7th Pay Commission Latest News : ಕೇಂದ್ರ ಸರ್ಕಾರ ತನ್ನ ನೌಕರರಿಗೆ ಏಕಕಾಲದಲ್ಲಿ ಎರಡು ದೊಡ್ಡ ಉಡುಗೊರೆಗಳನ್ನು ನೀಡಲು ಹೊರಟಿದೆ. ಬಾಕಿ ಉಳಿದಿರುವ ಡಿಎ ಬಾಕಿ ಜೊತೆಗೆ ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸಲಿದ್ದು, ಸರ್ಕಾರಿ ನೌಕರರ ಮನವೊಲಿಸುವ ಪ್ರಯತ್ನದಲ್ಲಿದೆ.
ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಕೆಲ ದಿನಗಳ ಹಿಂದೆ ಸರ್ಕಾರ ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು ಶೇ.4ರಷ್ಟು ಹೆಚ್ಚಿಸಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ. ಇದಾದ ನಂತರ ಇದೀಗ ಜನವರಿಯ ತುಟ್ಟಿಭತ್ಯೆ ಹೆಚ್ಚಳ ಈ ತಿಂಗಳಲ್ಲಿಯೇ ಘೋಷಣೆಯಾಗಲಿದೆ.
ಇದನ್ನೂ ಓದಿ : ಪ್ರತಿ ಬಾರಿ ಮನೆಗೆ LPG Gas Cylinder ಮನೆಗೆ ಬಂದಾಗ ಈ ಸಂಖ್ಯೆ ಖಂಡಿತ ಪರಿಶೀಲಿಸಿ, ಕಾರಣ ಇಲ್ಲಿದೆ!
ಮತ್ತೊಂದೆಡೆ, ಡಿಎ ಬಾಕಿ ಮತ್ತು ಫಿಟ್ಮೆಂಟ್ ಅಂಶದ ಹೆಚ್ಚಳವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಡಿಎ ಬಾಕಿ ಮತ್ತು ಫಿಟ್ಮೆಂಟ್ ಅಂಶದ ಹೆಚ್ಚಳದ ಬಗ್ಗೆಯೂ ಶೀಘ್ರವೇ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬಾಕಿ ಉಳಿದಿರುವ ಡಿಎ ಬಾಕಿ ಶೀಘ್ರದಲ್ಲೇ ಖಾತೆಗೆ ಜಮಾ :
ಕೇಂದ್ರದ ಮೋದಿ ಸರ್ಕಾರ ಡಿಎ ಬಾಕಿ ಹಣವನ್ನು ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಜಮಾ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ಅವಧಿಯಲ್ಲಿ ಸರ್ಕಾರ 18 ತಿಂಗಳ ಡಿಎಯನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿತ್ತು.
ಅಂದಿನಿಂದ ಕೇಂದ್ರ ನೌಕರರು ಬಾಕಿ ಉಳಿಸಿಕೊಂಡಿರುವ ಡಿಎ ಹಣವನ್ನು ಪಾವತಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಒಂದು ವೇಳೆ ಬಾಕಿ ಡಿಎಯನ್ನು ಸರ್ಕಾರ ನೌಕರರ ಖಾತೆಗೆ ವರ್ಗಾಯಿಸಿದರೆ ಉನ್ನತ ಮಟ್ಟದ ನೌಕರರು ಸುಮಾರು 2 ಲಕ್ಷ 18 ಸಾವಿರ ರೂ. ಪಡೆಯುತ್ತಾರೆ.
ಇದನ್ನೂ ಓದಿ : Home loan Subsidy : ಗೃಹ ಸಾಲ ಪಡೆಯುವವರಿಗೆ ಸರ್ಕಾರದಿಂದ ಬಿಗ್ ಗಿಫ್ಟ್ : ಮಧ್ಯಮ ವರ್ಗಕ್ಕೆ ಹೆಚ್ಚು ಲಾಭ !
ಫಿಟ್ಮೆಂಟ್ ಅಂಶವು ಈ ಪ್ರಮಾಣದಲ್ಲಿ ಹೆಚ್ಚಾಗುತ್ತದೆ :
ಕೇಂದ್ರ ಸರ್ಕಾರವು ನೌಕರರ ಫಿಟ್ಮೆಂಟ್ ಅಂಶವನ್ನು ಗಣನೀಯವಾಗಿ ಹೆಚ್ಚಿಸಲಿದ್ದು, ಕನಿಷ್ಠ ಮೂಲ ವೇತನದಲ್ಲಿಯೂ ಗಣನೀಯ ಏರಿಕೆಯಾಗಲಿದೆ. ಫಿಟ್ಮೆಂಟ್ ಅಂಶವು 2.60 ರಿಂದ 3.0 ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಕೆಲವು ವರದಿಗಳ ಪ್ರಕಾರ, ಲೋಕಸಭೆ ಚುನಾವಣೆಗೆ ಮುನ್ನ ಸರ್ಕಾರ ಫಿಟ್ಮೆಂಟ್ ಅಂಶವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.