ನವದೆಹಲಿ: 2019-20ನೇಯ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಆರಂಭಗೊಂಡಿದೆ. ಈ ಕೊನೆಯ ತ್ರೈಮಾಸಿಕದಲ್ಲಿ ನಿಮ್ಮ ನೌಕರಿದಾತರು ನಿಮ್ಮಿಂದ ನೀವು ಒಂದು ವರ್ಷದಲ್ಲಿ ಮಾಡಿರುವ ಇನ್ವೆಸ್ಟ್ಮೆಂಟ್ ಕುರಿತು ದಾಖಲೆಗಳನ್ನು ಕೇಳಲು ಆರಂಭಿಸಲಿದ್ದಾರೆ. ಒಂದು ವೇಳೆ ಸಮಯ ಇರುವಂತೆ ನೀವು ನಿಮ್ಮ ಎಲ್ಲಾ ಇನ್ವೆಸ್ಟ್ ಮೆಂಟ್ ಗಳ ಕುರಿತು ನಿಮ್ಮ ಎಂಪ್ಲಾಯರ್ ಗೆ ದಾಖಲೆಗಳನ್ನು ಒದಗಿಸಿದರೆ, ನಿಮ್ಮ ಸಂಬಳದಿಂದ ಕಡಿಮೆ ಟಿಡಿಎಸ್ ಕಟ್ ಆಗಲಿದೆ. ಒಂದು ವೇಳೆ ನೀವು ದಾಖಲೆಗಳನ್ನು ಒದಗಿಸುವಲ್ಲಿ ಯಾವುದೇ ವಿಳಂಬ ಮಾಡಿದಲ್ಲಿ ನೀವು ಹೆಚ್ಚಿನ TDS ಪಾವತಿಸಬೇಕಾಗಲಿದ್ದು, ಇದು ನಿಮ್ಮ ತಿಂಗಳ ಬಜೆಟ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಕಂಪನಿ ಬಳಿ ಡಿಕ್ಲೇರ್ ಮಾಡಿರುವ ಇನ್ವೆಸ್ಟ್ಮೆಂಟ್ ಕುರಿತು ದಾಖಲೆಗಳ ಸಂಗ್ರಹ ಕಾರ್ಯದಲ್ಲಿ ಇಂದೇ ತೊಡಗಿ.
ಒಂದು ವಿತ್ತೀಯ ವರ್ಷದ ಏಪ್ರಿಲ್-ಮೇ ನಲ್ಲಿ ನೀವು ನಿಮ್ಮ ಇನ್ವೆಸ್ಟ್ಮೆಂಟ್ ಡಿಕ್ಲೆರೇಶನ್ ನೀಡುವಾಗ, ನೀವು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಆದರೆ, ಇದೇ ವಿತ್ತೀಯ ವರ್ಷದ ಡಿಸೆಂಬರ್-ಜನವರಿಯಲ್ಲಿ ನೀವು ನೀಡಿರುವ ಡಿಕ್ಲೆರೇಶನ್ ಗೆ ಸಂಬಂಧಿಸಿದ ಪ್ರೂಫ್ ನೀಡುವ ಅಗತ್ಯತೆ ಇದೆ. ಹೀಗೆ ಮಾಡಿದಲ್ಲಿ ನಿಮ್ಮ ಕಂಪನಿ ನೀವು ಭರಿಸಬೇಕಾದ TDS ಅನ್ನು ಕಂಪನಿ ನಿಮ್ಮ ಸಂಬಳದಲ್ಲಿ ಅಡ್ಜೆಸ್ಟ್ ಮಾಡಲಿದೆ. ನೀವು ದಾಖಲಿಸಬೇಕಾದ ದಾಕಲೆಗಳ ಕುರಿತು ನಾವು ಇಲ್ಲಿ ಚರ್ಚಿಸುತ್ತಿದ್ದೇವೆ.
