Viral Video: ಭಿಕ್ಷೆ ನೀಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿದ ಮಂಗಳಮುಖಿ; ವಿಡಿಯೋ ಇಲ್ಲಿದೆ ನೋಡಿ

Viral Video: ಮೆಟ್ರೋದಲ್ಲಿ ಭಿಕ್ಷೆ ಬೇಡುವಾಗ ಹಣ ಕೊಡಲು ನಿರಾಕರಿಸಿದಕ್ಕೆ ಪ್ರಯಾಣಿಕನೊಬ್ಬನಿಗೆ ಮಂಗಳಮುಖಿ ಅಸಭ್ಯವಾಗಿ ಬೈದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ನೂರಾರು ಪ್ರಯಾಣಿಕರ ಮುಂದೆಯೇ ಬಟ್ಟೆ ಎತ್ತಿ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ. ಮಂಗಳಮುಖಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Written by - Puttaraj K Alur | Last Updated : Nov 13, 2024, 07:44 PM IST
  • ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
  • ಹಣ ನೀಡಲು ನಿರಾಕರಿಸಿದ ಪ್ರಯಾಣಿಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿ
  • ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ
Viral Video: ಭಿಕ್ಷೆ ನೀಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿದ ಮಂಗಳಮುಖಿ; ವಿಡಿಯೋ ಇಲ್ಲಿದೆ ನೋಡಿ   title=
ಅಸಭ್ಯವಾಗಿ ವರ್ತಿಸಿದ ಮಂಗಳಮುಖಿ!

Delhi Metro Viral Video: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಲ್ಲಿ ನಡೆಯುವ ವಿವಿಧ ರೀತಿಯ ಅವಾಂತಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಮತ್ತೊಂದು ವಿಡಿಯೋ ಸಖತ್ ವೈರಲ್‌ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿದೆ. ದೆಹಲಿ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಾ ಬರುವಾಗ ಹಣ ನೀಡಲು ನಿರಾಕರಿಸಿದ ಪ್ರಯಾಣಿಕನೊಂದಿಗೆ ಮಂಗಳಮುಖಿ ಅಸಭ್ಯವಾಗಿ ನಡೆದಿದುಕೊಂಡಿದ್ದು, ಆತನಿಗೆ ಖಾಸಗಿ ಅಂಗ ತೋರಿಸಿ ನಿಂದಿಸಿದ್ದಾಳೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇತ್ತೀಚೆಗೆ ಮಂಗಳಮುಖಿಯರು ಸಾರ್ವಜನಿಕ ಸ್ಥಳಗಳಲ್ಲಿಯೇ ಜನರೊಂದಿಗೆ ಕಿರಿಕ್‌ ಮಾಡಿಕೊಳ್ಳುತ್ತಿದ್ದಾರೆ. ಅನೇಕರು ಜನರೊಂದಿಗೆ ಸೌಜನ್ಯಯುತವಾಗಿ ವರ್ತಿಸಿದರೆ, ಇನ್ನೂ ಕೆಲವರು ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಾ ಕಿರಿಕ್‌ ಮಾಡುತ್ತಾರೆ. ಇಂತಹ ಹಲವಾರು ವಿಡಿಯೋಗಳು ಈಗಾಗಲೇ ಬೆಳಕಿಗೆ ಬಂದಿವೆ. 

ಇದನ್ನೂ ಓದಿ: ಅರೇ, ಬ್ರೋ.. ಅದು ಮಾರುತಿ ಕಾರ್‌, ಲಾರಿ ಅಲ್ಲ..! ʼIndia is not for beginners...ʼ ವಿಡಿಯೋ ನೋಡಿ..   

ಮೆಟ್ರೋದಲ್ಲಿ ಭಿಕ್ಷೆ ಬೇಡುವಾಗ ಹಣ ಕೊಡಲು ನಿರಾಕರಿಸಿದಕ್ಕೆ ಪ್ರಯಾಣಿಕನೊಬ್ಬನಿಗೆ ಮಂಗಳಮುಖಿ ಅಸಭ್ಯವಾಗಿ ಬೈದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ನೂರಾರು ಪ್ರಯಾಣಿಕರ ಮುಂದೆಯೇ ಬಟ್ಟೆ ಎತ್ತಿ ತನ್ನ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ. ಮಂಗಳಮುಖಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತ ವಿಡಿಯೋವನ್ನು @gharkekalesh ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಮಂಗಳಮುಖಿಯ ಅಸಭ್ಯ ವರ್ತನೆಗೆ ಕಿಡಿಕಾರಿದ್ದಾರೆ. ʼಮೊದಲು ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕುʼ ಅಂತಾ ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ʼಬಸ್‌, ರೈಲು, ಮೆಟ್ರೋ ಎಲ್ಲೆಲ್ಲೂ ಇವರದ್ದೇ ಹಾವಳಿಯಾಗಿದೆ. ಇನ್ಮುಂದೆ ಮಂಗಳಮುಖಿಯರು ವಿಮಾನದಲ್ಲಿ ಸಹ ಭಿಕ್ಷೆ ಬೇಡುತ್ತಾ ಪ್ರಯಾಣಿಕರೊಂದಿಗೆ ಈ ರೀತಿ ನಡೆದುಕೊಳ್ಳುತ್ತಾರೆʼ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ʼಗೂಂಡಾಗಿರಿ ಮಾಡಿ ಈ ಭಿಕ್ಷೆ ಬೇಡುವ ಅವಶ್ಯಕತೆಯಿದೆಯೇʼ ಅಂತಾ ಮತ್ತೊಬ್ಬ ಬಳಕೆದಾರ ಕಾಮೆಂಟ್‌ ಮಾಡಿ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಅಪರೂಪದ ʼಸ್ವರ್ಣ ನಾಗʼ ಪತ್ತೆ..! ಭಾರತದಲ್ಲಿ ಈ ʼಗೋಲ್ಡನ್ ಕೋಬ್ರಾʼ ಇರುವುದೇ ಶಾಕಿಂಗ್‌.. ಏಕೆ ಗೊತ್ತೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News