Thyroid Problem: ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಥೈರಾಯ್ಡ್ ಸಮಸ್ಯೆ ಇರುವವರಿ ಸರಿಯಾದ ಆಹಾರ ಪದ್ಧತಿ ಪಾಲಿಸುವುದು ಬಹಳ ಮುಖ್ಯ. ಥೈರಾಯ್ಡ್ ಸಮಸ್ಯೆ ಇದ್ದಾಗ ಕೆಲವು ಆಹಾರಗಳನ್ನು ತಪ್ಪದೇ ಸೇವಿಸಬೇಕು. ಇದರ ಜತೆಗೆ ಕೆಲವು ಆಹಾರಗಳನ್ನು ತಪ್ಪಿಯೂ ತಿನ್ನಬಾರದು.
ಎಲೆಕೋಸು, ಹೂಕೋಸು: ಥೈರಾಯ್ಡ್ ಸಮಸ್ಯೆ ಇರುವವರು ಹೂಕೋಸು ಮತ್ತು ಎಲೆಕೋಸು ತಿನ್ನಬಾರದು. ಇದರ ಗಿಟಾರ್ನಾಯ್ಡ್ಸ್ ಅಂಶವು ಥೈರಾಯ್ಡ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ.
ಸೋಯಾ ಉತ್ಪನ್ನಗಳು: ಟೋಫು, ಸೋಯಾ ಹಾಲು ಮತ್ತು ಸೋಯಾಬೀನ್ ಸೇರಿದಂತೆ ಸೋಯಾ ಉತ್ಪನ್ನಗಳನ್ನಿ ತಿನ್ನಬಾರದು. ಇದು ಗೊಯಿಟ್ರೋಜೆನ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತವೆ. ಇದನ್ನು ಸೇವಿಸಿದಾಗ ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.
ಇದನ್ನೂ ಓದಿ: ಈರುಳ್ಳಿಯನ್ನು ಹೀಗೆ ಸೇವಿಸಿ ಸಾಕು.. ಮೂಳೆಗಳ ನಡುವೆ ಅಂಟಿ ಕುಳಿತ ಯೂರಿಕ್ ಆಸಿಡ್ ಕರಗಿ ನೀರಾಗುವುದು !
ಮಾಂಸಾಹಾರ: ಥೈರಾಯ್ಡ್ ಸಮಸ್ಯೆ ಇರುವವರು ಮಾಂಸಾಹಾರ ಸೇವಿಸಬಾರದು. ಇದು ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಥೈರಾಯ್ಡ್ ರೋಗಿಗಳಿಗೆ ಇದು ಹೆಚ್ಚು ಹಾನಿಕಾರಕವಾಗಿದೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
ಚಹಾ ಅಥವಾ ಕೆಫೀನ್ ಉತ್ಪನ್ನಗಳು: ಚಹಾ ಅಥವಾ ಕೆಫೀನ್ ಉತ್ಪನ್ನಗಳು ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರಬಹುದು. ಇದು ಕ್ರಮೇಣ ನಿಮ್ಮ ರಕ್ತದಲ್ಲಿ ಥೈರಾಯ್ಡ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೆಲವರಿಗೆ ಗಂಟಲು ನೋವನ್ನು ಉಂಟುಮಾಡಬಹುದು.
ಇದನ್ನೂ ಓದಿ: Health Tips: ಪ್ರತಿದಿನ ಬೆಳಗ್ಗೆ ಟೀ-ಕಾಫಿ ಜೊತೆ ಬ್ರೆಡ್ ತಿಂದರೆ ಏನಾಗುತ್ತೆ ಗೊತ್ತಾ?
ಕೆಲವು ತರಕಾರಿಗಳು: ಟೊಮೆಟೊ, ಮೆಣಸಿನಕಾಯಿ, ಬಿಳಿಬದನೆ, ಆಲೂಗಡ್ಡೆ ಥೈರಾಯ್ಡ್ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಹಾಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ವೈದ್ಯರ ಸೂಚನೆಯಂತೆ ಈ ತರಕಾರಿಗಳನ್ನು ಸೇವಿಸದಿರುವುದು ಉತ್ತಮ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.