/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

PM Surya Ghar Muft Bijli Yojana 2024: ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗಷ್ಟೇ ಅನುಮೋದನೆ ನೀಡಿದೆ. ತನ್ಮೂಲಕ ದೇಶದ ಕೋಟ್ಯಾಂತರ ಮನೆಗಳ ಮೇಲೆ ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸಲು ಸಬ್ಸಿಡಿ ಮತ್ತು 300 ಯೂನಿಟ್ ಉಚಿತ ವಿದ್ಯುತ್ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಯೋಜನೆ ಏನು ಮತ್ತು ರೂಫ್ ಟಾಪ್ ಸೋಲಾರ್ ಯೋಜನೆಯಡಿ (Roof Top Solar Scheme) ನೀವು ಸಬ್ಸಿಡಿಗಾಗಿ ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ನೀವು ಸಬ್ಸಿಡಿಯನ್ನು ಹೇಗೆ ಸಿಗುತ್ತದೆ ಎಂಬುದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ,  (Business News In Kannada)

ಏನಿದು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ?
ದೇಶದ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲು ಮನೆಯ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಯೇ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಾಗಿದೆ. ಘಟಕ ಒಂದೊಮ್ಮೆ ಸ್ಥಾಪನೆಯಾದ ಬಳಿಕ ಅಂತಹ ಕುಟುಂಬಗಳಿಗೆ 300 ಯೂನಿಟ್ ಗಳ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಇದಕ್ಕಾಗಿ ಸರ್ಕಾರ 75 ಸಾವಿರ ಕೋಟಿ ಹಣವನ್ನು ಮೀಸಲಿರಿಸಿದೆ. 

ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಈ ಯೋಜನೆಯು 2 kW ಸಾಮರ್ಥ್ಯದವರೆಗಿನ ವ್ಯವಸ್ಥೆಗಳಿಗೆ ಸೌರ ಘಟಕದ ವೆಚ್ಚದ ಶೇ. 60 ರಷ್ಟು ಮತ್ತು 2 ರಿಂದ 3 kW ಸಾಮರ್ಥ್ಯದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ ಶೇ 40 ರಷ್ಟು ಸಬ್ಸಿಡಿ ಖಚಿತಪಡಿಸುತ್ತದೆ. ಈ ಸಬ್ಸಿಡಿಯನ್ನು 3 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ಸೀಮಿತಗೊಳಿಸಲಾಗಿದೆ. ಪ್ರಸ್ತುತ ಸಾಮರ್ಥ್ಯದ ಆದಾರದ ಮೇಲೆ ಈ ಸಬ್ಸಿಡಿ ನೀಡಲಾಗುತ್ತದೆ. ಅರ್ಥಾತ್ 1 kW ಸಿಸ್ಟಮ್‌ಗೆ ರೂ 30,000, 2 kW ಸಿಸ್ಟಮ್‌ಗೆ ರೂ 60,000 ಮತ್ತು 3 kW ಅಥವಾ ಹೆಚ್ಚಿನ ಸಿಸ್ಟಮ್‌ಗೆ ರೂ 78,000 ಸಬ್ಸಿಡಿ ನಿಗದಿಪಡಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
1. ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
2. ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಛಾವಣಿ ಇರಬೇಕು.
3. ಕುಟುಂಬವು ಮಾನ್ಯವಾದ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.
4. ಕುಟುಂಬವು ಸೌರ ಫಲಕಗಳಿಗೆ ಯಾವುದೇ ಇತರ ಸಬ್ಸಿಡಿಯನ್ನು ಹೊಂದಿರಬಾರದು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How To Submit Online Application For PM Surya Ghar Muft Bijli Yojana)
ಮೊದಲನೆಯದಾಗಿ, ಆಸಕ್ತ ಗ್ರಾಹಕರು ರಾಷ್ಟ್ರೀಯ ಪೋರ್ಟಲ್ www.pmsuryagarh.gov.in ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದರಲ್ಲಿ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಸೂಕ್ತವಾದ ಸಿಸ್ಟಮ್ ಗಾತ್ರ, ಲಾಭದ ಲೆಕ್ಕಾಚಾರ, ಮಾರಾಟಗಾರರ ರೇಟಿಂಗ್ ಇತ್ಯಾದಿಗಳಂತಹ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ರಾಷ್ಟ್ರೀಯ ಪೋರ್ಟಲ್ ಆಸಕ್ತ ಕುಟುಂಬಗಳಿಗೆ ಸಹಾಯ ಮಾಡುತ್ತದೆ. ಗ್ರಾಹಕರು ತಮ್ಮ ಮೇಲ್ಛಾವಣಿಯ ಮೇಲೆ ಸ್ಥಾಪಿಸಲು ಬಯಸುವ ಮಾರಾಟಗಾರ ಮತ್ತು ರೂಫ್ ಟಾಪ್ ಸೌರ ಘಟಕವನ್ನು ಆಯ್ಕೆ ಮಾಡಬಹುದು.

