಗೆ ಮೆಟ್ರೋವನ್ನು ವಿಸ್ತರಿಸುವುದರಿಂದ ಬೆಂಗಳೂರಿನ ಮೇಲಿನ ಹೊರೆ ಕಡಿಮೆಯಾಗುತ್ತದೆ. ಹಾಗೂ ಖಾಸಗಿ ಕಂಪನಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಮುಂದಾಗುತ್ತವೆ ಎಂದು ವಿವರಿಸಿದ್ದರು. ಹೀಗಾಗಿ ನಮ್ಮ ಮೆಟ್ರೋ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರವರೆಗೆ ವಿಸ್ತರಿಸುವ ಸಾಧ್ಯತೆ ಇದೆ  ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News