Gold and Silver Rate in India on August 8: ಇದೀಗ ಶ್ರಾವಣ ಮಾಸ. ಮಾಡುವ ಕೆಲಸದಿಂದ ಹಿಡಿದು ಖರೀದಿಸುವ ವಸ್ತುಗಳವರೆಗೆ ಎಲ್ಲವೂ ಶುಭವಾಗಿರಲಿ ಎಂದು ಯೋಚಿಸುವ ಶುಭ ಮಾಸ. ಹೀಗಿರುವಾಗ ಅನೇಕರು ಈ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುತ್ತಾರೆ. ಈ ಮೂಲಕ ಲಕ್ಷ್ಮೀ ದೇವಿ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆ.
ಇದನ್ನೂ ಓದಿ: ಭಾರತದಲ್ಲಿನ ಈ ಆಹಾರ ಅಂದ್ರೆ ನನಗೆ ಬಹಳ ಇಷ್ಟ, ಫಿದಾ ಆಗ್ಬಿಟ್ಟೆ: ಜಾನ್ ಸೆನಾ ಹೇಳಿಕೆ
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಕೈಸುಡುವಂತಿದೆ. ದಿನೇ ದಿನೇ ಹೆಚ್ಚಳ ಕಾಣುತ್ತಿರುವ ಬಂಗಾರದ ಬೆಲೆ ಕಳೆದ ಕೆಲ ದಿನಗಳಿಂದ ಕೊಂಚ ಇಳಿಕೆ ಕಂಡಂತಿದೆ. ಸದ್ಯ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದನ್ನ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಬೆಲೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೆಲವರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಶೀಘ್ರದಲ್ಲೇ ಮತ್ತೊಮ್ಮೆ 10 ಗ್ರಾಂಗೆ 50,000 ರೂಪಾಯಿಗೆ ತಲುಪಲಿದೆ ಎನ್ನಲಾಗುತ್ತಿದೆ.
ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ, ನಿರಂತರವಾಗಿ ಕುಸಿತ ದಾಖಲಾಗುತ್ತಿದೆ. ಆಗಸ್ಟ್ 7ರಂದು 22 ಕ್ಯಾರೆಟ್ ಚಿನ್ನದ ಬೆಲೆ 320 ರೂ. ಇಳಿಕೆ ಕಂಡುಬಂದಿತ್ತು. ಇನ್ನೊಂದೆಡೆ 24 ಕ್ಯಾರೆಟ್ ಚಿನ್ನದ ದರದಲ್ಲಿ 336 ರೂ. ಇಳಿಕೆಯಾಗಿತ್ತು. ಇದಲ್ಲದೆ. ದೇಶದ ಕೆಲ ಭಾಗಗಳಲ್ಲಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 400 ರೂ. ಕಡಿತವಾಗಿದೆ. ಇನ್ನು ಇಂದಿನ ದರ ಸ್ಥಿರವಾಗಿದೆ. ಆದರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಕುಸಿತದ ನಂತರ, ಪ್ರತಿ 10 ಗ್ರಾಂಗೆ 63,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಕೂಡ ನಿನ್ನೆ ಕುಸಿದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಇಳಿಕೆ ಕಂಡಿದೆ.
ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ (ಗ್ರಾಂ):
- 22 ಕ್ಯಾರೆಟ್ ಚಿನ್ನದ ಬೆಲೆ: 6,350 ರೂ
- 24 ಕ್ಯಾರೆಟ್ ಚಿನ್ನದ ಬೆಲೆ: 6,927 ರೂ
- 18 ಕ್ಯಾರೆಟ್ ಚಿನ್ನದ ಬೆಲೆ: 5,196
- ಬೆಳ್ಳಿ ಬೆಲೆ: 81 ರೂ. (6 ರೂ. ಇಳಿಕೆ)
ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ (1 ಗ್ರಾಂ):
- 22 ಕ್ಯಾರೆಟ್ ಚಿನ್ನದ ಬೆಲೆ: 6,350 ರೂ
- 24 ಕ್ಯಾರೆಟ್ ಚಿನ್ನದ ಬೆಲೆ: 6,927 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 810 ರೂ
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂಗೆ)
- ಬೆಂಗಳೂರು: 6,350 ರೂ
- ಚೆನ್ನೈ: 6,350 ರೂ
- ಮುಂಬೈ: 6,350 ರೂ
- ದೆಹಲಿ: 6,365 ರೂ
- ಕೇರಳ: 6,350 ರೂ
ಇದನ್ನೂ ಓದಿ: ಟೀಂ ಇಂಡಿಯಾಗೂ ಮೊದಲು ಪಾಕಿಸ್ತಾನದ ಪರ ಕ್ರಿಕೆಟ್ ಆಡಿದ್ರು ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್! ಯಾವಾಗ? ಯಾಕೆ?
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 8.30ರ ಸಮಯದಲ್ಲಿ ಇದ್ದ ಬೆಲೆಯನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