IND vs ZIM: ಜಿಂಬಾಬ್ವೆ ಪ್ರವಾಸಕ್ಕೆ ಪ್ಲೇಹಿಂಗ್‌ XI ಪಟ್ಟಿ ರಿಲೀಸ್‌..? ರುತುರಾಜ್‌ಗೆ ನಿರಾಸೆ..!

IND vs Zimbabwe: ಟಿ20 ವಿಶ್ವಕಪ್‌ ಗೆದ್ದ ಕುಷಿಯಲ್ಲಿದ್ದ ಟೀಂ ಇಂಡಿಯಾದ ಎಲ್ಲಾ ಅಭಿಮಾನಿಗಳು ಜಿಂಬಾಬ್ವೆ ಸರಣಿಯತ್ತ ಗಮನ ಹರಿಸಿದ್ದಾರೆ. ಶನಿವಾರ, ಜುಲೈ 06ರ ರಿಂದ ಜಿಂಬಾಬ್ವೆಯಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಹರಾರೆಯಲ್ಲಿ ಶನಿವಾರ ಸಂಜೆ 4.30ಕ್ಕೆ ಶುರುವಾಗಲಿದೆ.  

Written by - Zee Kannada News Desk | Last Updated : Jul 6, 2024, 08:33 AM IST
  • ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಉತ್ತಮ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
  • ಈ ಸರಣಿಯೊಂದಿಗೆ ಐಪಿಎಲ್ ತಾರೆಗಳು ಭಾರತ ಪ್ಲೇಯಿಂಗ್‌ XIಗೆ ಪಾದಾರ್ಪಣೆ ಮಾಡಿದ್ದಾರೆ.
  • ಆರಂಭಿಕ ಆಟಗಾರನಾಗಿ ಅಭಿಷೇಕ್ ಶರ್ಮಾ ಅವರನ್ನು ಆರಂಭಿಕರಾಗಿ ಫಿಲ್ಡ್‌ಗೆ ಇಳಿಸಲು ನಾಯಕ ಶುಭಮನ್ ಗಿಲ್, ಯೋಜಿಸುತ್ತಿದ್ದಾರೆ.
IND vs ZIM: ಜಿಂಬಾಬ್ವೆ  ಪ್ರವಾಸಕ್ಕೆ ಪ್ಲೇಹಿಂಗ್‌ XI ಪಟ್ಟಿ ರಿಲೀಸ್‌..? ರುತುರಾಜ್‌ಗೆ ನಿರಾಸೆ..! title=

IND vs Zimbabwe: ಟಿ20 ವಿಶ್ವಕಪ್‌ ಗೆದ್ದ ಕುಷಿಯಲ್ಲಿದ್ದ ಟೀಂ ಇಂಡಿಯಾದ ಎಲ್ಲಾ ಅಭಿಮಾನಿಗಳು ಜಿಂಬಾಬ್ವೆ ಸರಣಿಯತ್ತ ಗಮನ ಹರಿಸಿದ್ದಾರೆ. ಶನಿವಾರ, ಜುಲೈ 06ರ ರಿಂದ ಜಿಂಬಾಬ್ವೆಯಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಹರಾರೆಯಲ್ಲಿ ಶನಿವಾರ ಸಂಜೆ 4.30ಕ್ಕೆ ಶುರುವಾಗಲಿದೆ.

ಟೀಂ ಇಂಡಿಯಾದ ಸ್ಟಾರ್‌ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ, ಜಿಂಬಾಬ್ವೆ ಸರಣಿಗೆ ಎಲ್ಲಾ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಉತ್ತಮ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಸರಣಿ ಭಾರತೀಯ ಕ್ರಿಕೆಟ್‌ಗೆ ಅತ್ಯಂತ ಮಹತ್ವದ್ದಾಗಿದೆ. ಹೊಸ ಪೀಳಿಗೆಯನ್ನು ತಯಾರು ಮಾಡಲು ಆಯ್ಕೆದಾರರು ಯುವ ಆಟಗಾರರಿಗೆ ಅವಕಾಶ ನೀಡಿದ್ದಾರೆ. 

ಇದನ್ನೂ ಓದಿ: "ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ" ಎಂದ ಸುನಿಲ್‌ ಗವಾಸ್ಕರ್‌..!

ಈ ಯುವ ಆಟಗಾರರೇ ಭಾರತ ಕ್ರಿಕೆಟ್‌ನ ಭವಿಷ್ಯವನ್ನು ಮುನ್ನಡೆಸಬೇಕಿದೆ. ಈ ಸರಣಿಯೊಂದಿಗೆ ಐಪಿಎಲ್ ತಾರೆಗಳು ಭಾರತ ಪ್ಲೇಯಿಂಗ್‌ XIಗೆ ಪಾದಾರ್ಪಣೆ ಮಾಡಿದ್ದಾರೆ. ತಂಡದ ಪಟ್ಟಿ ಈಗಾಗಲೇ ಫೈನಲ್‌ ಆಗಿದ್ದು ತಂಡದ ನಾಯಕ ಹಾಗೂ ಕೋಚ್‌ ಇಬ್ಬರೂ ಸೇರಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕಿದ್ದಾರೆ.

ಆರಂಭಿಕ ಆಟಗಾರನಾಗಿ ಕ್ರೀಸ್‌ಗೆ ಎಂಟ್ರಿ ಕೊಡುತ್ತಿದ್ದ  ರುತುರಾಜ್ ಗಾಯಕ್ವಾಡ್ ಬದಲಿಗೆ ಅಭಿಷೇಕ್ ಶರ್ಮಾ ಅವರನ್ನು ಆರಂಭಿಕರಾಗಿ ಫಿಲ್ಡ್‌ಗೆ ಇಳಿಸಲು ನಾಯಕ ಶುಭಮನ್ ಗಿಲ್,  ಯೋಜಿಸುತ್ತಿದ್ದಾರೆ. ಆರಂಭಿಕ ಸ್ಥಾನಕ್ಕೆ ಆದ್ಯತೆ ನೀಡುವ ರುತುರಾಜ್ ಮೂರನೇ ಕ್ರಮಾಂಕದಲ್ಲಿ ಹೇಗೆ ಆಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ರಯಾನ್ ಪರಾಗ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದು, ಐದನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೆಲ್ ಮತ್ತು ಆರನೇ ಸ್ಥಾನದಲ್ಲಿ ರಿಂಕು ಸಿಂಗ್ ಅಂತಿಮ ತಂಡದಲ್ಲಿ ಸೇರ್ಪಡೆಯಾಗಲಿದ್ದಾರೆ. 

ಇದನ್ನೂ ಓದಿ: "2007ರ ವಿಶ್ವಕಪ್‌ ಗೆಲುವಿಗಿಂತ 2024ರ ವಿಶ್ವಕಪ್‌ ಗೆಲುವು ತುಂಬಾ ವಿಶೇಷ"- ರೋಹಿತ್‌ ಶರ್ಮಾ

ವಾಷಿಂಗ್ಟನ್ ಸುಂದರ್ ಆಲ್ ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ರವಿ ಬಿಷ್ಣೋಯ್ ಅವರು ಸುಂದರ್ ಅವರೊಂದಿಗೆ ಸ್ಪಿನ್ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದಾರೆ. ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ಮುಖೇಶ್ ಕುಮಾರ್ ವೇಗಿಗಳ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್‌ XI: 
ಶುಭಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್, ಜಿತೇಶ್ ಶರ್ಮಾ, ರಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್ , ತುಷಾರ್ ದೇಶಪಾಂಡೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News