Samantha Cheated Naga Chaitanya: ಸಮಂತಾ ತಮ್ಮ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದು ಬಹಳ ದಿನಗಳಾಗಿವೆ. ಆದರೆ ಈ ಕಹಿ ಅನುಭವ ಸಮಂತಾ ಅವರನ್ನು ಪ್ರತಿಕ್ಷಣವೂ ಕಾಡುತ್ತದೆ. ಇತ್ತೀಚೆಗೆ ಸಮಂತಾ ಅವರಿಗೆ ಒಂದು ಸೆನ್ಸೇಷನಲ್ ಪ್ರಶ್ನೆ ಎದುರಾಗಿದೆ.
ವೈಯಕ್ತಿಕ ಕಾರಣಗಳಿಂದ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದಿದ್ದಾರೆ. 2018 ರಲ್ಲಿ ವಿವಾಹವಾದ ಈ ಸ್ಟಾರ್ ಜೋಡಿ 2021 ರಲ್ಲಿ ವಿಚ್ಛೇದನವನ್ನು ಘೋಷಿಸಿದರು. ಕಳೆದ ವರ್ಷ ಸಮಂತಾ ಅಭಿನಯದ ಶಾಕುಂತಲಂ ಮತ್ತು ಖುಷಿ ಚಿತ್ರಗಳು ಬಿಡುಗಡೆಯಾಗಿದ್ದವು. ಆ ಬಳಿಕ ಸಮಂತಾ ಕೆಲದಿನಗಳಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ.
ಈಗ ಸಮಂತಾ ಅವರು ಅಲ್ಲು ಅರ್ಜುನ್ಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪುಷ್ಪ 2 ಚಿತ್ರದ ನಂತರ ಅಲ್ಲು ಅರ್ಜುನ್ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರಂತೆ. ಈ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಸಮಂತಾ ಇತ್ತೀಚೆಗೆ ಪಾಡ್ಕಾಸ್ಟ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ನೆಟ್ಟಿಗರೊಬ್ಬರು ತಮ್ಮ ಪ್ರಶ್ನೆಯಿಂದ ಸಮಂತಾ ಅವರನ್ನು ನೋಯಿಸಿದ್ದಾರೆ. 'ನಿನ್ನ ಅಮಾಯಕ ಪತಿ ನಾಗ ಚೈತನ್ಯನಿಗೆ ಯಾಕೆ ಮೋಸ ಮಾಡಿದೆ?' ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ ಸಮಂತಾ ಉತ್ತರಿಸಿದ್ದಾರೆ. "ಈ ಪ್ರಶ್ನೆ ಒಳ್ಳೆಯದಲ್ಲದಿರಬಹುದು. ಎನಿವೇ ಐ ವಿಶ್ ಯು ವೆಲ್.." ಎಂದು ಹೇಳಿದ್ದಾರೆ. ಇದಕ್ಕೆ ಸಮಂತಾ ಅಭಿಮಾನಿಗಳು ಅಸಮಧಾನ ಹೊರಹಾಕಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಕೆಲವರು ಸಮಂತಾ ಅವರನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: Pushpa 2 Teaser: ಸಾರ್ವಕಾಲಿಕ ದಾಖಲೆ ಬರೆದ ಪುಷ್ಪರಾಜ್.. ಕೆಜಿಎಫ್ 2 ರೆಕಾರ್ಡ್ ಬ್ರೇಕ್ ಮಾಡುತ್ತಾ ಪುಷ್ಪಾ 2 ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.