ಭೂಮಿ ಉಸಿರಾಡುವುದನ್ನು ನೋಡಿದ್ದೀರಾ? ಮಿಸ್‌ ಮಾಡದೆ ಒಮ್ಮೆ ವಿಡಿಯೋ ನೋಡಿ

Earth Viral Video : ಭೂಮಿ ಉಸಿರಾಡುವ ವಿಸ್ಮಯಕಾರಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Written by - Chetana Devarmani | Last Updated : Oct 9, 2024, 07:16 PM IST
    • ಭೂಮಿ ಮನುಷ್ಯರಂತೆ ಉಸಿರಾಡುತ್ತದೆಯೇ?
    • ಭೂಮಿ ಉಸಿರಾಡುವುದನ್ನು ನೋಡಿದ್ದೀರಾ?
    • ಭೂಮಿಯು ಉಸಿರಾಟದ ವಿಡಿಯೋ ವೈರಲ್
ಭೂಮಿ ಉಸಿರಾಡುವುದನ್ನು ನೋಡಿದ್ದೀರಾ? ಮಿಸ್‌ ಮಾಡದೆ ಒಮ್ಮೆ ವಿಡಿಯೋ ನೋಡಿ title=

Earth Breathing Viral Video : ಭೂಮಿ ಉಸಿರಾಡುವ ವಿಸ್ಮಯಕಾರಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲವು ಸೆಕೆಂಡುಗಳ ಈ ವಿಡಿಯೋ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

ನಾವು ವಾಸಿಸುವ ಭೂಮಿಯನ್ನು ತಾಯಿಯಂತೆ ಪರಿಗಣಿಸುತ್ತೇವೆ. ನಾವು ಬದುಕಲು ಬೇಕಾದ ಪ್ರತಿಯೊಂದನ್ನು ಭೂಮಿ ನಮಗೆ ನೀಡುತ್ತದೆ. ಆದ್ದರಿಂದ ಭೂಮಿಯನ್ನು ದೇವರು ಎಂದು ಪೂಜಿಸಲಾಗುತ್ತದೆ. ನಮ್ಮ ಸುಂದರವಾದ ಈ ಭೂಮಿ ಉಸಿರಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? 

ಇದನ್ನೂ ಓದಿ: Viral video: ದಾಹದಿಂದ ಬಂದ ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ..! ಮನುಷ್ಯನ ಸಹಾಯ ಮೆಚ್ಚಿ ದೈತ್ಯ ಸರ್ಪ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ

ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ. ಅದು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಸುತ್ತುತ್ತದೆ ಎಂಬ ಸತ್ಯ ಎಲ್ಲರಿಗೂ ತಿಳಿದಿರಬಹುದು. ಆದರೆ ಭೂಮಿಯು ಉಸಿರಾಡಬಹುದೇ? ವಂಡರ್ ಆಫ್ ಸೈನ್ಸ್ ಹೆಸರಿನ ಎಕ್ಸ್ (ಟ್ವಿಟ್ಟರ್) ಖಾತೆಯಿಂದ ಹಂಚಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

 

 

ಈ ವಿಡಿಯೋದಲ್ಲಿ ಭೂಮಿಯು ಉಸಿರಾಡುತ್ತಿರುವಂತೆ ತೋರುತ್ತದೆ. ಹಸಿರು ಕಾಡಿನ ಮಧ್ಯೆ ಹಲವಾರು ಮರಗಳಿವೆ. ಮರದ ಕೆಳಗೆ ಇರುವ ಭೂಮಿ ಒಮ್ಮೆ ಮೇಲೆ ಮತ್ತು ಕೆಳಗೆ ಚಲಿಸುತ್ತಿದೆ. ಮನುಚ್ಯರು ಉಸಿರಾಡುವಂತೆಯೇ ಭೂಮಿ ಉಸಿರಾಟ ಕಾಣುತ್ತಿದೆ.  'ಭೂಮಿಯು ಉಸಿರಾಡುತ್ತಿರುವಂತೆ ಭಾಸವಾಗುತ್ತಿದೆ.' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. 

ವಾಸ್ತವವಾಗಿ, ಈ ವೀಡಿಯೊದಲ್ಲಿ ಭೂಮಿಯು ಹಿಗ್ಗುವಿಕೆ ಮತ್ತು ಕುಗ್ಗುವಿಕೆಯನ್ನು ಕಾಣಬಹುದು. ಕಾಡಿನಲ್ಲಿ ಬಲವಾದ ಗಾಳಿ ಬೀಸುತ್ತಿದೆ. ಭೂಮಿಯು ನೀರಿನಿಂದ ಒದ್ದೆಯಾಗುತ್ತಿದೆ. ಮರಗಳ ಬೇರುಗಳು ಸಡಿಲಗೊಂಡು ಬುಡಸಮೇತ ಬೀಳುವ ಮುನ್ನ ನಡೆದ ಪ್ರಕ್ರಿಯೆ ಇದಾಗಿದೆ. ಮರಗಳ ಬೇರುಗಳು ಮಣ್ಣಿನೊಂದಿಗೆ ಚಾಚಿಕೊಂಡಿರುತ್ತವೆ. ಬೇರುಗಳ ಮಣ್ಣಿನಿಂದ ಸಡಿಲಗೊಂಡು ಮೇಲೆಳುವಾಗ ಭೂಮಿಯು ಉಸಿರಾಡುತ್ತಿರುವಂತೆ ಕಾಣುತ್ತದೆ. ವೀಡಿಯೋಗೆ ಪ್ರತಿಕ್ರಿಯಿಸಿದ ಜನರು, ಪ್ರಕೃತಿ ನಿಜವಾಗಿಯೂ ಅದ್ಭುತವಾಗಿದೆ ಎಂದು ಹೇಳಿದ್ದಾರೆ.  

ಇದನ್ನೂ ಓದಿ: Viral News: ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡ ಹಾವು! ಕತ್ತು ಹಿಸುಕಿಕೊಂಡ ಆಘಾತಕಾರಿ ಫೋಟೋ ವೈರಲ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News