ನವದೆಹಲಿ: ಕನ್ನಡಿಗ ಕ್ರಿಕೆಟರ್ ಕೆ.ಎಲ್.ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ನಡುವೆ ಏನೋ ಪ್ರೀತಿಯ ಗುಸು ಗುಸು ನಡೆಯುತ್ತಿರುವುದು ಹಲವು ತಿಂಗಳಿಂದ ಸುದ್ದಿಯಾಗುತ್ತಲೇ ಇದೆ.
ಇದಕ್ಕೆ ಪೂರಕವಾಗಿ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಒಬ್ಬರ ಪೋಸ್ಟ್ ಗೆ ಲೈಕ್ ಮಾಡುವುದು ಕಾಮೆಂಟ್ ಮಾಡುವುದು ಹಾಗೆ ನಡೆದಿದೆ. ಇದಕ್ಕೆ ಇತ್ತೀಚಿಗಿನ ಪೋಸ್ಟ್ ನ ಉದಾಹರಣೆಯನ್ನು ನೀಡುವುದಾದಲ್ಲಿ ಕ್ಯಾರಂಟೈನ್ ಸಂದರ್ಭದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅತಿಯಾ ಶೆಟ್ಟಿ ಪೋಸ್ಟ್ ಗೆ ಕೆ.ಎಲ್ ರಾಹುಲ್ ನೈಸ್ ಶರ್ಟ್ ಎಂದು ಕಾಮೆಂಟ್ ಮಾಡಿದ್ದರು.ಇದು ಇನ್ನಷ್ಟು ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ನಡುವಿನ ಸಂಬಂಧದ ವಿಚಾರವಾಗಿ ಊಹಾಪೋಹಗಳಿಗೆ ಕಾರಣವಾಗಿತ್ತು.
ಇಂದು ಕೆ.ಎಲ್ ರಾಹುಲ್ ಹುಟ್ಟು ಹಬ್ಬವಿರುವ ಹಿನ್ನಲೆಯಲ್ಲಿ ಈಗ ಅಥಿಯಾ ಶೆಟ್ಟಿ ಇದೇ ಸರಿಯಾಯದ ಸಮಯವೆಂದು ಕೆ.ಎಲ್ ರಾಹುಲ್ ಜೊತೆಗಿನ ಪೋಟೋವೊಂದನ್ನು ಶೇರ್ ಮಾಡಿಕೊಂಡು "ಜನ್ಮದಿನದ ಶುಭಾಶಯಗಳು, ನನ್ನ ವ್ಯಕ್ತಿಗೆ," ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅಥಿಯಾ ಶೀರ್ಷಿಕೆಯಲ್ಲಿ ಬರೆದು ಹೃದಯದ ಎಮೋಜಿಯನ್ನು ಸೇರಿಸಿದ್ದಾರೆ. ಕೆ.ಎಲ್.ರಾಹುಲ್ ಅಥಿಯಾ ಅವರ ಶುಭಾಶಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಅವರ ಪ್ರತಿಕ್ರಿಯೆಗೆ ಈಗ ಚಿತ್ರ ಹಾಗೂ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಕಳೆದ ವರ್ಷ ಅಥಿಯಾ ಮತ್ತು ಕೆ.ಎಲ್. ರಾಹುಲ್ ಅವರ ಸಂಬಂಧದ ಬಗೆಗಿನ ವದಂತಿಗಳು ಹೊರಬಂದವು, ಆಕೆಗೆ ಕೆ.ಎಲ್ ರಾಹುಲ್ ಹುಟ್ಟುಹಬ್ಬದ ಶುಭಾಶಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಕ್ರಿಕೆಟಿಗ ಅಥಿಯಾ ಜೊತೆಗೆ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದು ತುಂಬಾ ವೈರಲ್ ಆಗಿತ್ತು. ಅದರಲ್ಲಿ ಕೆ.ಎಲ್.ರಾಹುಲ್ ಸುನೀಲ್ ಶೆಟ್ಟಿ ಅವರ ಚಿತ್ರ ಹೇರಾ ಫೆರಿ ಚಿತ್ರದ "ಹಲೋ, ದೇವಿ ಪ್ರಸಾದ್?" ಡೈಲಾಗ್ ನ್ನೇ ಶೀರ್ಷಿಕೆಯನ್ನಾಗಿ ಬರೆದುಕೊಂಡಿದ್ದರು.
ಸುನಿಯೆಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದು, 2015 ರ ಹೀರೋ ಚಿತ್ರದ ಮೂಲಕ ಸೂರಜ್ ಪಾಂಚೋಲಿ ಜೊತೆಯಾಗಿ ನಟಿಸಿದ್ದು, ಇದು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿದೆ. ಅವರು ಮುಬಾರಕನ್ ನಲ್ಲಿಯೂ ಸಹ ಕಾಣಿಸಿಕೊಂಡರು ಮತ್ತು ಕೊನೆಯದಾಗಿ ಮೋಟಿಚೂರ್ ಚಕ್ನಾಚೂರ್ನಲ್ಲಿ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಕಾಣಿಸಿಕೊಂಡರು.