ಮಹಿಳೆಯರನ್ನು ನಿಮ್ಮ ಹೂಡಿಕೆ ಪಾಲುದಾರರನ್ನಾಗಿ ಮಾಡಿ ಪ್ರತಿ ಹಂತದಲ್ಲೂ ಪಡೆಯಿರಿ ಲಾಭ

ಮನೆ ಖರೀದಿಸಲು ಮಹಿಳೆ ಹೆಸರಿನಲ್ಲಿ ಬ್ಯಾಂಕಿನಿಂದ ಗೃಹ ಸಾಲವನ್ನು ತೆಗೆದುಕೊಂಡರೆ ಪುರುಷರಿಗಿಂತ ಅಗ್ಗದ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.

Written by - Yashaswini V | Last Updated : Apr 21, 2020, 11:01 AM IST
ಮಹಿಳೆಯರನ್ನು ನಿಮ್ಮ ಹೂಡಿಕೆ ಪಾಲುದಾರರನ್ನಾಗಿ ಮಾಡಿ ಪ್ರತಿ ಹಂತದಲ್ಲೂ ಪಡೆಯಿರಿ ಲಾಭ title=

ನವದೆಹಲಿ : ಹೆಚ್ಚಿನ ಜನರು ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾರೆ. ಹೂಡಿಕೆಯೊಂದಿಗೆ ಅವರು ತಮ್ಮ ಕನಸುಗಳನ್ನು ಈಡೇರಿಸುತ್ತಾರೆ. ಈ ಹೂಡಿಕೆಯಲ್ಲಿ ನಿಮ್ಮ ಜೀವನ ಸಂಗಾತಿ ಅಥವಾ ಹೆಂಡತಿಯನ್ನು ಪಾಲುದಾರನನ್ನಾಗಿ ಮಾಡಿದರೆ ಅದು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ. ಏಕೆಂದರೆ ಸರ್ಕಾರವು ಮಹಿಳೆಯರಿಗೆ ಹೂಡಿಕೆಯ ಮೇಲೆ ಅನೇಕ ರೀತಿಯ ರಿಯಾಯಿತಿಗಳನ್ನು ನೀಡುತ್ತದೆ. ಮನೆ ಖರೀದಿಸುವುದರಿಂದ ಹಿಡಿದು ಬ್ಯಾಂಕ್ ಖಾತೆಯವರೆಗೆ ಮಹಿಳೆಯರಿಗೆ ವಿಭಿನ್ನ ಲಾಭಗಳು ಸಿಗುತ್ತವೆ.

ಮಹಿಳೆಯರಿಗೆ ಸಿಗುವ ಅಂತಹ ಲಾಭಗಳ ಬಗ್ಗೆ ಈ ಲೇಖನದಲ್ಲಿ ಹೇಳುತ್ತಿದ್ದೇವೆ.

ಆಸ್ತಿ ತೆರಿಗೆ ವಿನಾಯಿತಿ:
ದೇಶದ ಅನೇಕ ಪುರಸಭೆ ಸಂಸ್ಥೆಗಳು ಮಹಿಳೆಯರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುತ್ತವೆ. ಆದಾಗ್ಯೂ ಈ ವಿನಾಯಿತಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು.

ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ:
ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವುದರ ಜೊತೆಗೆ ಮಹಿಳೆಯರಿಗೆ ಸ್ಟಾಂಪ್ ಡ್ಯೂಟಿಯಲ್ಲಿ ವಿನಾಯಿತಿ ಸಿಗುತ್ತದೆ. ಸಾಲಗಳು ಕಡಿಮೆ ಬಡ್ಡಿದರದಲ್ಲಿ ಲಭ್ಯವಿರುತ್ತದೆ ಮತ್ತು ಮನೆ ಕೊಳ್ಳುವಾಗ ಸಬ್ಸಿಡಿ ಕೂಡ ಲಭ್ಯವಿದೆ. ಪುರುಷರಿಗೆ ಸ್ಟಾಂಪ್ ಡ್ಯೂಟಿ ದರವು 6 ಪ್ರತಿಶತವಾಗಿದ್ದರೆ ಮಹಿಳೆಯರು ಕೇವಲ 4 ಪ್ರತಿಶತವನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಸಿಹಿ ಸುದ್ದಿ!

ಕಡಿಮೆ ಬಡ್ಡಿದರದಲ್ಲಿ ಸಾಲ:
ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತವೆ. ಮನೆ ಖರೀದಿಸಲು ಮಹಿಳೆ ಬ್ಯಾಂಕಿನಿಂದ ಗೃಹ ಸಾಲವನ್ನು ತೆಗೆದುಕೊಂಡರೆ ಪುರುಷರಿಗಿಂತ ಅಗ್ಗದ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.

ಗೃಹ ಸಾಲ ರಿಯಾಯಿತಿ:
ಮಹಿಳೆ ಮನೆ ಖರೀದಿಸಿದರೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಯೋಜನೆಯಡಿ ಆಕೆಗೆ ಸಬ್ಸಿಡಿಯ ಲಾಭವೂ ಸಿಗುತ್ತದೆ.
 

Trending News