ನವದೆಹಲಿ: ಇಂದು (ಜನವರಿ 8) 10 ಕೇಂದ್ರ ಕಾರ್ಮಿಕ ಸಂಘಗಳು ಭಾರತ್ ಬಂದ್ ಗೆ ಕರೆ ನೀಡಿವೆ. ಈ ಬಂದ್ ಜನ ಸಾಮಾನ್ಯರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದು ಅತ್ಯಂತ ಮುಖ್ಯವಾದ ಪ್ರಶ್ನೆಯಾಗಿದೆ. ಇದು 24 ಗಂಟೆಗಳ ಅಖಿಲ ಭಾರತ ಮುಷ್ಕರವಾಗಿದ್ದು ಹಲವು ರಾಜ್ಯಗಳಲ್ಲಿ ಬಂದ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವರದಿಯ ಪ್ರಕಾರ, 25 ಕೋಟಿಗೂ ಹೆಚ್ಚು ಜನರು ಭಾರತ್ ಬಂಧದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದ ನೀವು ಹೇಗೆ ಪ್ರಭಾವಿತರಾಗಬಹುದು ಎಂದು ನಾವು ನಿಮಗೆ ಹೇಳುತ್ತಿದ್ದೇವೆ ...
ಬ್ಯಾಂಕಿಂಗ್, ಸಾರಿಗೆ ಮತ್ತು ಇತರ ಪ್ರಮುಖ ಸೇವೆಗಳಿಗೆ ಅಡ್ಡಿ:
ದೇಶದ ಹೆಚ್ಚಿನ ಸಾರ್ವಜನಿಕ ಬ್ಯಾಂಕುಗಳ ವ್ಯವಹಾರದ ಮೇಲೆ ಈ ಬಂದ್ ಪರಿಣಾಮ ಬೀರಿದೆ. ಬ್ಯಾಂಕುಗಳ ನೌಕರರು ಮತ್ತು ಅಧಿಕಾರಿಗಳು ಎಲ್ಲರೂ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಭಾರತ್ ಬಂದ್‌ನಿಂದಾಗಿ ಬ್ಯಾಂಕಿಂಗ್ ಸೇವೆಗಳಾದ ಠೇವಣಿ ಮತ್ತು ವಾಪಸಾತಿ, ಚೆಕ್ ಕ್ಲಿಯರಿಂಗ್ ಮತ್ತು ಉಪಕರಣ ವಿತರಣೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕಾರ್ಯಾಚರಣೆಗಳ ಮೇಲೆ ಮುಷ್ಕರ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಆದಾಗ್ಯೂ, ಖಾಸಗಿ ವಲಯದ ಬ್ಯಾಂಕುಗಳ ಸೇವೆಗಳು ಪರಿಣಾಮ ಬೀರುವ ಸಾಧ್ಯತೆಯಿಲ್ಲ. ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಅನೇಕ ರಾಜ್ಯಗಳಲ್ಲಿ ಬ್ಯಾಂಕಿಂಗ್, ಸಾರಿಗೆ ಮತ್ತು ಇತರ ಪ್ರಮುಖ ಸೇವೆಗಳು ಅಸ್ತವ್ಯಸ್ತವಾಗಿದೆ.
ಇದಲ್ಲದೆ ಇಂದು ನೀವು ಸರ್ಕಾರಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇರಿಸಲು ಅಥವಾ ಹಣವನ್ನು ಹಿಂಪಡೆಯಲು ಬಯಸಿದರೆ, ಈ ಕೆಲಸವನ್ನು ಇಂದು ಮಾಡಲಾಗುವುದಿಲ್ಲ. ಯಾವುದೇ ಸಣ್ಣ, ಮಧ್ಯಮ ಮತ್ತು ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಇಂದು ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಇರಿಸಲು ಸಾಧ್ಯವಾಗುವುದಿಲ್ಲ.
ಜನವರಿ 8-9 ರಂದು ಎಟಿಎಂಗಳಲ್ಲಿ ಹಣದ ಕೊರತೆ:
ಇಂದು ಇಡೀ ದಿನ ಭಾರತ್ ಬಂದ್‌ಗೆ ಕರೆ ನೀಡಿರುವುದರಿಂದ ಎಲ್ಲಾ ಬ್ಯಾಂಕಿಂಗ್ ಕಾರ್ಯಾಚರಣೆಗಳು ನಡೆಯುತ್ತಿಲ್ಲ. ಹಾಗಾಗಿ ಇಂದು ಹೆಚ್ಚಿನ ಎಟಿಎಂಗಳಲ್ಲಿ ನಗದು ಖಾಲಿ ಆಗಿದ್ದರೂ ಹಣವನ್ನು ತುಂಬಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ, ದೇಶದ ಹೆಚ್ಚಿನ ಎಟಿಎಂಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಹಣದ ಕೊರತೆಯಿರುವ ಸಾಧ್ಯತೆಯಿದೆ.
ಬ್ಯಾಂಕಿನಲ್ಲಿ ಠೇವಣಿ, ವಾಪಸಾತಿ ಮತ್ತು ಚೆಕ್ ಕ್ಲಿಯರಿಂಗ್ ಇಲ್ಲ:
ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಚೆಕ್ ಅಥವಾ ಡ್ರಾಫ್ಟ್ ಅನ್ನು ಹಾಕಿದ್ದರೆ, ಅದನ್ನು ತೆರವುಗೊಳಿಸಲು ಎರಡು ಮೂರು ದಿನಗಳು ತೆಗೆದುಕೊಳ್ಳಬಹುದು. ಪಾವತಿಗಾಗಿ ನೀವು ಯಾರಿಗಾದರೂ ಚೆಕ್ ಅಥವಾ ಡ್ರಾಫ್ಟ್ ಅನ್ನು ನೀಡಿದ್ದರೆ, ಅದನ್ನು ತೆರವುಗೊಳಿಸಲು ಸಮಯ ತೆಗೆದುಕೊಳ್ಳಬಹುದು.
ಇದಲ್ಲದೆ ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗಿದ್ದು, ಸಾರ್ವಜನಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. "ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು" ವಿರೋಧಿಸಿ, ಎಲ್ಲಾ 10 ಕೇಂದ್ರ ಒಕ್ಕೂಟಗಳು ಮತ್ತು ವಿವಿಧ ಒಕ್ಕೂಟಗಳು ಬುಧವಾರ (ಜನವರಿ 8) ನೀಡಿದ ಭಾರತ್ ಬಂದ್ ಕರೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಒಡಿಶಾದಲ್ಲಿ, ತಾಲ್ಚರ್, ಭುವನೇಶ್ವರ, ಬ್ರಹ್ಮಪುರ, ಭದ್ರಾಕ್ ಮತ್ತು ಕೆಂಡುಜಾರ್‌ಗಡದಲ್ಲಿ ಮುಷ್ಕರ ನಡೆದ ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ನಲ್ಲಿ ರೈಲುಗಳ ಸಂಚಾರ ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ಹಲವಾರು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹಲವೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಆದಾಗ್ಯೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಆಗಲಿ ಅಥವಾ ದೈನಂದಿನ ವ್ಯವಹಾರಗಳಿಗಾಗಲಿ ತೊಂದರೆ ಆಗಿಲ್ಲ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.