ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಧಿಕ 3300 GB ಡೇಟಾ ನೀಡುತ್ತಿದೆ ಬಿ‌ಎಸ್‌ಎನ್‌ಎಲ್

BSNL: ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿರುವ ಬಿ‌ಎಸ್‌ಎನ್‌ಎಲ್ ಇದೀಗ  ಬೇರಾವ ಕಂಪನಿಗಳು ಕೂಡ ನೀಡದಂತ ಅತ್ಯಂತ ಕಡಿಮೆ ಬೆಲೆಯ ಯೋಜನೆಯನ್ನು ಘೋಷಿಸಿದೆ. 

Written by - Yashaswini V | Last Updated : Oct 7, 2024, 01:08 PM IST
  • ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಗೆ ಟಕ್ಕರ್ ನೀಡಿರುವ ಬಿ‌ಎಸ್‌ಎನ್‌ಎಲ್
  • ವಯರ್‌ಲೆಸ್ ಆಕ್ಸೆಸ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್
  • ಬಿಎಸ್‌ಎನ್ಎಲ್ ನೀಡುತ್ತಿರುವ ಹೊಸ ಏರ್‌ಫೈಬರ್ ಸರ್ವಿಸ್ ಬಗ್ಗೆ ಇಲ್ಲಿದೆ ಡೀಟೈಲ್ಸ್
ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಧಿಕ 3300 GB ಡೇಟಾ ನೀಡುತ್ತಿದೆ ಬಿ‌ಎಸ್‌ಎನ್‌ಎಲ್  title=

BSNL Plans: ಇತ್ತೀಚಿನ ದಿನಗಳಲ್ಲಿ ಭಾರತದ ಟೆಲಿಕಾಂ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ‌ಎಸ್‌ಎನ್‌ಎಲ್) ಇದೀಗ ಕಡಿಮೆ ಬೆಲೆಯಲ್ಲಿ ಹೈಸ್ಪೀಡ್ ಇಂಟರ್‌ನೆಟ್ ಪರಿಚಯಿಸುವ ಮೂಲಕ ಮತ್ತೊಮ್ಮೆ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. 

ಆಕರ್ಷಕ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್‌ನೆಟ್: 
ಏರ್‌ಟೆಲ್, ಜಿಯೋ, ವಿಐಗೆ ಟಕ್ಕರ್ ನೀಡಿ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್‌ಗಳನ್ನು ಪರಿಚಯಿಸುತ್ತಿರುವ ಬಿ‌ಎಸ್‌ಎನ್‌ಎಲ್ ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಏರ್ ಫೈಬರ್ ಕನೆಕ್ಷನ್ ನೀಡಲು ಯೋಜನೆ ರೂಪಿಸಿದೆ. ಇದಕ್ಕಾಗಿ, ಹೊಚ್ಚ ಹೊಸ ಪ್ಲಾನ್‌ಗಳನ್ನು ಪರಿಚಯಿಸಿರುವ ಬಿ‌ಎಸ್‌ಎನ್‌ಎಲ್ ಇತರ ಕಂಪನಿಗಲೀ ತೀವ್ರ ಸ್ಪರ್ಧೆ ಒಡ್ಡುತ್ತಿದೆ.  

ವಾಸ್ತವವಾಗಿ, ಜಿಯೋ, ಏರ್‌ಟೆಲ್ 5G ಸರ್ವಿಸ್ ನೀಡಲು ಯೋಜನೆ ರೂಪಿಸುತ್ತಿದ್ದರೆ ಬಿ‌ಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಗ್ರಾಹಕರತ್ತ ಗಮನಹರಿಸುವ ಮೂಲಕ ಕಡಿಮೆ ಬೆಲೆಯಲ್ಲಿ ಏರ್‌ಫೈಬರ್ ಸರ್ವಿಸ್ ಗಳನ್ನು ನೀಡುವುದಾಗಿ ಘೋಷಿಸಿದೆ. 

