ತರುಣ್ ಸುಧೀರ್ ಮತ್ತು ನಟಿ ಸೋನಲ್ ಲವ್ ಶುರು ವಾಗಲು ದರ್ಶನ್ ಕಾರಣ!

Tharun Sudhir Marriage: ಸ್ಯಾಂಡಲ್‌ವುಡ್‌ ನಿರ್ದಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ನಡುವೆ ಲವ್ ಶುರುವಾಗಲು ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಕಾರಣವೆಂದು ಹೇಳಲಾಗುತ್ತಿದೆ. ತರುಣ್ ಮತ್ತು ಸೋನಲ್ ಮದುವೆ ಬಹುತೇಕ ಫಿಕ್ಸ್ ಅಂತಾ ಹೇಳಲಾಗುತ್ತಿದೆ.

Written by - Puttaraj K Alur | Last Updated : Jun 26, 2024, 11:34 PM IST
  • ಸ್ಯಾಂಡಲ್‌ವುಡ್‌ ಡೈರೆಕ್ಟರ್ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಮದುವೆ ಆಲ್ಮೋಸ್ಟ್ ಫಿಕ್ಸ್
  • ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಲವ್ ಶುರುವಾಗಲು ದರ್ಶನ್ ಕಾರಣ!
  • ಸುಧೀರ್‌ಗೆ ಸೋನಲ್ ಜೊತೆಗೆ ಮದುವೆ ಮಾಡೋಣವೆಂದು ತಮಾಷೆಗೆ ರೇಗಿಸುತ್ತಿದ್ದರಂತೆ ನಟ ದರ್ಶನ್
ತರುಣ್ ಸುಧೀರ್ ಮತ್ತು ನಟಿ ಸೋನಲ್ ಲವ್ ಶುರು ವಾಗಲು ದರ್ಶನ್ ಕಾರಣ!  title=
ಲವ್ ಶುರುವಾಗಲು ದರ್ಶನ್ ಕಾರಣ!

Tharun Sudhir Marriage: ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ತರುಣ್​ ಸುಧೀರ್​ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಇಷ್ಟು ದಿನ ಸಿಂಗಲ್​ ಆಗಿದ್ದ ತರುಣ್​ ಸುಧೀರ್​ ಅವರಿಗೆ ಮದುವೆ ಯಾವಾಗ ಅಂತಾ ಆಪ್ತರು, ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಅವರಿಂದ ಸಿಹಿಸುದ್ದಿ ಸಿಗುವ ಸಿಕ್ಕಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಸೋನಲ್ ಮಾಂಥೆರೋ ಜೊತೆ ತರುಣ್​ ಸುಧೀರ್​ ಮದುವೆ ಆಗಲಿದ್ದಾರೆಂದು ಹೇಳಲಾಗುತ್ತಿದೆ.

ಕರಾವಳಿ ಸುಂದರಿ ಸೋನಲ್​ ಮಾಂಥೆರೋ ತುಳು ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರು. ನಂತರ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದ ಅವರು, ‘ಅಭಿಸಾರಿಕೆ’, ‘ಎಂಎಲ್​ಎ’, ‘ಪಂಚತಂತ್ರ’, ‘ರಾಬರ್ಟ್’ ಮತ್ತು ಝೈದ್ ಖಾನ್ ನಟನೆಯ 'ಬನಾರಸ್' ಸಿನಿಮಾಗಳಲ್ಲಿ ನಟಿಸಿದ್ದರು. ಇದುವರೆಗೂ ಈ ಜೋಡಿ ಮದುವೆ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಈ ಜೋಡಿ ಮ್ಯಾರೇಜ್‌ ಬಗ್ಗೆ ಗಾಂಧಿನಗರ ಸೇರಿದಂತೆ ಎಲ್ಲೆಡೆ ಗಾಸಿಪ್​ ಹಬ್ಬಿದೆ.

