ದಿನಭವಿಷ್ಯ 15-10-2024: ಮಂಗಳವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟ

Today Horoscope 15th October 2024: ಮಂಗಳವಾರದ ಈ ದಿನ ಪೂ.ಭಾ. ನಕ್ಷತ್ರ, ವೃದ್ಧಿ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 15, 2024, 07:29 AM IST
  • ಮಂಗಳವಾರದ ಈ ದಿನ ತ್ರಯೋದಶಿ ತಿಥಿ
  • ಪೂ.ಭಾ. ನಕ್ಷತ್ರ, ವೃದ್ಧಿ ಯೋಗ
  • ಇಂದಿನ ದ್ವಾದಶ ರಾಶಿಗಳ ಫಲ ಹೇಗಿದೆ...
ದಿನಭವಿಷ್ಯ 15-10-2024:  ಮಂಗಳವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟ  title=

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಂಗಳವಾರದ ಈ ದಿನ ಪೂ.ಭಾ. ನಕ್ಷತ್ರ, ವೃದ್ಧಿ ಯೋಗ, ಕೌಲವ ಕರಣ ಎಲ್ಲಾ 12 ರಾಶಿಯವರಿಗೆ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಕೈಗಾರಿಕೋದ್ಯಮಿಗಳಿಗೆ ಪ್ರಗತಿಯ ಹೊಸ ಹಾದಿ ತೆರೆಯಲಿದೆ. ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರಿಗೆ ಶುಭ ದಿನ. ಸಂಪತ್ತು ವೃದ್ಧಿಯಾಗುವ ಸಾಧ್ಯತೆ ಇದೆ. ನಿಮ್ಮ ದೀರ್ಘಕಾಲದ ಕನಸಿಗೆ ವೇಗ ದೊರೆಯುವ ಸಕಾಲವಿದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಪ್ರಮುಖ ಯೋಜನೆಗಳತ್ತ ಗಮನಹರಿಸಿ. ಯಾವುದೇ ವಿಚಾರದಲ್ಲಿ ಸ್ಪಷ್ಟ ಸಂವಹನಕ್ಕೆ ಆದ್ಯತೆ ನೀಡಿ, ಇಲ್ಲವೇ ಭಿನ್ನಾಭಿಪ್ರಾಯಗಳು ಸಂಬಂಧಗಳ ಅಂತರವನ್ನು ಹೆಚ್ಚಿಸಬಹುದು. ಕೆಲವು ವಿಚಾರದಲ್ಲಿ ಸೂಕ್ಷ್ಮವಾಗಿರುವುದನ್ನು ಪರಿಗಣಿಸಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಯಾವುದೇ ರೀತಿಯ ಹೂಡಿಕೆಗಳಲ್ಲಿ ಕೈ ಹಾಕುವ ಮೊದಲು ಸಂಬಂಧಿತ ಕ್ಷೇತ್ರ ತಜ್ಞರ ಸಲಹೆ ಸೂಚನೆಗಳನ್ನು ಅನುಸರಿಸಿ. ವಸ್ತು ನಿಷ್ಠತೆಯಿಂದ ಅವುಗಳನ್ನು ಮೌಲ್ಯಮಾಪನ ಮಾಡಿ. ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆಯಲು ಯಾವುದೇ ಹಿಂಜರಿಕೆ ಬೇಡ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವುದು ನಿಮಗೆ ಸಂತೋಷದ ಮರೆಯಲಾಗದ ಸಂತೋಷವನ್ನು ತರಲಿದೆ. ವ್ಯಾಪಾರಸ್ಥರಿಗೆ ದಿನವು ಲಾಭದಾಯಕವೆಂದು ಸಾಬೀತುಪಡಿಸಬಹುದು. ಆದಾಗ್ಯೂ, ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಹೆಚ್ಚು ಪ್ರಯೋಜನ. 