ಇನ್ಕಮ್ ಟ್ಯಾಕ್ಸ್ ನ 80(ಸಿ) ನಿಯಮದ ಅಡಿ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದು
ಇನ್ಕಮ್ ಟ್ಯಾಕ್ಸ್ ನ 80(ಸಿ) ನಿಯಮದ ಅಡಿ ನೀವು ಮ್ಯಾಕ್ಸಿಮಮ್ 1.5 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದು. ಇದರ ಅಡಿ ತೆರಿಗೆ ವಿನಾಯ್ತಿ ಪಡೆಯಲು ಈ ಕೆಳಗೆ ನಮೂದಿಸಿದ ದಾಖಲೆಗಳನ್ನು ನೀವು ಸಿದ್ಧಪರಿಸಿಕೊಳ್ಳಿ.
- LIC ಪಾಲಸಿ ಪ್ರಿಮಿಯಂ ಪಾವತಿಯ ರಶೀದಿ.
- ನಿಮಗಾಗಿ ಅಥವಾ ನಿಮ್ಮ ಮೇಲೆ ಅವಲಂಭಿಸಿರುವವರಿಗಾಗಿ ಮಾಡಿದ ಯುಲಿಪ್ ಪ್ಲಾನ್ ನ ಪ್ರಿಮಿಯಂ ಪ್ರೂಫ್.
- ಮ್ಯೂಚ್ವಲ್ ಫಂಡ್ ELSS ಪ್ಲಾನ್ ನ ಪ್ರೂಫ್ ನೀಡಬೇಕು.
- PPF ಪ್ಲಾನ್ ಕುರಿತು ದಾಖಲೆ ನೀಡಬೇಕು.
- NSC ಉಳಿತಾಯದ ಕುರಿತು ದಾಖಲೆ ನೀಡಬೇಕು.
- ಹೋಂ ಲೋನ್ ಕುರಿತು ದಾಖಲೆ ನೀಡಬೇಕು.
- ಮಕ್ಕಳ(ಇಬ್ಬರು) ಟ್ಯೂಶನ್ ಫೀ ಕುರಿತು ದಾಖಲೆ ನೀಡಬೇಕು.
- FD ಉಳಿತಾಯ ಖಾತೆ(ತೆರಿಗೆ ವಿನಾಯ್ತಿ ಹೊಂದಿರುವ)ಗೆ ಸಂಬಂಧಿಸಿದಂತೆ ದಾಖಲೆ ನೀಡಬೇಕು.
- NPS ಖಾತೆಗೆ ನೀವು ನೀಡಿದ ಕೊಡುಗೆ ಕುರಿತು ದಾಖಲೆ ನೀಡಬೇಕು.
- ಸುಕನ್ಯಾ ಸಮೃದ್ಧಿ ಯೋಜನೆಗೆ ನೀವು ನೀಡಿದ ಕೊರುಗೆಯ ಕುರಿತು ದಾಖಲೆ ನೀಡಬೇಕು.
ಆರೋಗ್ಯ ವಿಮೆಯಲ್ಲಿ ನೀವು ನೀಡಿದ ಪ್ರೀಮಿಯಂನಿಂದಲೂ ಕೂಡ ತೆರಿಗೆ ವಿನಾಯ್ತಿ ಪಡೆಯಬಹುದು.
ಒಂದು ವೇಳೆ ನೀವು ನಿಮಗಾಗಿ ನಿಮ್ಮ ಪತ್ನಿ/ಪತಿ ಮತ್ತು ಮಕ್ಕಳಿಗಾಗಿ ಯಾವುದೇ ಹೆಲ್ತ್ ಇನ್ಸುರೆನ್ಸ್ ಪಾಲಸಿ ಹೊಂದಿದ್ದರೇ, ಆದಾಯ ತೆರಿಗೆ ಕಾಯ್ದೆ 80(D) ನಿಯಮಗಳ ಅಡಿ ನೀವು ರೂ.25000 ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. ಹಿರಿಯ ನಾಗರಿಕರೂ ಇದರಡಿ ರೂ.50,000ವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು. ಇವುಗಳನ್ನು ಹೊರತುಪಡಿಸಿ, ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಪಡೆದ ಲೋನ್, ಪ್ರಿವೆಂಟಿವ ಹೆಲ್ತ್ ಚೆಕ್ ಅಪ್, NPS, ಹೋಂ ಲೋನ್, HRA ಹಾಗೂ LTAಗಳ ಮೇಲೂ ಕೂಡ ತೆರಿಗೆ ವಿನಾಯ್ತಿ ಪಡೆಯಬಹುದು.