ಸೌರ ಘಟಕವನ್ನು ಸ್ಥಾಪಿಸಲು ಗ್ರಾಹಕರು ಸಾಲ ಸೌಲಭ್ಯವನ್ನು ಪಡೆಯಬಹುದೇ?
ಹೌದು, ಒಂದು ಕುಟುಂಬವು ಪ್ರಸ್ತುತ ಶೇಕಡಾ 7 ರಷ್ಟು ಯಾವುದೇ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿ ದರದಲ್ಲಿ 3 kW ವರೆಗೆ ವಸತಿ RTS ವ್ಯವಸ್ಥೆಯನ್ನು ಸ್ಥಾಪಿಸಲು ಸಾಲವನ್ನು ಪಡೆದುಕೊಳ್ಳಬಹುದು. ಈ ಬಡ್ಡಿದರವು ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ನಿರ್ಧರಿಸುವ ರೆಪೋ ದರಕ್ಕಿಂತ 0.5 ಶೇಕಡಾ ಹೆಚ್ಚಾಗಿದೆ. ಪ್ರಸ್ತುತ ಶೇಕಡಾ 6.5 ರಷ್ಟಿರುವ ರೆಪೋ ದರವನ್ನು ಶೇಕಡಾ 5.5 ಕ್ಕೆ ಇಳಿಸಲಾಗಿದೆ, ಗ್ರಾಹಕರಿಗೆ ಪರಿಣಾಮಕಾರಿ ಬಡ್ಡಿದರವು ಪ್ರಸ್ತುತ ಶೇ.7 ರ ಬದಲಿಗೆ ಶೇ. 6 ರಷ್ಟಿದೆ. 

ಸಬ್ಸಿಡಿ ಪಡೆಯಲು ಹಂತ ಹಂತದ ಪ್ರಕ್ರಿಯೆ ಏನು?
ಹಂತ 1

ಪೋರ್ಟಲ್‌ನಲ್ಲಿ ಹೆಸರನ್ನು ನೊಂದಾಯಿಸಿ
ನಿಮ್ಮ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆಮಾಡಿ
ನಿಮ್ಮ ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನಮೂದಿಸಿ.

 ಹಂತ 2
ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ
ಫಾರ್ಮ್ ಪ್ರಕಾರ ಮೇಲ್ಛಾವಣಿಯ ಸೌರಕ್ಕಾಗಿ ಅರ್ಜಿ ಸಲ್ಲಿಸಿ

ಹಂತ 3
NOC ಸ್ವೀಕರಿಸಿದ ನಂತರ, ಯಾವುದೇ ನೋಂದಾಯಿತ ಮಾರಾಟಗಾರರಿಂದ ಪ್ಲಾಂಟ್ ಇನ್ಸ್ಟಾಲ್ ಮಾಡಿಸಿಕೊಳ್ಳಿ. 

ಹಂತ 4
ಪ್ಲಾಂಟ್ ಅಳವಡಿಸಿದ ಬಳಿಕ, ಪ್ಲಾಂಟ್ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್ಗಾಗಿ ಅರ್ಜಿ ಸಲ್ಲಿಸಿ.

ಹಂತ-5
ನೆಟ್ ಮೀಟರ್ ಅನ್ನು ಇನ್ಸ್ಟಾಲ್ ಆದ ಬಳಿಕ ಮತ್ತು ವಿತರಣಾ ಕಂಪನಿ ಪರಿಶೀಲನೆಯ ಬಳಿಕ, ಪೋರ್ಟಲ್‌ನಿಂದ ಕಮಿಷನಿಂಗ್ ಪ್ರಮಾಣಪತ್ರವನ್ನು ರಚಿಸಲಾಗುತ್ತದೆ.

ಹಂತ-6
ಒಂದೊಮ್ಮೆ ಕಮಿಷನಿಂಗ್ ರಿಪೋರ್ಟ್ ಬಂದ ಬಳಿಕ,  ಪೋರ್ಟಲ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು ರದ್ದುಪಡಿಸಿದ ಚೆಕ್ ಅನ್ನು ಸಲ್ಲಿಸಬೇಕು. 30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಸಬ್ಸಿಡಿ ನೇರ ವರ್ಗಾವಣೆ ಮೂಲಕ ಬರುತ್ತದೆ. 