ಇದನ್ನೂ ಓದಿ- ಮಂಗಳ ಗೋಚಾರ: ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಹಣವೋ ಹಣ, ಎಲ್ಲೆಡೆ ಕೀರ್ತಿ ಯಶಸ್ಸು

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಎಲೆಕ್ಟ್ರಾನಿಕ್ ಉಪಕರಣಗಳನ್ನು ಶಾಪಿಂಗ್ ಮಾಡಲು ಇದು ಉತ್ತಮ ದಿನ. ನಿಮ್ಮ ಮಕ್ಕಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತದೆ. ಮನೆಯ ಹಿರಿಯರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಪದಬಳಕೆ ಮಾಡುವುದು ಒಳ್ಳೆಯದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ವೃತ್ತಿ ಬದುಕಿನಲ್ಲಿ ಶುಭ ಫಲಗಳನ್ನು ಪಡೆಯುವಿರಿ. ಆರೋಗ್ಯದ ದೃಷ್ಟಿಯಿಂದ ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ. ವ್ಯಾಪಾರಸ್ಥರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮಗಿಂದು ಹೊಸ ಹೊಸ ಅವಕಾಶಗಳು ಲಭ್ಯವಾಗಲಿದೆ. ಅತಿ ಸೂಕ್ಷ್ಮ ಜನರೊಂದಿಗೆ ವ್ಯವಹರಿಸುವಾಗ ತುಂಬಾ ಜಾಗರೂಕರಾಗಿರಿ. ತರಾತುರಿಯಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೆ ಪರಿಸ್ಥಿತಿಯನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರುವತ್ತ ಗಮನಹರಿಸಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಮಾನಸಿಕವಾಗಿ ನೀವು ಎಷ್ಟೇ ದುರ್ಬಲ ಎಂದು ಎದುರಿನವರಿಗೆ ಅನಿಸಿದರೂ ನಿಮ್ಮ ಮನಸ್ಥೈರ್ಯದ ಬಗ್ಗೆ ನಿಮಗೆ ನಂಬಿಕೆ ಇರಲಿ. ಕೆಲವು ವಿಚಾರಗಳಲ್ಲಿ ಬುದ್ದಿವಂತಿಕೆಯಿಂದ ವರ್ತಿಸುವುದರಿಂದ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ಈ ದಿಕ್ಕಿನಲ್ಲಿ 'ಅಡುಗೆ ಒಲೆ' ಇದ್ದರೆ ಆದಾಯಕ್ಕಿಂತ ಖರ್ಚೆ ಹೆಚ್ಚು, ಮುಗಿಯುವುದೇ ಇಲ್ಲ ಹಣಕಾಸಿನ ತೊಂದರೆ...! 

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಮನೆಗೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಲು ಯೋಜಿಸುತ್ತಿದ್ದರೆ ಇಂದು ಕಾಲ ಕೂಡಿಬರಲಿದೆ. ಮಕ್ಕಳೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ಮನೆಯ ಹಿರಿಯರೊಂದಿಗೆ ವ್ಯವಹರಿಸುವಾಗ ತಾಳ್ಮೆಯನ್ನು ಕಾಪಾಡಿಕೊಳ್ಳಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಆತ್ಮವಿಶ್ವಾಸ ಬಲವಾಗಿರಲಿದ್ದು ಕೆಲಸದಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ಬಿಸಿನೆಸ್ ಸಂಬಂಧಿತ ಪ್ರವಾಸಗಳು ಫಲಪ್ರಧವಾಗಿರಲಿದೆ. ಆದರೆ, ಹಣಕಾಸಿನ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ಸ್ವಲ್ಪ ಸಮಯ ತೆಗೆದುಕೊಳ್ಳಿ. ಆತುರದ ನಿರ್ಧಾರಗಳನ್ನು ತಪ್ಪಿಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನೀವಂದುಕೊಂಡಿದ್ದನ್ನೆಲ್ಲಾ ಸಾಧಿಸಲು ನಿಮಗೆ ಸಾಧ್ಯವಾಗದಿರಬಹುದು. ಇದರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು. ಇದನ್ನು ತಪ್ಪಿಸಲು ಯೋಜಿಸಿ ಕಾರ್ಯ ನಿರ್ವಹಿಸುವುದು ಒಳ್ಳೆಯದು. ಯಾವುದೇ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಹಿರಿಯರೊಂದಿಗೆ ಸಮಾಲೋಚನೆ ನಡೆಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಹಿಂದೆ ಮಾಡಿದ ತಪ್ಪುಗಳು ನಿಮ್ಮ ಜೀವನದಲ್ಲಿ ಮರುಕಳಿಸಬಹುದು. ಅದನ್ನೇ ಪುನರಾವರ್ತಿಸಿದರೆ ಜೀವನದಲ್ಲಿ ಸಂತೋಷಕ್ಕೆ ಧಕ್ಕೆ ಬರಬಹುದು. ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಿರುವುದಿಲ್ಲ. ಕಷ್ಟಪಡದೆ ಯಾವುದೂ ದೊರೆಯುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News