ಇದನ್ನೂ ಓದಿ- ಬೆಂಗಳೂರಿನಲ್ಲಿ ಎಲ್ಲೇ ಸುತ್ತಾಡಿದ್ರೂ ಕೇವಲ 1 ರೂ.ಗೆ ಸಿಗುತ್ತೆ ಆಟೋ ರೈಡ್, ಈ ಆಫರ್ ಏನ್ ಗೊತ್ತಾ?

ಬಿಎಸ್‌ಎನ್ಎಲ್ ಏರ್‌ಫೈಬರ್ ಸರ್ವಿಸ್ ಡೀಟೈಲ್ಸ್: 
ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದೆಲ್ಲೆಡೆ ಬಿ‌ಎಸ್‌ಎನ್‌ಎಲ್ ಏರ್‌ಫೈಬರ್ ಸರ್ವಿಸ್ ಲಭ್ಯವಿದ್ದು ಗ್ರಾಹಕರಿಗೆ ಹೈ ಕನೆಕ್ಟಿವಿಟಿ ಜೊತೆ ಅತ್ಯಧಿಕ ಡೇಟಾ ಸೌಲಭ್ಯ ಇದರಲ್ಲಿ ಲಭ್ಯವಾಗಲಿದೆ. ಇದರ ಆರಂಭಿಕ ಬೆಲೆ 499ರೂ.ಗಳಿಂದ ಆರಂಭವಾಗಲಿದೆ. ಇದಲ್ಲದೆ 699 ರೂ. ಮತ್ತು 899 ರೂ.ಗಳ ಪ್ಲಾನ್‌ಗಳು ಸೇರಿವೆ. 
 
499ರೂ.ಗಳ ಪ್ಲಾನ್‌ನಲ್ಲಿ ಸಿಗುವ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ 499ರೂ.ಗಳ ಏರ್‌ಫೈಬರ್ ಬೇಸಿಕ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 30 Mbps ಸ್ಪೀಡ್‌ನಲ್ಲಿ 3,300GB ಡೇಟಾ ಲಭ್ಯವಾಗಲಿದೆ. ಈ ಡೇಟಾ ಮುಕ್ತಾಯದ ಬಳಿಕ ಗ್ರಾಹಕರು 2 Mbps ಸ್ಪೀಡ್ ನಲ್ಲಿ ಡೇಟಾ ಸೌಲಭ್ಯವನ್ನು ಆನಂದಿಸಬಹುದಾಗಿದೆ. ಇದರ ವ್ಯಾಲಿಡಿಟಿ ಸಮ್ಪ್ರೂನ ಒಂದು ತಿಂಗಳಿನವರೆಗೂ ಇರಲಿದೆ. ಅಷ್ಟೇ ಅಲ್ಲ, ಈ ರೀಚಾರ್ಜ್ ಪ್ಲಾನ್‌ನಲ್ಲಿ ನೋಂದಾಯಿತ ಸಂಖ್ಯೆಗೆ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಾಗಲಿದೆ. 

ಇದನ್ನೂ ಓದಿ- ಸ್ಮಾರ್ಟ್​ಫೋನ್ ಚಾರ್ಜಿಂಗ್ ತುಂಬಾ ನಿಧಾನ ಆಗ್ತಿದ್ಯಾ? ಇವೇ ಪ್ರಮುಖ ಕಾರಣ, ನೀವೇ ಸರಿಪಡಿಸಬಹುದು..! ಹೇಗ್ ಗೊತ್ತಾ?

ಬಿ‌ಎಸ್‌ಎನ್‌ಎಲ್ 699 ರೂ.  ಪ್ಲಾನ್‌ನಲ್ಲಿ ಗ್ರಾಹಕರಿಗೆ 40 Mbps ವೇಗದಲ್ಲಿ  3,300GB ಡೇಟಾ ಲಭ್ಯವಾದರೆ, 899 ರೂ. ಪ್ಲಾನ್‌ನಲ್ಲಿ 50 Mbpsಸ್ಪೀಡ್ ನಲ್ಲಿ 3,300GB ಡೇಟಾ ಸಿಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News