ಇದನ್ನೂ ಓದಿ-Paytm ಸಂಕಷ್ಟದ ನಡುವೆ UPI ಹ್ಯಾಂಡಲ್ ಬಿಡುಗಡೆ ಮಾಡಿದ Flipkart! ಹೇಗೆ ಕಾರ್ಯನಿರ್ವಹಿಸುತ್ತೆ ಇಲ್ಲಿ ತಿಳಿಯಿರಿ!

ಕುಟುಂಬಕ್ಕೆ ಈ ಯೋಜನೆಯ ಲಾಭಗಳೇನು? 
ಮೊದಲನೆಯದಾಗಿ ಕುಟುಂಬಗಳು ಈ ಯೋಜನೆಯಿಂದ ತಮ್ಮ ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡಬಹುದು ಮತ್ತು ಇದೆ ವೇಳೆ ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್‌ಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು 3 kW ಸಾಮರ್ಥ್ಯದ ಮೇಲ್ಛಾವಣಿ ಸೌರ ಘಟಕವನ್ನು ಸ್ಥಾಪಿಸುವ ಮೂಲಕ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುತ್ತದೆ. ಒಂದು ವರ್ಷದಲ್ಲಿ ಸುಮಾರು 15,000 ರೂ.ಗಳ ಉಳಿತಾಯದ  ಭರವಸೆ ನೀಡುತ್ತದೆ. ಇಂತಹ ಮನೆಯು ತನ್ನ ಸ್ವಂತ ವಿದ್ಯುತ್ ಅನ್ನು ಉತ್ಪಾದಿಸುವ ಮೂಲಕ ವಿದ್ಯುತ್ ಬಿಲ್‌ಗಳಲ್ಲಿ ಅಂದಾಜು 1,800 - 1,875 ರೂ.ಗಳನ್ನು ಉಳಿತಾಯ ಮಾಡಬಲ್ಲದು.

ಇದನ್ನೂ ಓದಿ-World Dosa Day 2024: ವರ್ಷದಲ್ಲಿ 2.9 ಕೋಟಿ ದೋಸೆ ಆರ್ಡರ್, ನಮ್ಮ ಬೆಂಗಳೂರು ದೋಸೆ ರಾಜಧಾನಿ, ಚಾಂಪಿಯನ್ ಯಾರು ಗೊತ್ತಾ?

ಸೋಲಾರ್ ಯೂನಿಟ್ ಸ್ಥಾಪನೆಗೆ ನೀವು ಪಡೆದ ಹಣಕಾಸು ಸಾಲದ ಮೇಲೆ ರೂ 610 ರ EMI ಅನ್ನು ಕಡಿತಗೊಳಿಸಿದ ನಂತರವೂ, ಈ ಉಳಿತಾಯವು ತಿಂಗಳಿಗೆ ಸರಿಸುಮಾರು ರೂ 1,265 ಆಗುತ್ತದೆ ಅಥವಾ ಒಂದು ವರ್ಷದಲ್ಲಿ ಅಂದಾಜು ರೂ 15,000 ಆಗುತ್ತದೆ. ಸಾಲ ಪಡೆಯದ ಕುಟುಂಬಗಳ ಉಳಿತಾಯ ಮತ್ತಷ್ಟು ಹೆಚ್ಚಾಗಲಿದೆ. ಇದರ ಹೊರತಾಗಿ, ಮೇಲ್ಛಾವಣಿಯ ಸೌರ ಯೋಜನೆಯು ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
pm surya ghar yojana how to submit online application for pm surya ghar muft bijli yojana
News Source: 
Home Title: 

PM Surya Ghar Yojana ಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

PM Surya Ghar Yojana ಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
Yes
Is Blog?: 
No
Tags: 
Facebook Instant Article: 
Yes
Highlights: 

ಈ ಯೋಜನೆಯು 2 kW ಸಾಮರ್ಥ್ಯದವರೆಗಿನ ವ್ಯವಸ್ಥೆಗಳಿಗೆ ಸೌರ ಘಟಕದ ವೆಚ್ಚದ ಶೇ. 60 ರಷ್ಟು ಮತ್ತು

2 ರಿಂದ 3 kW ಸಾಮರ್ಥ್ಯದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ ಶೇ 40 ರಷ್ಟು ಸಬ್ಸಿಡಿ ಖಚಿತಪಡಿಸುತ್ತದೆ.

ಈ ಸಬ್ಸಿಡಿಯನ್ನು 3 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ಸೀಮಿತಗೊಳಿಸಲಾಗಿದೆ.

Mobile Title: 
PM Surya Ghar Yojana ಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
Nitin Tabib
Publish Later: 
No
Publish At: 
Monday, March 4, 2024 - 16:46
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No
Word Count: 
627