ಇದನ್ನೂ ಓದಿ: 777 Charliee : ಇಂದಿಗೆ 777 ಚಾರ್ಲಿ ತೆರೆಕಂಡು 2 ವರ್ಷ, ಸಿನಿಪಯಣದ ತುಣುಕು ಹಂಚಿ ಸಂಭ್ರಮಿಸಿದ ರಕ್ಷಿತ್ ಶೆಟ್ಟಿ!!!

‘ರಾಬರ್ಟ್​’ ಸಿನಿಮಾದಲ್ಲಿ ತರುಣ್​ ಸುಧೀರ್​ ಮತ್ತು ಸೋನಲ್​ ಮಾಂಥೆರೋ ಜೊತೆಯಾಗಿ ಕೆಲಸ ಮಾಡಿದ್ದರು. 2021ರಲ್ಲಿ ತೆರೆಕಂಡ ಈ ಸಿನಿಮಾವನ್ನು ತರುಣ್​ ನಿರ್ದೇಶಿಸಿದ್ದರು. ಚಿತ್ರದ ಪ್ರಮುಖ ಪಾತ್ರದಲ್ಲಿ ಸೋನಲ್ ನಟಿಸಿ ಮಿಂಚಿದ್ದರು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ತರುಣ್‌ ನಿರ್ದೇಶನದ, ನಟ ದರ್ಶನ್‌ ನಟನೆಯ ʼಕಾಟೇರʼ ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಸದ್ಯ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ತರುಣ್‌ ಇಷ್ಟುದಿನ ಮದವೆ ಬಗ್ಗೆ ಯೋಚಿಸಿದರೆ ಸಿಂಗಲ್‌ ಆಗಿದ್ದರು. ಇದೀಗ ಅವರು ಸೋನಲ್‌ ಜೊತೆಗೆ ಮಿಂಗಲ್‌ ಆಗಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.  

ಲವ್‌ ಶುರುವಾಗಲು ದರ್ಶನ್ ಕಾರಣ!?

ಸ್ಯಾಂಡಲ್‌ವುಡ್‌ ನಿರ್ದಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ನಡುವೆ ಲವ್ ಶುರುವಾಗಲು ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಕಾರಣವೆಂದು ಹೇಳಲಾಗುತ್ತಿದೆ. ತರುಣ್ ಮತ್ತು ಸೋನಲ್ ಮದುವೆ ಬಹುತೇಕ ಫಿಕ್ಸ್ ಅಂತಾ ಹೇಳಲಾಗುತ್ತಿದೆ. ಈ ಬಗ್ಗೆ ಜೋಡಿ ಅಧಿಕೃತವಾಗಿ ಘೋಷಿಸಬೇಕಷ್ಟೇ. ಅಂದಹಾಗೆ ಈ ಜೋಡಿಗೆ ರಾಬರ್ಟ್ ಸಿನಿಮಾ ಸೆಟ್‌ನಲ್ಲಿ ಲವ್ ಶುರುವಾಗಿತ್ತಂತೆ. ತರುಣ್‌ಗೆ ಸೋನಲ್ ಜೊತೆ ಮದುವೆ ಮಾಡೋಣವೆಂದು ದರ್ಶನ್ ತಮಾಷೆಗೆ ರೇಗಿಸುತ್ತಿದ್ದರಂತೆ.

ಇದನ್ನೂ ಓದಿ: ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!

ಇದೀಗ 2 ತಿಂಗಳಲ್ಲಿ ಈ ಜೋಡಿ ಮದುವೆ ಆಗೋದು ಆಲ್ಮೋಸ್ಟ್ ಕನ್ಫರ್ಮ್ ಆಗಿದೆ. ಇದೀಗ ತರುಣ್ ಸುಧೀರ್ ತಾಯಿ ಈ ವಿಚಾರದ ಬಗ್ಗೆ ಆಪ್ತರ ಜೊತೆ ಮಾತಾಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರೆಸ್‌ಮೀಟ್ ಮಾಡುವ ಮೂಲಕ ಮದುವೆ ಬಗ್ಗೆ ಮಾಹಿತಿ ಕೊಡಲಿದ್ದಾರೆ ಅಂತಾ ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News